Spiritual: ಮುಸ್ಸಂಜೆ ಹೊತ್ತು ಎಂದರೆ, ಹಿಂದೂಗಳಿಗೆ ಒಂದು ಪವಿತ್ರವಾದ ಹೊತ್ತು. ಈ ವೇಳೆ ದೇವರಿಗೆ ದೀಪ ಹಚ್ಚಿ, ಭಜನೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಈ ವೇಳೆ ವಿದ್ಯಾಭ್ಯಾಸದಲ್ಲಿ ತೊಡಗಿದರೆ, ಅವರ ಜೀವನ ಉತ್ತವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಅಲ್ಲದೇ, ಇದೇ ವೇಳೆ ಲಕ್ಷ್ಮೀ ಮನೆಗೆ ಬರುತ್ತಾಳೆ. ಅಶಿವನಿ ದೇವತೆಗಳು ಅಸ್ತು ಅಸ್ತು ಎನ್ನುತ್ತಾರೆಂಬ ನಂಬಿಕೆ ಇದೆ. ಆದರೆ ಮುಸ್ಸಂಜೆ ಹೊತ್ತಿಗೆ ಕೆಲ ಕೆಲಸಗಳನ್ನ ಕೂಡ ನಾವು ಮಾಡಬಾರದು. ಹಾಗೆ ಮಾಡಿದರೆ, ಮನೆಗೆ ದರಿದ್ರ ಸಂಭವಿಸುತ್ತದೆ. ನೆಮ್ಮದಿ ಹಾಳಾಗುತ್ತದೆ. ಹಾಗಾದ್ರೆ ಯಾವ ಕೆಲಸವನ್ನು ಮುಸ್ಸಂಜೆ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಸಂಜೆ 5 ಗಂಟೆಯೊಳಗೆ ಮನೆಯಲ್ಲಿ ಕಸ ಗುಡಿಸಬೇಕು. ಏಕೆಂದರೆ, 5 ಗಂಟೆಯ ಬಳಿಕ ಸೂರ್ಯಾಸ್ತವೆಂದು ಹೇಳಲಾಗುತ್ತದೆ. ಸೂರ್ಯಾಸ್ತವಾದ ಬಳಿಕ ಮನೆಯಲ್ಲಿ ಕಸ ಗುಡಿಸಬಾರದು. ಕೂದಲು ಕೂಡ ಬಾಚಬಾರದು. ತಲೆಗೆ ಎಣ್ಣೆ ಕೂಡ ಹಾಕಬಾರದು. ಬೆಳಿಗ್ಗೆ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡಿ, ತಲೆ ಸ್ನಾನ ಮಾಡಬೇಕು. ಆದರೆ ಯಾವುದೇ ಕಾರಣಕ್ಕೂ ಮುಸ್ಸಂಜೆ ಹೊತ್ತಿಗೆ ತಲೆಗೆ ಎಣ್ಣೆ ಹಾಕಬೇಡಿ.
ಇನ್ನು ಮುಸ್ಸಂಜೆ ವೇಳೆ ಉಗುರು ಮತ್ತು ಕೂದಲನ್ನು ಕತ್ತರಿಸಬಾರದು. ನಿದ್ರಿಸಬಾರದು. ಕೂದಲು ಬಿಟ್ಟುಕೊಂಡಿರಬಾರದು. ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು. ಏಕೆಂದರೆ, ಲಕ್ಷ್ಮೀ ಕೋಪಗೊಂಡು, ಆಶೀರ್ವದಿಸದೇ, ಹಾಗೇ ಹೊರಟು ಹೋಗುತ್ತಾಳೆ. ಹಾಗಾಗಿ ಮುಸ್ಸಂಜೆ ಹೊತ್ತು ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು.
ಮುಸ್ಸಂಜೆ ಹೊತ್ತಿಗೆ ನಿದ್ರಿಸಬಾರದು. ಪತಿ-ಪತ್ನಿ ದೈಹಿಕ ಸಂಪರ್ಕ ಕೂಡ ಹೊಂದಬಾರದು. ಹೀಗೆ ಮಾಡಿದ್ದಲ್ಲಿ, ಹುಟ್ಟುವ ಮಗುವಿಗೆ ಜೀವನ ಪೂರ್ತಿ ಅದೃಷ್ಟವೇ ಇರುವುದಿಲ್ಲ. ಅದು ಕೆಟ್ಟ ಹೆಸರು ತರುವ ಮಗುವಾಗಬಹುದು.
ಹಿಂದೂಗಳ ನಂಬಿಕೆ ಪ್ರಕಾರ, ಮುಸ್ಸಂಜೆ ಹೊತ್ತಲ್ಲಿ ಹಿಂದಿನ ಬಾಗಿಲಿನಿಂದ ದರಿದ್ರ ಲಕ್ಷ್ಮೀ ಬರುತ್ತಾಳೆ. ಮತ್ತು ಮುಂದಿನ ಬಾಗಿಲಿನಿಂದ ಅದೃಷ್ಟ ಲಕ್ಷ್ಮೀ ಪ್ರವೇಶಿಸುತ್ತಾಳೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಸಂಜೆಯ ವೇಳೆಗೆ ದೀಪ ಹಚ್ಚುವಾಗ ಹಿಂಬಾಗಿಲು ಮುಚ್ಚಿ, ಮತ್ತು ಮುಂಬಾಗಿಲು ತೆರೆದಿಡಿ. ದೀಪ ಹಚ್ಚಿದ ಬಳಿಕ ಸ್ವಲ್ಪ ಹೊತ್ತು ಧ್ಯಾನ ಮಾಡಿ, ಶ್ಲೋಕ ಹೇಳಿ. ಇದರಿಂದ ನಿಮಗೆ ನೆಮ್ಮದಿ ಸಿಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ




