Sunday, December 22, 2024

Latest Posts

ಮನೆಯಲ್ಲೇ ಸಿಂಪಲ್ ಮತ್ತು ರುಚಿಯಾಗಿ ತಯಾರಿಸಬಹುದು ಮೊಸರೊಡೆ (ದಹಿ ವಡಾ)..

- Advertisement -

ಯಾವಾಗಲೂ ಹೊಟೇಲ್‌ಗೆ ಹೋಗಿ, ಸ್ನ್ಯಾಕ್ಸ್ ತಿಂದು ತಿಂದು ಬೋರ್ ಬಂದಿರತ್ತೆ. ಹಾಗಾಗಿ ನೀವು ಮನೆಯಲ್ಲೇ ನಿಮಗೆ ಬೇಕಾದ ಸ್ನ್ಯಾಕ್ಸ್ ಮಾಡಿ ತಿನ್ಬೇಕು ಅನ್ನಿಸಿದಾಗ, ಈಸಿಯಾಗಿ ಮಾಡಬಹುದಾದ ರೆಸಿಪಿಯನ್ನ ನಾವು ನಿಮಗೆ ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: ಒಂದು ಕಪ್ ಉದ್ದಿನ ಬೇಳೆ, ಅಗತ್ಯಕ್ಕೆ ತಕ್ಕಷ್ಟು ಖಾರದ ಪುಡಿ, ಹುರಿದ ಜೀರಿಗೆ, ಸಕ್ಕರೆ ಪುಡಿ, ಕೆಂಪುಪ್ಪು, ಇಂಗು, ಹುಣಸೆ ಚಟ್ನಿ, ಪುದೀನಾ ಚಟ್ನಿ, ಮೊಸರು, ಉಪ್ಪು, ವಡೆ ಕರೆಯಲು ಎಣ್ಣೆ.

ಸಿಂಪಲ್ ಆಗಿ ಮಾಡಬಹುದಾದ ತಿಂಡಿ ಈ ಖಾರಾ ಪೊಂಗಲ್‌

ಉದ್ದಿನ ಬೇಳೆಯನ್ನು 7 ಗಂಟೆ ನೆನೆಯಿಡಿ.. ನಂತರ ಇಂಗು ಉಪ್ಪು ಹಾಕಿ, ರುಬ್ಬಿಕೊಳ್ಳಿ. ಇದನ್ನು ಎಣ್ಣೆಯಲ್ಲಿ ಕರೆದರೆ ವಡೆ ರೆಡಿ. ಈಗ ಒಂದು ಬೌಲ್‌ನಲ್ಲಿ ಕೋಲ್ಡ್ ಮೊಸರು, ಸಕ್ಕರೆ ಪುಡಿ, ಜೀರಿಗೆ, ಕೆಂಪುಪ್ಪು, ಕೊಂಚ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ನೀರಿನಲ್ಲಿ ವಡೆಯನ್ನು 5 ನಿಮಿಷ ನೆನೆಯಿಡಿ. ನಂತರ ವಡೆ ಹಿಂಡಿ ನೀರು ತೆಗೆದು ಒಂದು ಚಿಕ್ಕ ಪ್ಲೇಟ್‌ಗೆ ಹಾಕಿ. ಇದರ ಮೇಲೆ ಮೊಸರು, ಖಾರದ ಪುಡಿ, ಹುಣಸೆ ಚಟ್ನಿ, ಪುದೀನಾ ಚಟ್ನಿ ಹಾಕಿದರೆ, ಮೊಸರೊಡೆ ರೆಡಿ.

- Advertisement -

Latest Posts

Don't Miss