ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..

Spiritual: ಅದೃಷ್ಟ ಅನ್ನೋದು ಬರೀ ಹಣೆಬರಹದಲ್ಲಿ ಬರೆದಾಗ ಮಾತ್ರ ಸಿಗುವಂಥದ್ದಲ್ಲ. ನಮ್ಮ ಬಳಿ ಇರುವ ಕೆಲ ವಸ್ತುಗಳು ನಮ್ಮ ಅದೃಷ್ಟಕ್ಕೆ ಕಾರಣವಾಗಿರುತ್ತದೆ. ನಮಗೆ ಸಿಗುವ ಕೆಲ ವಸ್ತುಗಳು ಕೂಡ ನಮ್ಮ ಅದೃಷ್ಟಕ್ಕೆ ಕಾರಣವಾಗುತ್ತದೆ. ಇಂದು ನಾವು ಯಾವ ವಸ್ತುಗಳನ್ನು ಯಾಕೆ ಬೇರೆಯವರಿಗೆ ಕೊಡಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಲಿದ್ದೇವೆ.

ಮೊದಲನೇಯದಾಗಿ ರುಬ್ಬುವ ಕಲ್ಲು. ಇದು ನಿಮಗೆ ವಿಚಿತ್ರವೆನ್ನಿಸಬಹುದು. ಆದರೆ ಸತ್ಯ. ರುಬ್ಬುವ ಕಲ್ಲನ್ನು ಯಾರಾದರೂ ಕೇಳಿದರೆ, ಅದನ್ನು ನೀವು ಅವರಿಗೆ ಕೊಡುವಂತಿಲ್ಲ. ಏಕೆಂದರೆಲ ರುಬ್ಬುವ ಕಲ್ಲು ಲಕ್ಷ್ಮೀ ಇದ್ದಂತೆ. ಅದನ್ನು ನೀವು ಬಿಟ್ಟು ಇನ್ನೊಬ್ಬರು ಕೊಂಡೋಗಿ ಬಳಸಿದರೆ, ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ. ಇಂದಿನ ಕಾಲದಲ್ಲಿ ರುಬ್ಬವ ಕಲ್ಲನ್ನು ಬಳಸುವವರು ಕಡಿಮೆ ಜನ ಇರುಬಹುದು. ಆದರೂ ಇದು ಸತ್ಯ. ಏಕೆಂದರೆ ಹಿಂದಿನ ಕಾಲದಲ್ಲಿ ರುಬ್ಬವ ಕಲ್ಲನ್ನು ಪೂಜೆ ಮಾಡುತ್ತಿದ್ದರು.

ಕೊಬ್ಬರಿ ಎಣ್ಣೆ, ಮೊಸರು, ಹಾಲು, ಉಪ್ಪು ಇದ್ಯಾವುದನ್ನೂ ಮುಸ್ಸಂಜೆ ಬಳಿಕ ಬೇರೆಯವರಿಗೆ ಕೊಡಬಾರದು. ಈಗಲೂ ಕೂಡ ಹಲವು ಕಡೆ ಅಕ್ಕಪಕ್ಕದ ಮನೆಯವರಿಂದ ಕೆಲ ವಸ್ತುಗಳನ್ನು ಪಡೆಯುವುದು, ಕೊಡುವ ಪದ್ಧತಿ ಇದೆ. ಆದರೆ ಮುಸ್ಸಂಜೆ ಬಳಿಕ ನೀವು ಯಾರಿಗೂ ಕೊಬ್ಬರಿ ಎಣ್ಣೆ, ಮೊಸರು, ಹಾಲು, ಉಪ್ಪು ಇದ್ಯಾವುದನ್ನೂ ಕೊಡಬಾರದು.

ಇನ್ನು ಮುಖ್ಯವಾಗಿ ದುಡ್ಡನ್ನು ಕೂಡ ಮುಸ್ಸಂಜೆ ಬಳಿಕ ಯಾರಿಗೂ ಹಣ ಕೊಡಬೇಡಿ. ತೀರಾ ಕಷ್ಟಕಾಲವಾಗಿದ್ದಲ್ಲಿ, ಸಹಾಯ ಮಾಡಬಹುದು. ಆದರೆ ಯಾರಿಗಾದರೂ ಸಾಲ ಕೊಡುವುದಿದ್ದರೆ, ಕೆಲಸಕ್ಕೆ ಸಂಬಳ ಕೊಡುವುದಿದ್ದರೆ, ಅಥವಾ ಯಾರಿಗಾದರೂ ದುಡ್ಡು ಕೊಡಬೇಕೆಂದರೆ, ಬೆಳಗ್ಗಿನ ಸಮಯದಲ್ಲಿ ಕೊಡಿ. ಆದರೆ ಮುಸ್ಸಂಜೆ ಹೊತ್ತಿಗೆ ಯಾವುದೇ ಕಾರಣಕ್ಕೂ ಯಾರಿಗೂ ಹಣ ನೀಡಬೇಡಿ.

ದೇವರಲ್ಲಿ ನಾವು ಅದು ಕೊಡು, ಇದು ಕೊಡು ಎಂದು ಬೇಡಬಾರದಂತೆ.. ಯಾಕೆ ಗೊತ್ತಾ..?

ಚಾಣಕ್ಯರ ಪ್ರಕಾರ ಜೊತೆಗಿರುವವರ ಸ್ವಭಾವ ಹೇಗೆ ಕಂಡು ಹಿಡಿಯಬೇಕು..?

ಈ 4 ರಾಶಿಯವರು ನೋಡಲು ಆಕರ್ಷಕವಾಗಿರುತ್ತಾರೆ..

About The Author