Monday, April 21, 2025

Latest Posts

“ಬಡವ ರಾಸ್ಕಲ್” ನಂತರ ಧನಂಜಯ- ಅಮೃತ ಅಯ್ಯಂಗಾರ್ ಜೋಡಿಯ “ಹೊಯ್ಸಳ”

- Advertisement -

 

ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ, ಡಾಲಿ ಧನಂಜಯ ನಾಯಕರಾಗಿ ನಟಿಸುತ್ತಿರುವ “ಹೊಯ್ಸಳ” ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.

ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಶ್ರೀ ಮಂಜುನಾಥ್ “ಕ್ಲಾಪ್” ಮಾಡಿದರು. ನಿರ್ಮಾಪಕ ಕಾರ್ತಿಕ್ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮಿ “ಕ್ಯಾಮೆರಾ” ಚಾಲನೆ ಮಾಡಿದರು. ನಿರ್ದೇಶಕರಾದ ಸಂತೋಷ್ ಆನಂದರಾಮ್, ಡಾ||ಸೂರಿ, ಯಶವಂತ್, ಡಾ||ರಮೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ವಿಜಯ್ ಎನ್ ಅವರು ಕಥೆ, ಚಿತ್ರಕಥೆ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೈಸೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ 75 ದಿನಗಳ ಚಿತ್ರೀಕರಣ ನಡೆಯಲಿದೆ.

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣವಿದೆ.
ಸಂಕಲನ ದೀಪು ಎಸ್ ಕುಮಾರ್. ಸಂಭಾಷಣೆ ಮಾಸ್ತಿ ಅವರದು. ಚಂಪಕಧಾಮ ಬಾಬು ಹಾಗೂ ಕುಮಾರ್ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

“ಬಡವ ರಾಸ್ಕಲ್” ನಂತರ ಧನಂಜಯ ಹಾಗೂ ಅಮೃತ ಅಯ್ಯಂಗಾರ್ ಜೋಡಿಯಲ್ಲಿ ಈ ಚಿತ್ರ ಮೂಡಿಬರಲಿದೆ. ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

- Advertisement -

Latest Posts

Don't Miss