Health Tips: ಕೆಲವು ತಮ್ಮ ಸಾವಿನ ನಂತರ, ತಮ್ಮ ಕಣ್ಣು, ಹೃದಯ, ಕಿಡ್ನಿ ಸೇರಿ ದೇಹದ ಹಲವು ಭಾಗಗಳನ್ನು ದಾನ ಮಾಡುತ್ತಾರೆ. ಇನ್ನು ಕೆಲವರು ದೇಹವನ್ನೇ ದಾನ ಮಾಡುತ್ತಾರೆ. ಅದೇ ರೀತಿ ಚರ್ಮದಾನ ಕೂಡ ಮಾಡಬಹುದು. ಇದರಿಂದ ಸುಟ್ಟ ಗಾಯಗಳಾಗಿ, ದೇಹದ ಚರ್ಮ ಕಳೆದುಕೊಂಡವರಿಗೆ, ಚರ್ಮದ ಕಸಿ ಮಾಡಿ, ಅವರಿಗೆ ಹೊಸ ಜೀವನ ನೀಡಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..
ನಾವು ನೇತ್ರದಾನ, ರಕ್ತದಾನ ಮಾಡುವ ಹಾಗೆ, ಚರ್ಮದಾನ ಕೂಡ ಮಾಡಬಹುದು. ಯಾರದ್ದಾರೂ ಸಾವು ಸಂಭವಿಸಿದಾಗ, ಅವರು 18 ವರ್ಷ ಮೇಲ್ಪಟ್ಟವಾಗಿದ್ದರೆ, ಅವರ ಚರ್ಮವನ್ನು ದಾನ ಮಾಡಬಹುದು. ಅಂಥ ಚರ್ಮಗಳನ್ನು ವೈದ್ಯರು ಬಳಕೆಗೆಂದು ಇಟ್ಟುಕೊಳ್ಳುತ್ತಾರೆ. ಅದಕ್ಕಾಗಿ ಸ್ಕಿನ್ ಬ್ಯಾಂಕ್ ಕೂಡ ಇದೆ. ಇಲ್ಲಿ ಒಟ್ಟಾಗುವ ಚರ್ಮವನ್ನು, ಸುಟ್ಟ ಗಾಯವಾದವರಿಗೆ ಮರುಬಳಕೆ ಮಾಡಿ, ಚರ್ಮದ ಕಸಿ ಮಾಡಿ, ಹೊಸ ಚರ್ಮ ಕೂರಿಸಲಾಗುತ್ತದೆ.
ಕೆಲವರಿಗೆ ತಮ್ಮ ಸಾವಾದ ನಂತರವೂ, ತಮ್ಮ ದೇಹ ಇನ್ನೊಬ್ಬರ ಉಪಯೋಗಕ್ಕೆ ಬರಲಿ ಎಂಬ ಆಸೆ ಇರುತ್ತದೆ. ಹಾಗಾಗಿ ಕೆಲವರು ತಾನು ಕಣ್ಣು ದಾನ ಮಾಡುತ್ತೇನೆ, ಕಿಡ್ನಿ ದಾನ ಮಾಡುತ್ತೇನೆ, ದೇಹ ದಾನ ಮಾಡುತ್ತೇನೆ ಎಂದು ಮೊದಲೇ ರಿಜಿಸ್ಟರ್ ಮಾಡಿಸಿಕೊಂಡಿರುತ್ತಾರೆ. ಆದರೆ ಚರ್ಮ ದಾನಕ್ಕಾಗಿ ನೀವು ಈ ರೀತಿ ಮಾಡಲೇಬೇಕಂತಿಲ್ಲ. ಆದರೆ ಮೃತರ ಚರ್ಮ ದಾನ ಮಾಡಲು, ಅವರ ಮನೆಯವರ ಒಪ್ಪಿಗೆ ಅತ್ಯಗತ್ಯ. ಮೃತರಾದ ಇಂತಿಷ್ಟು ಗಂಟೆಯೊಳಗೆ, ಚರ್ಮದಾನ ಮಾಡಬೇಕು. ಇಲ್ಲವಾದಲ್ಲಿ, ಚರ್ಮ ದಾನ ಮಾಡಿ ಉಪಯೋಗವಾಗುವುದಿಲ್ಲ.
ಮರಣವಾದ 6 ಗಂಟೆಯೊಳಗೆ ಚರ್ಮದಾನ ಮಾಡಬೇಕು. ಆಸ್ಪತ್ರೆಯಲ್ಲಿ ಸ್ಕಿನ್ ಬ್ಯಾಂಕ್ ಎಂದು ಇರುತ್ತದೆ. ಆ ಆಸ್ಪತ್ರೆಯಲ್ಲಿ ಚರ್ಮ ದಾನಕ್ಕಾಗಿ ಕಾರ್ಡ್ ನೀಡುತ್ತಾರೆ. ಮರಣದ ಬಳಿಕ, ಕಾರ್ಡ್ ತೋರಿಸಿ, ಚರ್ಮ ದಾನ ಮಾಡಬಹುದು. ಚರ್ಮ ದಾನದ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

