Friday, April 11, 2025

Latest Posts

ಕೂದಲು ದಪ್ಪಗಾಗಲು ಹೀಗೆ ಮಾಡಿ..

- Advertisement -

ಈಗಾಗಲೇ ನಾವು ಕೂದಲು ಉದುರುವ ಸಮಸ್ಯೆ ಬಗ್ಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕೂದಲು ಉದುರುವ ಸಮಸ್ಯೆ ಯಾಕೆ ಬರತ್ತೆ, ಅದಕ್ಕೆ ಕಾರಣವೇನು ಅಂತಲೂ ಹೇಳಿದ್ದೇವೆ. ಇಂದು ಕೂದಲು ದಟ್ಟವಾಗಿ ಬೆಳಿಯಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಲಿದ್ದೇವೆ.

ಕೂದಲು ದಪ್ಪಗಾಗಲು ಮೆಂತ್ಯೆಯನ್ನ ಬಳಸಬೇಕು. ಅರ್ಧ ಸ್ಪೂನ್ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಅದೇ ನೀರನ್ನ ಖಾಲಿ ಹೊಟ್ಟೆಗೆ ತೆಗೆದುಕೊಳ್ಳಿ. ನೆನೆದ ಮೆಂತ್ಯೆ ಕಾಳನ್ನು ಸಾಂಬಾರಿಗೆ ಬಳಸಬಹುದು. ಇದರಲ್ಲೇ ಸ್ವಲ್ಪ ಮೆಂತ್ಯೆ ನೀರನ್ನು ನಿಮ್ಮ ಕೂದಲಿಗೆ ಸ್ಪ್ರೇ ಬಾಟಲಿ ಮೂಲಕ ಸಿಂಪಡಿಸಿಕೊಳ್ಳಿ.

ನೀವು ಸಲಾಡ್ ತಿನ್ನುವಾಗ ಕೊಂಚ ಮೆಂತ್ಯೆ ಪುಡಿಯನ್ನು ಆ ಸಲಾಡ್ ಗೆ ಹಾಕಿ ಸೇವಿಸಿ. ಆದರೆ ಮೆಂತ್ಯೆ ಪುಡಿ ಪ್ರಮಾಣ ಹೆಚ್ಚಾಗಬಾರದಂತೆ. ಯಾಕಂದ್ರೆ ಹೆಚ್ಚು ಮೆಂತ್ಯೆ ಸೇವನೆಯಿಂದ ಮಲಬದ್ಧತೆ ಉಂಟಾಗುತ್ತದೆ.

ಇನ್ನು ಒಂದು ಕಪ್ ನೀರಿನೊಂದಿಗೆ ಎರಡು ಸ್ಪೂನ್ ಮೆಂತ್ಯೆ ನೆನೆಸಿಡಿ. ಇದೇ ನೀರಿನೊಂದಿಗೆ ನೆನೆದ ಮೆಂತ್ಯೆಯನ್ನ ಕುದಿಸಿ. ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿ ಜಾರ್‌ನಲ್ಲಿ ಈ ಮಿಶ್ರಣವನ್‌ನು ಪೇಸ್ಟ್ ಮಾಡಿ. ಈಗ ಹೇರ್ ಪ್ಯಾಕ್ ರೆಡಿ. ಈ ಹೇರ್ ಪ್ಯಾಕನ್ನ ವಾರಕ್ಕೆ ಎರಡು ಬಾರಿ ಬಳಸಬೇಕು. ಇದನ್ನ ಕೂಡಲಿಗೆ ಹಚ್ಚಿ 1 ಗಂಟೆ ಬಿಟ್ಟು ತಲೆ ಸ್ನಾನ ಮಾಡಬೇಕು.

ಡ್ಯಾಂಡ್ರಫ್ ಕಂಟ್ರೋಲಿಗಾಗಿ ಒಂದು ಹೇರ್ ಪ್ಯಾಕ್ ಮಾಡಬಹುದು. 2 ಸ್ಪೂನ್ ಮೆಂತ್ಯೆಕಾಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಇದೇ ನೀರಿನೊಂದಿಗೆ ಬೆಳಿಗ್ಗೆ ನೆನೆದ ಮೆಂತ್ಯೆ ಕಾಳನ್ನ ಕುದಿಸಿ. ಈ ಮಿಶ್ರಣ ತಣ್ಣಗಾದ ಮೇಲೆ ಪೇಸ್ಟ್ ಮಾಡಿ. ಇದಕ್ಕೆ ಒಂದು ಸ್ಪೂನ್ ಆಲಿವ್ ಎಣ್ಣೆ ಮತ್ತು ಒಂದು ಸ್ಪೂನ್ ನಿಂಬೆರಸವನ್ನು ಸೇರಿಸಿ, ಮಿಕ್ಸ್ ಮಾಡಿ. ಈ ಮಿಶ್ರಣವನ್ನು ತಲೆಗೆ ಹಚ್ಚಿ, ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಿ.

2 ಸ್ಪೂನ್ ಮೆಂತ್ಯೆಕಾಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಇದೇ ನೀರಿನೊಂದಿಗೆ ಬೆಳಿಗ್ಗೆ ನೆನೆದ ಮೆಂತ್ಯೆ ಕಾಳನ್ನ ಕುದಿಸಿ. ಈ ಮಿಶ್ರಣ ತಣ್ಣಗಾದ ಮೇಲೆ ಪೇಸ್ಟ್ ಮಾಡಿ. ಇದಕ್ಕೆ ಎರಡು ಸ್ಪೂನ್ ಕಾಯಿಹಾಲನ್ನು ಸೇರಿಸಿ, ಈ ಪ್ಯಾಕನ್ನು ಕೂದಲ ಬುಡಕ್ಕೆ ಹಚ್ಚಿ, ಅರ್ಧ ಗಂಟೆ ಬಳಿಕ ತಲೆ ಸ್ನಾನ ಮಾಡಿ. ಇದರಿಂದ ನಿಮ್ಮ ಕೂದಲು ಶೈನಾಗಿರುತ್ತದೆ.

Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 2

ಗಾಢವಾಗಿ ನಿದ್ದೆ ಮಾಡಲು ರಾತ್ರಿ ಮಲಗುವಾಗ ಇದನ್ನು ಕುಡಿಯಿರಿ..

ಬಿಸ್ಕೇಟ್ ಬಳಸಿ ಹಲ್ವಾನೂ ತಯಾರಿಸಬಹುದು ನೋಡಿ..

- Advertisement -

Latest Posts

Don't Miss