Movie News: ರಿಟೇಕ್ ತೆಗೆದುಕೊಳ್ಳಲು ಅವಕಾಶವಿಲ್ಲದ ಕಾಲದಲ್ಲಿ ನಿರ್ದೇಶಕರು ನಟ ನಟಿಯರಿಗೆ ಬಯ್ಯುತ್ತಿದ್ದರು, ಬಡಿಯುತ್ತಿದ್ದರು ಅಂತಾ ಹಳೆಯ ನಟ ನಟಿಯರು ಹೇಳಿದ್ದನ್ನ ನಾವು ಕೇಳಿದ್ದೇವೆ. ಆದರೆ ಅವರು ಹಾಗೆ ಹೇಳುವಾಗ, ನಾವು ನಿರ್ದೇಶಕರನ್ನು ಗುರುಗಳ ರೀತಿ ನೋಡುತ್ತಿದ್ದೆವು,. ಅವರಿಗೆ ಹೆದರುತ್ತಿದ್ದೆವು. ಆ ಕಾರಣಕ್ಕಾಗಿಯೇ, ಇಂದು ಸಮಾಜದಲ್ಲಿ ನಾವು ಉನ್ನತ ಮಟ್ಟದಲ್ಲಿ ಬಾಳುತ್ತಿದ್ದೇವೆ ಎಂದು ಹೇಳುತ್ತಾರೆ.
ಆದರೆ ಇಂದಿನ ಕಾಲದಲ್ಲಿ ಆ ರೀತಿ ಮಾಡುವ ಹಾಗಿಲ್ಲ. ಹಾಗೇನಾದ್ರೂ ಮಾಡಿದ್ರೆ, ಅವರ ಮೇಲೆ ದೂರು ದಾಖಲಿಸಲು ಅವಕಾಶವಿದೆ. ಸಿನಿಮಾ ಶೂಟಿಂಗ್ ಸೆಟ್ನಲ್ಲಿ ನಿರ್ದೇಶಕರು ನನ್ನ ಮೇಲೆ ಹಲ್ಲೆ ಮಾಡಿದ್ರು ಎಂದು ನಟಿ ಮಮಿತಾ ಹೇಳಿದ್ದಾರೆ. ತಮಿಳು ಸ್ಟಾರ್ ನಿರ್ದೇಶಕ ಬಾಲಾ ತಮ್ಮ ಸಿನಿಮಾ ಶೂಟಿಂಗ್ ವೇಳೆ ನಟಿ ಮಮಿತಾಗೆ ಬೈದು, ಬಡಿದು ಆ್ಯಕ್ಟಿಂಗ್ ಮಾಡಲು ಹೇಳಿದ್ದರೆಂದು ಆರೋಪಿಸಲಾಗಿದೆ.
ಈ ಸಿನಿಮಾದಲ್ಲಿ ನಟ ಸೂರ್ಯ ಕೂಡ ನಟಿಸಿದ್ದಾರೆ. ಬಾಲಾ ಅವರು ಸಿನಿಮಾ ಶೂಟಿಂಗ್ ವೇಳೆ ಬೈಯ್ಯುವುದು ಕಾಮನ್ ಅಂತೆ. ಹಾಗಾಗಿಯೇ ಅವರು ಮಮಿತಾಗೆ ನಾನು ಶೂಟಿಂಗ್ ವೇಳೆ, ಸೀನ್ ಕರೆಕ್ಟ್ ಬರಲಿ ಎಂದು ಬೈಯ್ಯುತ್ತಲೇ ಇರುತ್ತೇನೆ. ಅದನ್ನೆಲ್ಲ ಸಿರಿಯಸ್ ಆಗಿ ತೆಗೆದುಕೊಳ್ಳಬೇಡ ಎಂದು ನನಗೆ ಮೊದಲೇ ಹೇಳಿದ್ದರು. ಆದರೆ ನನಗೆ ಹಾಗೆ ಬೈಯ್ಯಿಸಿಕೊಂಡು ಅಭ್ಯಾಸವಿರಲಿಲ್ಲ. ಹಾಗಾಗಿ ನನಗೆ ತುಂಬಾ ಬೇಸರವಾಯ್ತು ಎಂದು ನಟಿ ಮಮಿತಾ ಹೇಳಿದ್ದಾರೆ.




