Spiritual: ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಕೆಲ ದಿನ ಕೂದಲು ಕತ್ತರಿಸಬಾರದು. ಹೆಣ್ಣು ಮಕ್ಕಳು ತಲೆಸ್ನಾನ ಮಾಡಬಾರದು ಅನ್ನೋ ನಿಯಮವಿದೆ. ಹಾಗಾದ್ರೆ ಯಾವ ದಿನ ಕೂದಲು ಕತ್ತರಿಸಬಾರದು ಮತ್ತು ಯಾವ ದಿನ ತಲೆಸ್ನಾನ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಗುರುವಾರದ ದಿನ ಮತ್ತು ಶನಿವಾರದ ದಿನ ತಲೆಗೆ ಎಣ್ಣೆ ಹಾಕಿ, ಸ್ನಾನ ಮಾಡಬಾರದು ಎಂದು ಹೇಳಲಾಗಿದೆ. ಮಂಗಳವಾರ ಮತ್ತು ಶುಕ್ರವಾರ, ರವಿವಾರದ ದಿನ ತಲೆ ಸ್ನಾನ ಮಾಡಬಹುದು. ಇನ್ನು ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರದ ದಿನ ಕೂದಲು ಕತ್ತರಿಸಬಾರದು ಅಂತಾ ಹೇಳಲಾಗುತ್ತದೆ. ರವಿವಾರ, ಸೋಮವಾರ ಮತ್ತು ಬುಧವಾರದ ದಿನ ಕೂದಲು ಕತ್ತರಿಸಬಹುದು.
ಗುರುವಾರದ ದಿನ ಕೂದಲು ತೊಳೆದರೆ ಅಥವಾ ಕತ್ತರಿಸಿದರೆ, ಗುರುಬಲ ಕಡಿಮೆಯಾಗುತ್ತದೆ. ಗುರುವಿನ ಕೃಪೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಅದರಲ್ಲೂ ವಿವಾಹಿತ ಮಹಿಳೆ, ತಾಯಿಯಾದವಳು ಗುರುವಾರದ ದಿನ ತಲೆಸ್ನಾನ ಮಾಡಿದ್ದಲ್ಲಿ, ಅವರ ಗಂಡನ ಮತ್ತು ಮಕ್ಕಳ ಗುರುಬಲವೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಇನ್ನು ಶನಿವಾರದ ದಿನ ತಲೆಗೆ ಎಣ್ಣೆ ಹಚ್ಚಿ ತಲೆಸ್ನಾನ ಮಾಡಿದರೆ, ಅಥವಾ ಕೂದಲು ಕತ್ತರಿಸಿದರೆ, ಶನಿಯ ವಕ್ರದೃಷ್ಟಿಗೆ ಒಳಗಾಗಬೇಕಾಗುತ್ತದೆ. ಇಷ್ಟೇ ಅಲ್ಲದೇ ಸೂರ್ಯಾಸ್ತದ ಬಳಿಕ ಕೂದಲಿಗೆ ಎಣ್ಣೆ ಹಚ್ಚುವುದು ಮನೆಗೆ ದರಿದ್ರಕ್ಕೆ ಆಹ್ವಾನ ನೀಡಿದ ಹಾಗೆ. ಹಾಗಾಗಿ ಸೂರ್ಯಾಸ್ತದ ಬಳಿಕ ಎಣ್ಣೆ ಹಚ್ಚಬಾರದು.
ಹಲವರಿಗೆ ಈ ಬಗ್ಗೆ ಮನವರಿಕೆ ಆಗಿದ್ದು ಇದೆ. ತಲೆಸ್ನಾನ ಮಾಡಿದಾಗ, ದಾಂಪತ್ಯ ಕಲಹವಾಗಿದೆ. ಕೂದಲು ಕತ್ತರಿಸಿದಾಗ, ಆರ್ಥಿಕ ನಷ್ಟವಾದ ಉದಾಹರಣೆಯೂ ಇದೆ. ಹೊತ್ತಲ್ಲದ ಹೊತ್ತಲ್ಲಿ ಎಣ್ಣೆ ಹಾಕಿ, ಬಡತನ ತಂದುಕೊಂಡವರೂ ಇದ್ದಾರೆ. ಹಾಗಾಗಿ ಕೆಲವು ಪದ್ದತಿಗಳ ಬಗ್ಗೆ ನಮಗೆ ನಂಬಿಕೆ ಇಲ್ಲದಿದ್ದರೂ, ನಾವು ಅದನ್ನು ಅನುಸರಿಸಬೇಕಾಗುತ್ತದೆ.