ನಾವು ಧಾರ್ಮಿಕ ವಿಚಾರದ ಬಗ್ಗೆ ಮಾತನಾಡುವಾಗ, ಋಷಿ, ಮುನಿ, ಸಾಧು ಸಂತರು ಎಂದು ಎಲ್ಲರೂ ಒಂದೇ ಎನ್ನುವ ರೀತಿ ಮಾತನಾಡುತ್ತೇವೆ. ಆದ್ರೆ ಋಷಿ, ಮುನಿ ಮತ್ತು ಸಾಧುಗಳ ನಡುವೆ ವ್ಯತ್ಯಾಸವಿದೆ. ಹಾಗಾದ್ರೆ ಈ ಮೂವರ ಮಧ್ಯೆ ಇರುವ ವ್ಯತ್ಯಾಸವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಋಷಿ. ಋಷಿ ಅಂದರೆ ವೇದಗಳನ್ನು ಕಂಡು ಹಿಡಿದವರು. ವೇದವನ್ನು ಅಳವಡಿಸಿಕೊಂಡವರು. ಇವರು ಗೃಹಸ್ಥಾಶ್ರಮವನ್ನು ತೊರೆದು, ದೀಕ್ಷೆ ಪಡೆದು ಬಂದವರು. ತಮ್ಮ ಯೋಗ, ಧ್ಯಾನ ಬಲದಿಂದ ಪರಮಾತ್ಮನಿಗೆ ತಲುಪುವ ಶಕ್ತಿಯನ್ನು ಹೊಂದಿದ್ದರು. ಅತ್ರಿ, ಅಂಗೀರ, ವಿಶ್ವಾಮಿತ್ರ, ಕಶ್ಯಪ, ವಸಿಷ್ಠ, ಭೃಗು ಇವರೆಲ್ಲ ಋಷಿಗಳು.
ಮಹರ್ಷಿ. ಮನುಷ್ಯನಲ್ಲಿ ದಿವ್ಯ ಚಕ್ಷು, ಪರಮ ಚಕ್ಷು ಮತ್ತು ಜ್ಞಾನ ಚಕ್ಷು ಇರುತ್ತದೆ. ಜ್ಞಾನ ಚಕ್ಷು ಜಾಗೃತನಾದವರನ್ನು ಋಷಿ ಎಂದು ಕರೆಯಲಾಗುತ್ತದೆ. ದಿವ್ಯ ಚಕ್ಷು ಜಾಗೃತವಾದರೆ, ಮಹರ್ಷಿ ಎಂದು ಕರೆಯಲಾಗುತ್ತದೆ. ಮತ್ತು ಪರಮ ಚಕ್ರ ಜಾಗೃತರಾದವರನ್ನು ಬೃಹರ್ಷಿ ಎಂದು ಕರೆಯಲಾಗುತ್ತದೆ. ಇಂದಿನ ಕಾಲದಲ್ಲೂ ಈ ಮೂರು ಚಕ್ಷುವನ್ನು ಜಾಗೃತವಾಗಿಸಿಕೊಂಡು ಬದುಕುವ ಶಕ್ತಿ ಮನುಷ್ಯನಿಗಿದೆ. ಆದ್ರೆ ಮನುಷ್ಯ ತನ್ನ ಆಸೆ, ಕಾಮ, ಕ್ರೋಧದ ಕೈಗೆ ಸಿಕ್ಕು, ಇವುಗಳನ್ನ ಜಾಗೃತಗೊಳಿಸುವಲ್ಲಿ ಸೋತಿದ್ದಾನೆ. ಕಲಿಯುಗದ ಕೊನೆಯ ಮಹರ್ಷಿ ಎಂದು ದಯಾನಂದ ಸರಸ್ವತಿಯವರನ್ನು ಕರೆಯಲಾಗುತ್ತದೆ.
ಮುನಿ. ಮುನಿ ಎಂದರೆ ಮೌನಿ ಎಂದರ್ಥ. ಕಡಿಮೆ ಮಾತನಾಡುವ, ಅರ್ಥವಿರುವ ಮಾತನಾಡುವವರನ್ನ ಮುನಿ ಎಂದು ಹೇಳಲಾಗುತ್ತದೆ. ಇವು ಗೃಂಥ, ವೇದಗಳನ್ನು ರಚಿಸುವವರು. ಮತ್ತು ತಮ್ಮ ಧ್ಯಾನದಿಂದಲೇ ದೇವರನ್ನು ಒಲಿಸಿಕೊಳ್ಳುವ ಶಕ್ತಿ ಹೊಂದಿರುವರು.
ಸಾಧು. ಸಂಸ್ಕೃತದಲ್ಲಿ ಸಾಧನೆ ಮಾಡುವವರನ್ನು ಸಾಧು ಎಂದು ಹೇಳಲಾಗುತ್ತದೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರವನ್ನು ತ್ಯಾಗ ಮಾಡುವವರನ್ನು ಸಾಧು ಎಂದು ಹೇಳಲಾಗುತ್ತದೆ. ಎಲ್ಲರಿಗೂ ಒಳಿತನ್ನೇ ಬಯಸುವ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರನ್ನು ಸಾಧು ಎಂದು ಹೇಳಲಾಗುತ್ತದೆ.
ಸಂತ. ಸಂಸ್ಕೃತದಲ್ಲಿ ಸಂತನೆಂದ ಶಾಂತ ಎಂದರ್ಥ. ಸ್ವಭಾವದಲ್ಲಿ ಶಾಂತನಾದವರು, ಧರ್ಮಾಚರಣೆ ಮಾಡುವರನ್ನು ಸಂತರೆನ್ನುತ್ತಾರೆ. ಸಂತ ಕಬೀರದಾಸರು, ಸಂತ ತುಳಸಿದಾಸರು, ಹೀಗೆ ಇವರನ್ನೆಲ್ಲ ಸಂತರೆನ್ನುತ್ತಾರೆ. ದೋಹೆಗಳನ್ನ ರಚಿಸುವ ಇವರೆಲ್ಲ, ತಮ್ಮ ದೋಹೆಗಳಿಂದಲೇ ದೇವರನ್ನು ಒಲಿಸಿಕೊಂಡವರು.