Sunday, September 8, 2024

Latest Posts

ನಕಲಿ ಗೌರವ ಮತ್ತು ಅಸಲಿ ಗೌರವದ ಮಧ್ಯೆ ಇರುವ ವ್ಯತ್ಯಾಸವೇನು..?

- Advertisement -

ತನಗೆ ಎಲ್ಲರೂ ಗೌರವ ಕೊಡಲಿ ಎಂದು ಪ್ರತೀ ಮನುಷ್ಯನೂ ಆಸೆ ಪಡುತ್ತಾರೆ. ಆದ್ರೆ ಗೌರವ ಅನ್ನೋದು ಎಲ್ಲರಿಗೂ ಸಿಗುವ ಆಸ್ತಿಯಲ್ಲ. ಬದಲಾಗಿ ಅದನ್ನ ಸಂಪಾದಿಸಿದವರಿಗಷ್ಟೇ ಗೌರವ ಸಿಗುತ್ತದೆ. ಆದ್ರೆ ಗೌರವದಲ್ಲೂ ಅಸಲಿ ಗೌರವ ಮತ್ತು ನಕಲಿ ಗೌರವ ಅಂತಾ ಎರಡು ಭಾಗವಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನಕಲಿ ಗೌರವ ಅಂದ್ರೆ, ನಿಮ್ಮ ಬಳಿ ದುಡ್ಡಿದೆ, ಸಮಾಜದಲ್ಲಿ ಒಳ್ಳೆ ಹೆಸರಿಗೆ, ಅಥವಾ ನಿಮ್ಮನ್ನು ಗೌರವಿಸಿದರೆ, ಗೌರವಿಸಿದವನಿಗೆ ದುಡ್ಡು, ಕೆಲಸ ಹೀಗೆ ಏನಾದರೂ ಲಾಭ ಸಿಗುತ್ತದೆ. ಅಥವಾ ವ್ಯಕ್ತಿಯ ಪೋಸ್ಟ್ ಉತ್ತಮವಾಗಿದೆ. ಹಾಗಾಗಿ ಇವರನ್ನು ಗೌರವಿಸಿದರೆ, ನನಗೆ ಪ್ರಮೋಷನ್ ಸಿಗಬಹುದು. ಹೀಗೆ ಹಲವು ಆಸೆಗಳನ್ನು ಇಟ್ಟುಕೊಂಡು, ತಮ್ಮ ಲಾಭಕ್ಕಾಗಿ ನೀಡುವ ಗೌರವವನ್ನು ನಕಲಿ ಗೌರವ ಅಂತಾ ಕರೆಯಲಾಗುತ್ತದೆ.

ಓರ್ವ ಯಶಸ್ವಿ ಮನುಷ್ಯನ ಬಳಿ ಉತ್ತಮ ಪೋಸ್ಟ್, ರ್ಯಾಂಕ್, ಹಣ, ಸಮಾಜದಲ್ಲಿ ಒಳ್ಳೆಯ ಹೆಸರು ಇವೆಲ್ಲ ಇರುವುದು ತುಂಬಾ ಮುಖ್ಯ. ಆದ್ರೆ ಜನ ಇದನ್ನು ನೋಡಿ, ನಿಮಗೆ ಗೌರವ ನೀಡುತ್ತಿದ್ದರೆ, ನಿಮ್ಮ ಹೆಸರು, ಹಣ, ಪೋಸ್ಟ್ ಎಲ್ಲ ಕಳೆದು ಹೋದ ಮೇಲೆ ಅವರು ನಿಮ್ಮನ್ನು ಗೌರವಿಸುವುದನ್ನು ಬಿಟ್ಟುಬಿಡುತ್ತಾರೆ. ಯಾಕಂದ್ರೆ ಅವರು ಬರೀ ತಮ್ಮ ಲಾಭಕ್ಕಾಗಿ ನಿಮ್ಮನ್ನು ಗೌರವಿಸುತ್ತಾರೆ.

ಹಾಗಾಗಿ ಇಂಥ ನಕಲಿ ಗೌರವ ಸಂಪಾದಿಸುವುದರ ಬದಲು ಅಸಲಿ ಗೌರವ ಗಳಿಸಿ. ಉದಾಹರಣೆಗೆ, ಸುಧಾಮೂರ್ತಿ, ರತನ್‌ ಟಾಟಾರಂಥ ಮಹೋನ್ನತರನ್ನ ಹಲವರು ಗೌರವಿಸುತ್ತಾರೆ. ಯಾಕಂದ್ರೆ ಅವರ ಗುಣ, ಕೆಲಸ ಮತ್ತು ಮಾತಿಗೆ ಜನ ಅವರನ್ನು ಗೌರವಿಸುತ್ತಾರೆ ವಿನಃ, ಅವರ ಬಳಿ ದುಡ್ಡುಂಟು ಅಂತಲ್ಲ.  ಅವರ ಬಳಿ ದುಡ್ಡಿದ್ದರೂ ಹೋದರು, ಜನ ಅವರಿಗೆ ಗೌರವಿಸುವುದನ್ನು ಬಿಡುವುದಿಲ್ಲ. ಯಾಕಂದ್ರೆ ಅವರ ಗುಣ ಅಂಥದ್ದು. ಹಾಗಾಗಿ ನೀವೆಷ್ಟೇ ಶ್ರೀಮಂತರಾಗಿದ್ದರೂ, ಎಂಥದ್ದೇ ಸ್ಥಾನದಲ್ಲಿದ್ದರೂ, ನಿಮಗೆ ಅಸಲಿ ಗೌರವ ಕೊಡುವವರನ್ನು ಸಂಪಾದಿಸಿ ವಿನಃ, ನಕಲಿ ಗೌರವ ಕೊಡುವವರನ್ನಲ್ಲ.

- Advertisement -

Latest Posts

Don't Miss