Spiritual: ಹಿಂದೂ ಧರ್ಮದಲ್ಲಿ ಹಲವು ನಂಬಿಕೆಗಳಿದೆ. ಮನೆಯಲ್ಲಿ ಕೆಲ ಕೆಲಸಗಳನ್ನು ಮಾಡಬಾರದು. ಮನೆಯೊಳಗೆ ಕೆಲ ವಸ್ತುಗಳನ್ನು ತರಬಾರದು. ಅಡುಗೆ ಮನೆಗೆ ಹೋಗುವಾಗ ಕೆಲ ನಿಯಮಗಳನ್ನು ಅನುಸರಿಸಬೇಕು. ಹೀಗೆ ಹಲವಾರು ನಂಬಿಕೆಗಳಿದೆ. ಇದರೊಂದಿಗೆ ಕೆಲ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬೆಡ್‌ರೂಮ್‌ನಲ್ಲಿ ಇರಿಸಬಾರಡು. ಹಾಗಾದ್ರೆ ಯಾವ ವಸ್ತುಗಳನ್ನು ಬೆಡ್‌ರೂಮ್‌ನಲ್ಲಿ ಇರಿಸಬಾರದು ಅಂತಾ ತಿಳಿಯೋಣ ಬನ್ನಿ..
ಬೆಡ್‌ರೂಮ್ ಎಂದರೆ ಪತಿ-ಪತ್ನಿ ಮಲಗುವ ಕೋಣೆ. ಪತಿ- ಪತ್ನಿಯ ಜೀವನ ಚೆನ್ನಾಗಿರಬೇಕು ಅಂದ್ರೆ, ಅವರ ಬೆಡ್‌ರೂಮ್ ಕೂಡ ಚೆನ್ನಾಗಿ, ಕ್ಲೀನ್ ಆಗಿ ಇರಬೇಕು. ಆ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡಬಾರದು. ಅದೇನೆಂದರೆ, ಚಪ್ಪಲಿ. ಕೆಲವರಿಗೆ ಮನೆಯಲ್ಲಿ ಚಪ್ಪಲಿ ಬಳಸುವ ಚಟವಿರುತ್ತದೆ. ಇಂಥ ಶೋಕಿ ಮಾಡಿದರೆ, ನೀವು ಜೀವನದಲ್ಲೆಂದೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಹಾಗಾಗಿ ಬೆಡ್‌ರೂಮ್‌ನಲ್ಲೂ ನೀವು ಚಪ್ಪಲಿಯನ್ನು ಇರಿಸಬಾರದು. ಕೆಲವರು ತಾವು ಮಲಗುವ ಮಂಚದ ಕೆಳಗೆ ಚಪ್ಪಲಿ ಇಡುತ್ತಾರೆ. ಇದು ತಪ್ಪು. ಇದರಿಂದ ಪತಿ-ಪತ್ನಿ ಮಧ್ಯೆ ಕಲಹವಾಗುವ ಸಂಭವವಿರುತ್ತದೆ.
ನೀವು ಮಲಗಿ ಏಳುವ ದಿಕ್ಕಿಗೆ ಕನ್ನಡಿ ಇಡಬೇಡಿ. ಇದರಿಂದ ನೀವು ಮಲಗಿ ಬೆಳಿಗ್ಗೆ ಎದ್ದ ತಕ್ಷಣ, ನಿಮ್ಮ ಮುಖವನ್ನೇ ನೀವು ಕನ್ನಡಿಯಲ್ಲಿ ನೋಡಬೇಕಾಗುತ್ತದೆ. ಇದೊಂದು ಕೆಟ್ಟ ಅಭ್ಯಾಸ. ಹೀಗೆ ಮಾಡುವುದರಿಂದ ನಿಮ್ಮ ನೆಮ್ಮದಿಯೇ ಹಾಳಾಗುತ್ತದೆ. ನೀವು ಹಾಗೆ ಮಾಡಿದ ದಿನ ಚೆನ್ನಾಗಿರುವುದಿಲ್ಲ. ನಿಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅಲ್ಲದೇ, ನಕಾರಾತ್ಮಕ ಶಕ್ತಿ ಯ ಪ್ರಭಾವ ಹೆಚ್ಚುತ್ತದೆ.
ಮಲಗುವ ಕೋಣೆಯಲ್ಲಿ ಕಬ್ಬಿಣದ ವಸ್ತುಗಳನ್ನು ಇಡಬಾರದು. ಸೂಜಿ, ಚಾಕು, ಕತ್ತಿ ಇತ್ಯಾದಿ ವಸ್ತುಗಳನ್ನು ಇಡಬಾರದು. ಇದು ಪತಿ-ಪತ್ನಿ ಮಧ್ಯೆ ಕಲಹಕ್ಕೆ ಕಾರಣವಾಗುವ ವಸ್ತುಗಳಾಗಿದೆ. ಹಾಗಾಗಿ ಇದನ್ನು ಬೆಡ್‌ರೂಮಿನಲ್ಲಾಗಲಿ, ಮಂಚದ ಬಳಿಯಾಗಲಿ ಇಡಬೇಡಿ.
ಪತಿ-ಪತ್ನಿ ಮಧ್ಯೆ ಪ್ರೀತಿ ಇರಬೇಕು. ಕಲಹವಾಗಬಾರದು ಅಂದ್ರೆ, ನಿಮ್ಮ ಬೆಡ್ ರೂಮಿನಲ್ಲಿ ನವಿಲು ಗರಿಯನ್ನಿರಿಸಿ. ಇದು ಕಲಹ ತಪ್ಪಿಸಿ, ಪ್ರೀತಿ, ಕಾಳಜಿ ಹೆಚ್ಚಿಸುತ್ತದೆ. ಆದರೆ, ಅದನ್ನು ಯಾರೂ ಮುಟ್ಟದ ಹಾಗೆ ನೋಡಿಕೊಳ್ಳಿ. ಹಾಗೇನಾದರೂ ಯಾರಾದರೂ ಹೊರಗಿನವರು ಅದನ್ನು ಮುಟ್ಟಿದರೆ, ಅದರ ಶಕ್ತಿ ಹೋಗುತ್ತದೆ. ಮತ್ತು ಮನೆಯ ಹೆಣ್ಣು ಮಕ್ಕಳು ಮುಟ್ಟಾದಾಗ, ಆ ನವಿಲು ಗರಿಯನ್ನು ಮುಟ್ಟಬೇಡಿ.
ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ