Dharshan : ಸುಮಲತಾಗಾಗಿ ದರ್ಶನ್ ಮಾಡಿದ್ದೇನು..?!

Film News : ನಿನ್ನೆಯಷ್ಟೇ ಸುಮಲತಾ ಅಂಬರೀಷ್ ಸಾಮಾಜಿಕ ಜಾಲತಾಣದಲ್ಲಿ ಮಂಡ್ಯ ಜನತೆಗೆ ವಿಶೇಷ ಸಂದೇಶ ನೀಡಿದ್ದರು. ಸಂದೇಶದಂತೆ ಇಂದು ಸಂಸದೆ ಸುಮಲತಾ ತನ್ನ ನಿಲುವನ್ನು ಮಂಡ್ಯ ಜನತೆಯ ಮುಂದಿಟ್ಟರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಅಭಿಷೇಕ್ ಅಂಬರೀಷ್ ಸಾಥ್ ಕೂಡಾ ನೀಡಿದ್ರು ಇನ್ನು ಇದೇ ವೇಳೆ ದೇವರ ಪೂಜೆಯ ಬಳಿಕ ತನ್ನ 5 ವರ್ಷದ ಕಾರ್ಯ ವೈಖರಿಯನ್ನು ಸಾಕ್ಷ್ಯ ಚಿತ್ರದ ಮೂಲಕ ಮಂಡ್ಯ ಜನತೆ ಮುಂದಿಟ್ಟರು. ಇನ್ನು ಅಭಿಮಾನಿಗಳ ಸಮ್ಮುಖದಲ್ಲಿ ತನ್ನ ನಿರ್ಧಾರ ಗಟ್ಟಿ ಮನಸ್ಸಿನಿಂದ ಹೇಳಿಯೇ ಬಿಟ್ಟರು ಆದ್ರೆ ಯಾರೂ ಊಹಿಸದ ನಿರ್ಧಾರ ಸುಮಕ್ಕ ಜನತೆ ಮುಂದಿಟ್ಟಿದ್ದು ನಿಜಕ್ಕೂ ಆಶ್ಚರ್ಯವಾಗಿತ್ತು. ಇನ್ನು ಇದೇ ವೇಳೆ ದಚ್ಚು ಅಮ್ಮನಿಗಾಗಿ ಒಂದು ಕೆಲಸ ಮಾಡಿದ್ದಾರೆ ಅದನ್ನು ಅವರೇ ಹೇಳಿದ್ದಾರೆ.

ಹೌದು ಡೆವಿಲ್ ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಕೈಗೆ ಪೆಟ್ಟಾಗಿದ್ದು ಈಗಾಗಲೇ ಸರ್ಜರಿ ಕೂಡಾ ಮಾಡಬೇಕಾಗಿತ್ತು ಆದ್ರೆ ದರ್ಶನ್ ಸುಮಲತಾ ಗೋಸ್ಕರ ಈ ಒಂದು ಕೆಲಸ ಮಾಡಿದ್ದಾರೆ.
ಹೌದು ದರ್ಶನ್ ಮಂಡ್ಯದಲ್ಲಿ ಸುಮಲತಾ ಸಾರ್ವಜನಿಕ ಸಭೆಯಲ್ಲಿ ಭಾಗಿ ಆಗಬೇಕಿತ್ತು ಈ ಕಾರಣದಿಂದಾಗಿ ಅವರು ತಮ್ಮ ಸರ್ಜರಿಯನ್ನು ಮುಂದೂಡಿದ್ದಾರೆ. ದರ್ಶನ್ ಅವರು ವೇದಿಕೆ ಏರಿ ಮಾತನಾಡಿ ನಾನು ಈಗಾಗಲೆ ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು ಆದರೆ ಅಮ್ಮನಿಗೆ ಡೇಟ್ಸ್ ಕೊಟ್ಟಿದ್ದೆ ಅದನ್ನು ಮುಗಿಸಿ ಬರ್ತೀನಿ.
ರಾತ್ರಿ ವೇಳೆಗೆ ಆಸ್ಪತ್ರೆ ಅಡ್ಮಿಟ್ ಆಗ್ತೇನೆ ನಾಳೆ ಆಪರೇಷನ್ ಮಾಡಿಸಿಕೊಳ್ಳುತ್ತೇನೆ ಎಂದು ಹೇಳಿದರು ದರ್ಶನ್ .

ನಟಿ ಶರಣ್ಯ ವಿರುದ್ಧ ಕೊ*ಲೆ ಬೆದರಿಕೆ ಆರೋಪ: ಪ್ರಕರಣ ದಾಖಲು

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಶಿವರಾಜ್‌ಕುಮಾರ್

ನಟಿ ಅನುಶ್ರೀಯೊಂದಿಗಿನ ಸಂಬಂಧದ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ನಟ ಉನ್ನಿ ಮುಕುಂದನ್

About The Author