ಊಟ ಮಾಡುವಾಗ ಕರಿಬೇವಿನ ಸೊಪ್ಪನ್ನು ಸಿಕ್ಕರೆ, ಕೆಲವರು ಅದನ್ನು ಬಿಸಾಕುತ್ತಾರೆ. ಆದರೆ ಕರಿಬೇವು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಬರೀ ಆರೋಗ್ಯ ಅಭಿವೃದ್ಧಿ ಮಾತ್ರವಲ್ಲ. ಸೌಂದರ್ಯ ಅಭಿವೃದ್ಧಿಯೂ ಆಗುತ್ತದೆ. ಹಾಗಾದ್ರೆ ಕರಿಬೇವಿನ ಸೊಪ್ಪಿನ ಸೇವನೆ ಯಾಕೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಪ್ರಖ್ಯಾತ ವೈದ್ಯೆ ಮತ್ತು ನ್ಯೂಟ್ರಿಷಿಯನ್ ಆಗಿರುವ ಡಾ.ಹೇಮಾ ಅವರು ಈ ಬಗ್ಗೆ ವಿವರಿಸಿದ್ದಾರೆ. ಸಮಾಜ ದುಡ್ಡಿರುವವನಿಗೆ ಕೊಡುವ ಪ್ರಾಮುಖ್ಯತೆಯನ್ನು ಬುದ್ಧಿವಂತನಿಗೆ ಕೊಡುವುದಿಲ್ಲ. ಅದೇ ರೀತಿ ನಾವು ಸೇವಿಸುವ ಆಹಾರಕ್ಕೆ ಕೊಡುವ ಪ್ರಾಮುಖ್ಯತೆಯನ್ನು, ಆರೋಗ್ಯಕರ ಕರಿಬೇವಿಗೆ ನೀಡುವುದಿಲ್ಲ. ಆದರೆ ಈ ಸೊಪ್ಪಿನ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ.
ಕರಿಬೇವಿನ ಸೊಪ್ಪನ್ನು ಸಣ್ಣಗೆ ಹೆಚ್ಚಿ, ಒಗ್ಗರಣೆ ಹಾಕಿದ್ರೆ, ಅದನ್ನು ಎಲ್ಲರೂ ತಿನ್ನುತ್ತಾರೆ. ದೊಡ್ಡದಾಗಿರುವ ಕರಿಬೇವಿನ ಎಲೆಯನ್ನು ತೆಗೆದು ಬದಿಗಿಡುತ್ತಾರೆ. ನೀವು ಕರಿಬೇವಿನ ಸೊಪ್ಪಿನ ಚಟ್ನಿ ಪುಡಿ ತಯಾರಿಸಿ ಬಳಸಬಹುದು. ಅಲ್ಲದೇ, ಕರಿಬೇವಿನ ಸೊಪ್ಪನ್ನು ಹುರಿದು ಪುಡಿ ಮಾಡಿಯೂ ಅನ್ನದ ಜೊತೆ ತಿನ್ನಬಹುದು. ಈ ಬಗ್ಗೆ ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ..
ಈ ಪರಿಮಳಗಳನ್ನು ತೆಗೆದುಕೊಂಡರೆ, ನಿಮ್ಮ ಆರೋಗ್ಯ ಹಾಳಾಗುವುದು ಗ್ಯಾರಂಟಿ..
ನೀರನ್ನು ಕುಡಿಯಬಾರದಂತೆ.. ತಿನ್ನಬೇಕಂತೆ.. ಅದು ಹೇಗೆ ಅಂತಾ ತಿಳಿಯಿರಿ..




