Health Tips: ಕೂದಲಿನ ಆರೈಕೆ ಹೇಗೆ ಮಾಡಬೇಕು ಅನ್ನೋ ಬಗ್ಗೆ ಡಾ.ಕಿಶೋರ್ ವಿವರಣೆ ನೀಡಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಕೂದಲಿಗೆ ಯಾವುದೇ ಶ್ಯಾಂಪೂ, ಜೆಲ್‌ಗಳನ್ನು, ಕೆಮಿಕಲ್ ಯುಕ್ತ ಪ್ರಾಡಕ್ಟ್‌ಗಳನ್ನು ಬಳಸಬಾರದು. ಹಾಗಾದ್ರೆ ಕೂದಲಿನ ಆರೈಕೆ ಹೇಗೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ಕೂದಲಿಗೆ ಎಣ್ಣೆ ಹಚ್ಚಿಸುವುದನ್ನು ತಪ್ಪಿಸಬಾರದಂತೆ. ಏಕೆಂದರೆ, ಕೂದಲಿಗೆ ಎಣ್ಣೆ ತುಂಬಾ ಮುಖ್ಯವಾಗಿದೆ. ಇಂದಿನ ಜಾಯಮಾನದಲ್ಲಿ ಹೇರ್ ಸ್ಟ್ರೇಟ್ನಿಂಗ್, ಹೇರ್ ಕೇರಿಂಗ್, ಫ್ಯಾಷನ್ ಅನ್ನೋ ಹೆಸರಿನಲ್ಲಿ ಹೆಣ್ಣು ಮಕ್ಕಳು ಕೂದಲಿಗೆ ಎಣ್ಣೆ ಹಚ್ಚುವುದಿಲ್ಲ. ಸೇರಮ್ ಬಳಸುತ್ತಾರೆ. ಆದರೆ ಕೂದಲಿಗೆ ಚೆನ್ನಾಗಿ ಎಣ್ಣೆ ಮಸಾಜ್ ಮಾಡಿ, ತಲೆ ಸ್ನಾನ ಮಾಡುವುದು ತುಂಬಾ ಮುಖ್ಯ.
ಅಲ್ಲದೇ, ನಾವು ಕೂದಲು ನೈಸರ್ಗಿಕವಾಗಿ ಕಾಪಾಡಿಕೊಳ್ಳಬೇಕು.ಹಾಗಾಗಿ ಕೂದಲಿಗೆ ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆ ಹಾಕಿ ಮಸಾಜ್ ಮಾಡಬೇಕು. ಇನ್ನು ಶ್ಯಾಂಪೂ ಬದಲು ಸೀಗೇಕಾಯಿ ಪುಡಿ, ಅಂಟುವಾಳದ ಪುಡಿಯನ್ನು ತಲೆಗೆ ಹಾಕಿ, ಸ್ನಾನ ಮಾಡಬೇಕು. ನೀವು ಇವೆರಡನ್ನು ಬಳಸಿ, ಶ್ಯಾಂಪೂವನ್ನು ಕೂಡ, ಮನೆಯಲ್ಲೇ ತಯಾರಿಸಿಕೊಂಡು, ಬಳಸಬಹುದು. ನೀವು ಅಂಟವಾಳಕಾಯಿ ಪುಡಿ, ಸೀಗೆಪುಡಿಗೆ, ನಿಂಬೆರಸ, ದಾಸವಾಳದ ಎಲೆಯ ಪೇಸ್ಟ್ ಸಹ ಮಿಕ್ಸ್ ಮಾಡಿ, ಹಣ್ಣುಕೊಂಡು ಸ್ನಾನ ಮಾಡಬಹುದು. ಇದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿ ಇರುತ್ತದೆ.
ಇನ್ನು ತುಂಬಾ ತಣ್ಣಗಿನ ನೀರು ಮತ್ತು ತುಂಬಾ ಬಿಸಿ ಬಿಸಿಯಾದ ನೀರಿನಿಂದ ತಲೆ ಸ್ನಾನ ಮಾಡಬಾರದು. ತಲೆಸ್ನಾನಕ್ಕಾಗಿ, ಉಗುರು ಬೆಚ್ಚಗಿನ ನೀರನ್ನೇ ಬಳಸಬೇಕು. ದಪ್ಪ ಟವೆಲ್, ಹೇರ್ ಡ್ರೈಯರ್ ಬಳಸಿ, ತಲೆ ಸ್ನಾನ ಮಾಡಬಾರದು. ತೆಳ್ಳಗಿನ ಕಾಟನ್ ಬಟ್ಟೆ, ಖಾದಿ ಬಟ್ಟೆಯಿಂದ ಕೂದಲನ್ನು, ಮೃದುವಾಗಿ ಒರೆಸಿಕೊಳ್ಳಬೇಕು. ಈ ಬಗ್ಗೆ ಇನ್ನಬ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




