Health Tips: ನಾವು ಜೀರ್ಣಕ್ರಿಯೆ ಸಮಸ್ಯೆ ಬಗ್ಗೆ ನಿಮಗೆ ಹಲವಾರು ವಿಷಯಗಳನ್ನು ಹೇಳಿದ್ದೇವೆ. ಇಂದು ಜೀರ್ಣ ಅಜೀರ್ಣ ಎಂದರೇನು ಎನ್ನುವ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪಾ ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಾವು ತಿನ್ನುವ ಆಹಾರದಲ್ಲಿ 5 ವಿಧಗಳಿದೆ. ಕಾರ್ಬೋಹೈಡ್ರೇಟ್ಸ್, ಪ್ರೋಟಿನ್, ಫ್ಯಾಟ್, ವಾಟರ್, ಫೈಬರ್. ಇವಿಷ್ಟು ನಮ್ಮ ಆಹಾರದಲ್ಲಿರಬೇಕು. ಈ 5 ವಿಧಗಳು ಒಂದೊಂದು ರೀತಿಯಲ್ಲಿ, ಬೇರೆ ಬೇರೆ ವಿಧಾನದಲ್ಲಿ ಜೀರ್ಣವಾಗುತ್ತದೆ. ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗಬೇಕು ಅಂದ್ರೆ, ನಾವು ಆ ಆಹಾರವನ್ನು ಸರಿಯಾಗಿ ಅಗಿದು ತಿನ್ನಬೇಕು. ಆಗ ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.
ಹಲವರಿಗೆ ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣವಾದಾಗ ಮಾತ್ರ, ನಮಗೆ ಸರಿಯಾಗಿ ಮಲ ವಿಸರ್ಜನೆಯಾಗುತ್ತದೆ ಎಂದು ಅನ್ನಿಸುತ್ತದೆ. ಆದ್ರೆ ನಮ್ಮ ಆಹಾರದಲ್ಲಿರುವ ನಾರಿನ ಅಂಶದಿಂದಲೇ, ನಾವು ಸರಿಯಾಗಿ ಮಲ ವಿಸರ್ಜನೆ ಮಾಡಲು ಅನುಕೂಲವಾಗುತ್ತದೆ. ಮತ್ತು ನಾರಿನ ಅಂಶ ಜೀರ್ಣವಾಗುವುದಿಲ್ಲ.
ಇನ್ನು ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕು ಅಂದ್ರೆ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಹೆಚ್ಚೆಚ್ಚು ನೀರು ಕುಡಿಯಬೇಕು. ಹಣ್ಣು, ತರಕಾರಿ, ಸೊಪ್ಪಿನ ಸೇವನೆ ಉತ್ತಮವಾಗಿರಬೇಕು. ಇನ್ನು ಮಾಂಸಾಹಾರಕ್ಕಿಂತ, ಸಸ್ಯಾಹಾರ ಚೆನ್ನಾಗಿ ಜೀರ್ಣವಾಗುತ್ತದೆ ಎನ್ನುತ್ತಾರೆ, ಡಾ.ಆಂಜೀನಪ್ಪ. ಮಲಬದ್ಧತೆ ಸಮಸ್‌ಯೆ ಎಂದರೇನು ಅನ್ನುವ ಬಗ್ಗೆಯೂ ವೈದ್ಯರು ವಿವರಿಸಿದ್ದು, ವಾರಕ್ಕೆ ಮೂರು ಬಾರಿ, ದಿನಕ್ಕೆ ಎರಡು ಬಾರಿ, ಅಥವಾ ಎರಡು ದಿನಕ್ಕೊಮ್ಮೆ ಮೋಷನ್ ಹೋದರೂ, ಅದು ನಾರ್ಮಲ್. ಅದನ್ನು ಮಲಬದ್ಧತೆ ಎಂದು ಹೇಳಲಾಗುವುದಿಲ್ಲ.
ಇನ್ನು ಮಲಬದ್ಧತೆಯಾಗಬಾರದು ಅಂದ್ರೆ, ಚೆನ್ನಾಗಿ ನೀರು ಕುಡಿಯಬೇಕು. ಸೀಬೆಹಣ್ಣು, ಪಪ್ಪಾಯಿ, ಸೌತೇಕಾಯಿಯಂಥ ನಾರಿನಂಶವುಳ್ಳ ಹಣ್ಣುಗಳ ಸೇವನೆ ಮಾಡುವುದರಿಂದ, ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇನ್ನು ಹಲವರು ಜ್ಯೂಸ್ ಕುಡಿಯುತ್ತಾರೆ. ಜ್ಯೂಸ್ ಕುಡಿಯುವ ಬದಲು ಹಣ್ಣುಗಳನ್ನೇ ಸೇವಿಸಿದರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..
ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?