Friday, July 4, 2025

Latest Posts

ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ, ನೀವು ಮಲಗುವ ದಿಂಬಿನ ಕೆಳಗೆ ಇರಿಸಬೇಡಿ..

- Advertisement -

Spiritual: ಹಿಂದೂ ಧರ್ಮದ ಪ್ರಕಾರ, ಹಲವು ನಿಯಮಗಳನ್ನು ನುಸರಿಸಲೇಬೇಕು. ಹಲವು ನಂಬಿಕೆಗಳನ್ನು ನಂಬಲೇಬೇಕು. ಇಲ್ಲವಾದಲ್ಲಿ, ಅಂಥ ಕೆಲಸಗಳು ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲ ನಂಬಿಕೆಗಳನ್ನು ನಾವು ನಂಬಿ, ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಅವುಗಳಲ್ಲಿ ದಿಂಬಿನ ಕೆಳಗೆ ಕೆಲ ವಸ್ತುಗಳನ್ನು ಇಡುವುದು ಕೂಡ ಒಂದು. ಹೌದು, ನಾವು ಕೆಲ ವಸ್ತುಗಳನ್ನು ದಿಂಬಿನ ಕೆಳಗಿಟ್ಟು, ಮಲಗಿದರೆ, ಅದರಿಂದ ಮನೆಯ ನೆಮ್ಮದಿ ಹಾಳಾಗಬಹುದು. ಆರ್ಥಿಕ ಸಮಸ್ಯೆ ಬರಬಹುದು. ಕೌಟುಂಬಿಕ ಕಲಹಗಳಾಗಬಹುದು. ಹಾಗಾಗಿ ಕೆಲ ವಸ್ತುಗಳನ್ನು ದಿಂಬಿನ ಕೆಳಗೆ ಇರಿಸಬಾರದು. ಯಾವ ವಸ್ತುಗಳನ್ನು ದಿಂಬಿನ ಕೆಳಗಿರಿಸಬಾರದು. ಇರಿಸಿದರೆ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..

ಚಿನ್ನ, ಬೆಳ್ಳಿಯ ವಸ್ತುಗಳು. ಚಿನ್ನ, ಬೆಳ್ಳಿಯ ವಸ್ತುಗಳನ್ನು ದಿಂಬಿನ ಬಳಿ ಇಡುವುದರಿಂದ ನಿಮ್ಮ ಅದೃಷ್ಟಕ್ಕೆ ಧಕ್ಕೆ ಬರುತ್ತದೆ. ಏಕೆಂದರೆ, ಚಿನ್ನ- ಬೆಳ್ಳಿ ಎಂದರೆ, ಲಕ್ಷ್ಮೀಗೆ ಸಮ. ಹಾಗಾಗಿ ಅಂಥ ವಸ್ತುವನ್ನು ನೀವು ನಿರ್ಲಕ್ಷ್ಯ ಮಾಡುವುದರಿಂದ, ನಿಮ್ಮ ಲಕ್‌ನ್ನು ನೀವೇ ಕಳೆದುಕೊಳ್ಳುತ್ತೀರಿ.

ಪುಸ್ತಕ. ಪುಸ್ತಕವೆಂದರೆ ಸರಸ್ವತಿ ಸ್ವರೂಪ. ಹಾಗಾಗಿ ಪುಸ್ತಕವನ್ನು ಟೇಬಲ್‌ ಮೇಲಿರಿಸಿ. ಬ್ಯಾಗ್‌ನಲ್ಲಿ ಹಾಕಿ, ಒಂದು ಬದಿರಿಸಿ. ಅದನ್ನು ಬಿಟ್ಟು ಬೆಡ್‌ ಮೇಲೆ, ದಿಂಬಿನ ಬಳಿ ಇಡಬೇಡಿ. ಇದರಿಂದ ನಿಮ್ಮ ಮೇಲೆ ಋಣಾತ್ಮಕ ಪರಿಣಾಮ ಹೆಚ್ಚಾಗಿ, ನಿಮ್ಮ ಜೀವನದಲ್ಲಿ ಅಶುಭ ಘಟನೆಗಳು ನಡೆಯಲು ಶುರುವಾಗುತ್ತದೆ.

ಪರ್ಸ್, ದುಡ್ಡು. ದುಡ್ಡು ಅಂದ್ರೆ ಮಹಾಲಕ್ಷ್ಮೀ ಸ್ವರೂಪ. ಆಕೆಯ ಕೃಪೆ ಇದ್ದಾಗ ಮಾತ್ರ, ನಮ್ಮ ಬಳಿ ದುಡ್ಡಿರಲು ಸಾಧ್ಯ. ಹಾಗಾಗಿ ಮಲಗುವ ಜಾಗದಲ್ಲೆಲ್ಲ ದುಡ್ಡನ್ನು ಇಡಬಾರದು. ಅದರಲ್ಲೂ ದಿಂಬಿನ ಕೆಳಗೆ ದುಡ್ಡು, ಪರ್ಸ್ ಇಡಬೇಡಿ. ಇದು ನೀವು ಲಕ್ಷ್ಮೀ ದೇವಿಗೆ ಮಾಡುವ ಅವಮಾನವಾಗಿದೆ.

ಮೊಬೈಲ್, ವಾಚ್. ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ಗೊತ್ತು. ಏಕೆಂದರೆ, ಇದರಿಂದ ಹೊರಬರುವ ವಿಕಿರಣಗಳು, ಮನುಷ್ಯನ ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಮೊಬೈಲ್‌ನಿಂದ ಹೊರಬರುವ ವಿಕಿರಣಗಳಿಂದ ತಲೆ ನೋವು ಉಂಟಾಗುತ್ತದೆ. ಇದರಿಂದ ಬ್ರೇನ್ ಟ್ಯೂಮರ್ ಬರುವ ಸಾಧ್ಯತೆ ಇದೆ. ಅಲ್ಲದೇ, ಕಣ್ಣಿನ ಆರೋಗ್ಯಕ್ಕೂ ಇದು ಹಾನಿಕಾರಕ. ಹಾಗಾಗಿ ಇಂಥ ವಸ್ತುಗಳನ್ನು ದಿಂಬಿನ ಬಳಿ ಇಡಬೇಡಿ.

ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..

ಪತಿ ಶ್ರೀಮಂತನಾಗಬೇಕು, ಉದ್ಧಾರವಾಗಬೇಕು ಅಂದ್ರೆ ಪತ್ನಿ ಈ ಕೆಲಸವನ್ನು ಮಾಡಬೇಕು..

ಮಂಗಳವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ.. ಇಲ್ಲದಿದ್ದಲ್ಲಿ ದರಿದ್ರತನ ಆವರಿಸುತ್ತದೆ..

- Advertisement -

Latest Posts

Don't Miss