Health Tips: ಪ್ಲಾಸ್ಟಿಕ್ ಸರ್ಜರಿ ಅಂದ ತಕ್ಷಣ ನಮ್ಮ ನೆನಪಿಗೆ ಬರೋದು,ಆ್ಯಸಿಡ್ ದಾಳಿಗೆ ಒಳಗಾದವರು. ಆದರೆ ಪ್ಲಾಸ್ಟಿಕ್ ಸರ್ಜರಿ ಬರೀ ಆ್ಯಸಿಡ್ ದಾಳಿಗೆ ಒಳಗಾದವರಿಗೆ ಅಷ್ಟೇ ಅಲ್ಲ. ಸುಟ್ಟ ಗಾಯವಾದವರಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತದೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಬೆಂಕಿಯಿಂದ ಮೈ ಕೈ ಸುಟ್ಟುಕೊಳ್ಳುತ್ತಾರೆ. ಅಂಥವರಿಗೆ ತಲೆಯಿಂದ ಕಾಲಿನವರೆಗೂ ಪ್ಲಾಸ್ಟಿಕ್ ಸರ್ಜರಿ ಮಾಡುವ ವ್ಯವಸ್ಥೆ ಇದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ಇಡೀ ದೇಹಕ್ಕೆ ಬೆಂಕಿ ತಗುಲಿದರೆ, ಬದುಕುವುದೇ ಅಸಾಧ್ಯವಾಗಿರುತ್ತದೆ. ಆದರೆ ಇಂಥ ಸ್ಥಿತಿಯಲ್ಲೂ ಬದುಕುತ್ತಾರೆಂಬ ಭರವಸೆ ಯಾರಿಗಿರುತ್ತದೆಯೋ, ಅಂಥವರಿಗೂ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ ಅಂತಾರೆ ವೈದ್ಯೆ, ಪದ್ಮಶ್ರೀ ಪುರಸ್ಕೃತೆ ಡಾ.ಪ್ರೇಮಾ ಧನರಾಜ್. ಇವರು ಕೂಡ ತಮ್ಮ ಮುಖ ಸುಟ್ಟು ಹೋದ ಕಾರಣಕ್ಕೆ, ಸರ್ಜನ್ ಆಗಿ, ಹಲವರಿಗೆ ಚಿಕಿತ್ಸೆ ನೀಡಿದ್ದಾರೆ. ಅವರ ಈ ಸಾಧನೆಗಾಗಿಯೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದು.
ಆನೆ ಕಾಲು ರೋಗ ಸೇರಿ, ಹಲವು ರೋಗಗಳಿಗೆ, ಸುಟ್ಟ ಗಾಯ, ಆ್ಯಸಿಡ್ ದಾಳಿಗೊಳಗಾದವರಿಗೆ ಸೇರಿ, ಹಲವು ಕೇಸ್‌ಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..