ನೀವು ಆಫೀಸ್ ಕೆಲಸವನ್ನೇ ಮಾಡಿ, ಮನೆ ಕೆಲಸವನ್ನೇ ಮಾಡಿ, ಇಲ್ಲಾ ಟ್ರ್ಯಾವೆಲಿಂಗ್ ಮಾಡಿ. ಹೀಗೆ ಯಾವ ಕೆಲಸ ಮಾಡಿದ್ರೂ ನೀವು ಶಕ್ತಿವಂತರಾಗಿರುವುದು ತುಂಬಾ ಮುಖ್ಯವಾಗುತ್ತದೆ. ದೇಹದಲ್ಲಿ ಶಕ್ತಿ ಇಲ್ಲಾ ಅಂದ್ರೆ ಏನು ಮಾಡಲೂ ಸಾಧ್ಯವಿಲ್ಲ. ಕೆಲವರು ಶಕ್ತಿವಂತರಾಗಲು ಮಾರುಕಟ್ಟೆಯಲ್ಲಿ ಸಿಗುವ ಕ್ಯಾಪ್ಸೂಲ್ಸ್ ಎಲ್ಲ ಟ್ರೈ ಮಾಡ್ತಾರೆ. ಆದ್ರೆ ಅದು ತುಂಬಾ ಅಪಾಯಕಾರಿ. ಅದರಿಂದ ಶಕ್ತಿ ಬರಲು ಸಾಧ್ಯವೇ ಇಲ್ಲ. ಅದು ನಿಮ್ಮ ದೇಹದ ತೂಕವನ್ನ ಅಸುರಕ್ಷಿತವಾಗಿ ಹೆಚ್ಚು ಮಾಡುತ್ತದೆ. ಕೆಲವರು ಅಂಥ ಔಷಧ ತೆಗೆದುಕೊಂಡು ಸಾವನ್ನಪ್ಪಿದ್ದಾರೆ. ಹಾಗಾದ್ರೆ ಶಕ್ತಿವಂತರಾಗಿರಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಈ ದಿಕ್ಕಿನಲ್ಲಿ ಕುಳಿತುಕೊಂಡು ಊಟ ಮಾಡಬೇಡಿ..!
ಪ್ರತಿದಿನ ತುಪ್ಪದಲ್ಲಿ ಅದ್ದಿಟ್ಟ 2 ಖರ್ಜೂರವನ್ನು ಬಿಸಿ ಹಾಲಿನೊಂದಿಗೆ ಸೇವಿಸಿದರೆ, ನಿಮ್ಮ ನಿಶ್ಯಕ್ತಿ ದೂರವಾಗುತ್ತದೆ. ಪ್ರತಿದಿನ ಒಂದು ಕ್ಯಾರೆಟ್ ತಿನ್ನುವುದರಿಂದಲೂ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಮೊಳಕೆ ಕಾಳು, ಶೇಂಗಾ ಮತ್ತು ಬೆಲ್ಲ, ಹುರಿಗಡಲೆ ಮತ್ತು ಬೆಲ್ಲ ಸೇರಿಸಿ ತಿನ್ನುವುದರಿಂದಲೂ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಅಲ್ಲದೇ ನೀವು ಶಕ್ತಿಗಾಗಿ ಸೋಯಾ ಕಾಳನ್ನ ಕೂಡ ಬಳಸಬಹುದು.
ಅರ್ಧ ಕಪ್ ಸೋಯಾಬೀನ್ ಕಾಳನ್ನ ನೆನೆಸಿಟ್ಟು, ನೀವು ದೋಸೆ ಹಿಟ್ಟು, ಇಡ್ಲಿ ಹಿಟ್ಟು ಮಾಡುವ ಸಂದರ್ಭದಲ್ಲಿ, ಅದರೊಂದಿಗೆ ರುಬ್ಬಿ, ಬಳಸಬಹುದು. ಸೋಯಾಬೀನ್ ಬಳಕೆಯಿಂದ ಶಕ್ತಿ ಬರುವುದಲ್ಲದೇ, ಆ ಪದಾರ್ಥದ ರುಚಿಯೂ ಹೆಚ್ಚುತ್ತದೆ. ಇನ್ನು ನೀವು ಸಾರು, ಪಲ್ಯಗಳಲ್ಲಿ ಸೋಯಾಬಿನ್ ಚಂಕ್ಸ್ ಕೂಡ ಬಳಸಬಹುದು. ಇನ್ನು ನೀವು ಪ್ರತಿದಿನ ಒಂದು ಚಮಚ ದನದ ತುಪ್ಪವನ್ನು ಊಟದೊಂದಿಗೆ ಸೇವಿಸುವುದರಿಂದಲೂ ನಿಶ್ಯಕ್ತಿಯಿಂದ ಪಾರಾಗಬಹುದು. ಆದ್ರೆ ತುಪ್ಪ ಬಳಕೆಯಷ್ಟೇ ನಿಮಗೆ ಶಕ್ತಿ ತಂದು ಕೊಡುತ್ತದೆ ವಿನಃ ಬೆಣ್ಣೆ ಬಳಕೆಯಲ್ಲ.
‘ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ’…!
ಬಾಳೆಹಣ್ಣಿನ ಮಿಲ್ಕ್ ಶೇಕ್ ಅಥವಾ ಸ್ಮೂತಿ ಮಾಡಿ ಕುಡಿಯುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ದೇಹದಲ್ಲಿ ನಿಶ್ಯಕ್ತಿ ಕಡಿಮೆಯಾಗುತ್ತದೆ. ನಿಮ್ಮ ದೇಹದ ತೂಕವೂ ಹೆಚ್ಚುತ್ತದೆ. ಜೊತೆಗೆ ಬೆಳಿಗ್ಗೆ ಮತ್ತು ಮಧ್ಯಾಹ್ನ ಮೊಸರಿನ ಬಳಕೆ ಖಂಡಿತ ಮಾಡಿ. ಆ ಮೊಸರು ದನದ ಹಾಲಿನಿಂದ ತಯಾರಾಗಿದ್ದರೆ ಇನ್ನೂ ಉತ್ತಮ.