Health tips: ನಾವು ವೈದ್ಯರ ಬಳಿ ಅನಾರೋಗ್ಯದ ನಿಮಿತ್ತ ಹೋದಾಗ, ಅವರು ನಮ್ಮ ಆರೋಗ್ಯವನ್ನು ಚೆಕ್ ಮಾಡಿ, ಬಳಿಕ ಆ್ಯಂಟಿಬಯೋಟಿಕ್ಸ್ ಕೊಡುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಮತ್ತೆ ಅದೇ ಅನಾರೋಗ್ಯ ಸಮಸ್ಯೆ ಬಂದಾಗ, ಕೆಲವರು ಕಳೆದ ಬಾರಿ ವೈದ್ಯರು ಕೊಟ್ಟ ಔಷಧಿಯನ್ನೇ ತೆಗೆದುಕೊಳ್ಳೋಣವೆಂದು ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳುತ್ತಾರೆ. ಆಗ ಸುಧಾರಿಸಬೇಕಾದ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಹಾಗಾಗಿ ವೈದ್ಯರ ಸಲಹೆ ಇಲ್ಲದೇ, ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳಬಾರದು. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..
ವೈದ್ಯರಾದ ಡಾ.ಪವನ್ ಕುಮಾರ್ ಈ ಬಗ್ಗೆ ವಿವರಿಸಿದ್ದಾರೆ. ಮಕ್ಕಳಿಗೆ ನೆಗಡಿ, ಕೆಮ್ಮು, ಜ್ವರ ಬಂದಾಗ, ಮನೆ ಮದ್ದುಗಳನ್ನು ಮಾಡಬೇಕು. ಎರಡು ಮೂರು ದಿನವಾದ್ರೂ ನೆಗಡಿ, ಕೆಮ್ಮು, ಜ್ವರ ಹಾಗೇ ಇದ್ದಲ್ಲಿ ವೈದ್ಯರ ಬಳಿ ಪರೀಕ್ಷೆಗೆ ಹೋಗಲೇಬೇಕು. ಅದನ್ನು ಬಿಟ್ಟು ನಾವೇ ಮನೆಯಲ್ಲಿ ಆ್ಯಂಟಿಬಯೋಟಿಕ್ಸ್ ಕೊಡಬಾರದು.
ಏಕೆಂದರೆ ರೋಗಿಯನ್ನು ಪರೀಕ್ಷಿಸುವ ವೈದ್ಯರು, ಮಗುವಿಗೆ ಸಾಧಾರಣ ಔಷಧಿಯ ಅವಶ್ಯಕತೆ ಇದೆಯಾ, ಆ್ಯಂಟಿಬಯೋಟಿಕ್ಸ್ ಕೊಡಬೇಕಾ, ಅಥವಾ ಅದಕ್ಕಿಂತ ಹೆಚ್ಚಿನ ಚಿಕಿತ್ಸೆ ಮಾಡಬೇಕಾ, ಬೇಡವಾ ಎಂದು ಪರೀಕ್ಷಿಸಿ, ಬಳಿಕ ಚಿಕಿತ್ಸೆ ಕೊಡುತ್ತಾರೆ. ಹಾಗಾಗಿ ಮನೆಯಲ್ಲಿ ನಾವೇ ಇಂಗ್ಲೀಷ್ ಔಷಧ ನೀಡಬಾರದು. ಇದು ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತದೆ.
ಇನ್ನು ಜ್ವರ ಬಾರದಿರಲು, ಹೆಚ್ಚು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ, ಬಿಸಿ ಬಿಸಿ ಆರೋಗ್ಯಕರ ಆಹಾರ, ಬಿಸಿ ನೀರು, ಹಣ್ಣು, ತರಕಾರಿ, ಸೊಪ್ಪಿನ ಸೇವನೆ ಮಾಡಬೇಕು. ನಾವು ಆಹಾರ ಸೇವನೆಯ ಮೂಲಕವೇ ನಮ್ಮ ಆರೋಗ್ಯವನ್ನು ಅತ್ಯುತ್ತಮವಾಗಿ ಇರಿಸಿಕೊಳ್ಳಬಹುದು. ಚೆನ್ನಾಗಿ ಉಗುರು ಬೆಚ್ಚಗಿನ ನೀರು ಕುಡಿದರೆ, ಆರೋಗ್ಯ ಚೆನ್ನಾಗಿರುತ್ತದೆ. ಅಥವಾ ನೀವು ಮನೆಯಲ್ಲೇ ಜ್ಯೂಸ್ ತಯಾರಿಸಿ ಬಳಸಬಹುದು. ಏಕೆಂದರೆ ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿ ಇರುವುದು ಕೂಡ ಮುಖ್ಯವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..