Wednesday, February 5, 2025

Latest Posts

ಅತೀ ಹೆಚ್ಚು ಬಿಕ್ಕಳಿಕೆ ಬಂದಾಗ ನಿರ್ಲಕ್ಷ್ಯ ಮಾಡಲೇಬೇಡಿ..

- Advertisement -

Health Tips: ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಬಿಕ್ಕಳಿಕೆ ಬರುತ್ತದೆ. ಆದರೆ ಕೆಲ ಹಿರಿಯರ ಪ್ರಕಾರ, ಯಾರಾದರೂ ನಮ್ಮನ್ನು ನೆನೆಸಿಕೊಂಡಾಗ ಬಿಕ್ಕಳಿಕೆ ಬರುತ್ತದೆ. ಏನೇ ಆಗಲಿ, ನೀವು ಎಷ್ಟೇ ನೀರು ಕುಡಿದರೂ, ಏನೇ ಮಾಡಿದರೂ, ನಿಮಗೆ ಬಿಕ್ಕಳಿಕೆ ಬರುವುದು ನಿಂತಿಲ್ಲವೆಂದಲ್ಲಿ, ನೀವು ಖಂಡಿತವಾಗಿಯೂ ವೈದ್ಯರ ಬಳಿ ಹೋಗಲೇಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ ಬನ್ನಿ..

ಡಾ.ಕಿಶೋರ್ ಅವರು ಈ ಬಗ್ಗೆ ವಿವರಿಸಿದ್ದು, ಬಿಕ್ಕಳಿಗೆ ಹೆಚ್ಚಾದರೆ, ಅದು ನಮ್ಮ ಜೀವಕ್ಕೆ ಕುತ್ತು ತರಬಹುದು. ಹಾಗಾಗಿ ಬಿಕ್ಕಳಿಗೆ ಬಂದಾಗ, ಹದವಾದ ಬಿಸಿ ನೀರನ್ನು ಕುಡಿಯಬೇಕು. ಹೀಗೆ ಮಾಡಿದಾಗ, ಬಿಕ್ಕಳಿಗೆ ಕಂಟ್ರೋಲಿಗೆ ಬರುತ್ತದೆ. ಇನ್ನೊಂದು ವಿಧಾನ ಅಂದ್ರೆ, ಕೊಂಚ ವೋಮಕಾಳು ಮತ್ತು ತುಪ್ಪ ಹಾಕಿ ಚೆನ್ನಾಗಿ ಹುರಿಯಿರಿ. ಅದಕ್ಕೆ 200 ಎಂಎಲ್ ನೀರು ಹಾಕಿ ಚೆನ್ನಾಗಿ ಕುದಿಸಿ. ಈ ಕಶಾಯ 100 ಎಂಎಲ್ ಬಂದ ಬಳಿಕ, ಇದನ್ನು ಫಿಲ್ಟರ್ ಮಾಡದೇ, ಸಿಪ್‌ ಬೈ ಸಿಪ್ ಕುಡಿಯಿರಿ.

ಇನ್ನೊಂದು ಮುಖ್ಯವಾದ ಸೂಚನೆ ಅಂದ್ರೆ, ನಿಮಗೆ ಬಿಕ್ಕಳಿಗೆ ಬಂದಾಗ, ಹೆಚ್ಚು ಮಾಡತನಾಡಬಾರದು. ಒಂದೇ ವಿಷಯದ ಬಗ್ಗೆ ಹೆಚ್ಚು ಯೋಚನೆ ಮಾಡಬಾರದು. ಇವೆಲ್ಲವೂ ಬಿಕ್ಕಳಿಕೆ ಇನ್ನೂ ಹೆಚ್ಚಲು ಕಾರಣವಾಗುತ್ತದೆ. ಹಾಗಾಗಿ ಬಿಕ್ಕಳಿಗೆ ಬಂದಾಗ, ಹದವಾದ ನೀರು ಕುಡಿಯಿರಿ. ಆಹಾರದಲ್ಲಿ ತುಪ್ಪ ಬಳಸಿ. ಹೆಚ್ಚು ಮಾತನಾಡಬೇಡಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

- Advertisement -

Latest Posts

Don't Miss