ಎಲ್ಲರಿಗೂ ತನ್ನನ್ನು ಎಲ್ಲರೂ ಇಷ್ಟಪಡಬೇಕು. ತಮ್ಮ ಬಗ್ಗೆ ನಾಲ್ಕು ಒಳ್ಳೆಯ ಮಾತನ್ನಾಡಬೇಕು ಅಂತಾ ಆಸೆ ಇರತ್ತೆ. ಆದ್ರೆ ಆಸೆ ಇದ್ದರಷ್ಟೇ ಸಾಲದು, ಬದಲಾಗಿ ಅದೇ ರೀತಿ ನಾವೂ ಕೂಡ ಇರಬೇಕು. ಎಲ್ಲರೂ ಇಷ್ಟಪಡುವ ಹಾಗೆ ನಮ್ಮ ಗುಣವಿರಬೇಕು. ಹಾಗಾದ್ರೆ ಜನ ನಿಮ್ಮನ್ನ ಇಷ್ಟಪಡಬೇಕು ಅಂದ್ರೆ, ನಿಮ್ಮಲ್ಲಿ ಯಾವ ಗುಣಗಳಿರಬೇಕು ಅಂತಾ ಒಂದು ಕಥೆಯ ಮೂಲಕ ತಿಳಿಯೋಣ ಬನ್ನಿ.
ಒಂದು ಕಾಲೇಜಿನಲ್ಲಿ ಗಿರಿ ಮತ್ತು ರಘು ಎಂಬ ಹುಡುಗರಿದ್ದರು. ಗಿರಿಯನ್ನ ತುಂಬಾ ಜನ ಇಷ್ಟಪಡುತ್ತಿದ್ದರು. ಆದ್ರೆ ರಘುವನ್ನು ಯಾರೂ ಇಷ್ಟಪಡುತ್ತಿರಲಿಲ್ಲ. ಯಾಕಂದ್ರೆ ಅವನ ಗುಣವೇ ಹಾಗಿತ್ತು. ಒಮ್ಮೆ ಶಿವ ಎಂಬ ಗೆಳೆಯನೊಂದಿಗೆ ಗಿರಿ ಮತ್ತು ರಘು ಕ್ಯಾಂಟೀನ್‌ನಲ್ಲಿ ಹರಟೆ ಹೊಡೆಯುತ್ತ ಕುಳಿತಿದ್ದರು. ಆಗ ಶಿವ, ನಮ್ಮ ಕ್ಲಾಸಿನಲ್ಲಿ ಶೌರ್ಯ ಅಂತಾ ಒಬ್ಬ ಹುಡುಗ ಬಂದಿದ್ದಾನೆ ನೋಡಿದ್ರಾ ಅಂತಾ ಕೇಳಿದ.
ನಿಮ್ಮ ಮನೆಯಲ್ಲಿ ಹೀಗೆ ಪೂಜೆ ಮಾಡಿದರೆ…ನಿಮ್ಮ ಪೂಜೆ ದೇವರಿಗೆ ತಲುಪುತ್ತದೆ..!
ಶಿವನ ಮಾತು ಮುಗಿಯಲು ಪುರುಸೊತ್ತಿಲ್ಲದ ರಘು, ಹಾ ನಾನು ನೋಡಿದೆ. ಅವನು ಓವರ್ ಸ್ಮಾರ್ಟ್ ರೀತಿ ಮಾತನಾಡುತ್ತಾನೆ. ಹೆಣ್ಣು ಮಕ್ಕಳ ಜೊತೆ ಫ್ರೆಂಡ್ಲಿ ಆಗಿ ಇರೋ ಥರ ಪೋಸ್ ಕೊಡ್ತಾ ಇದ್ದ ಎಂದು ಹೇಳುತ್ತಾನೆ. ಆದ್ರೆ ಗಿರಿ, ಹೌದು ನಾನು ಶೌರ್ಯನನ್ನು ಅಬ್ಸರ್ವ್ ಮಾಡಿದೆ. ಅವನು ಏನೇ ಮಾತನಾಡುವುದಿದ್ದರೂ ಯೋಚಿಸಿ ಮಾತನಾಡುತ್ತಾನೆ. ಅಲ್ಲದೇ ಇವತ್ತು ಕೆಲವರಿಗೆ ಹೆಲ್ಪ್ ಮಾಡುತ್ತಾ ಇದ್ದದ್ದನ್ನೂ ನಾನು ನೋಡಿದೆ ಎನ್ನುತ್ತಾನೆ.
ನಂತರ ಶಿವ, ಶೌರ್ಯನ ಬಳಿ ಹೋಗಿ ಮಾತನಾಡುತ್ತಾ, ಶೌರ್ಯನ ಬಗ್ಗೆ ರಘು ಏನು ಹೇಳಿದ.. ಮತ್ತು ಗಿರಿ ಏನು ಹೇಳಿದ ಅಂತಾ ಹೇಳುತ್ತಾನೆ. ಅಲ್ಲಿಗೆ ಗಿರಿ ಶೌರ್ಯನ ಉತ್ತಮ ಗೆಳೆಯನಾಗುತ್ತಾನೆ. ಮತ್ತು ರಘುವನ್ನ ಶೌರ್ಯ ಹೇಟ್ ಮಾಡುತ್ತಾನೆ. ಗಿರಿ ಕಾಲೇಜಿಗೆ ಬರುತ್ತಿದ್ದಂತೆ, ಗುರುಗಳನ್ನ ಕಂಡರೆ ನಮಸ್ಕಾರ ಮಾಡುತ್ತಿದ್ದ. ತನ್ನ ಗೆಳೆಯರು, ತನಗಿಂತ ಚಿಕ್ಕವರನ್ನ ಕಂಡರೆ, ಒಂದು ನಗು ಬೀರಿ ಹೋಗುತ್ತಿದ್ದ.
ಯಮನನ್ನೇ ಗೊಂದಲಕ್ಕೆ ತಳ್ಳಲು ಹೋದ ಅಹಂಕಾರಿ ಕಲಾಕಾರನಿಗೆ ಸಾವು ಸಂಭವಿಸಿದ ಕಥೆ..
ಆದ್ರೆ ರಘು ಗುರುಗಳಿಗೆ ನಮಸ್ಕಾರ ಮಾಡುತ್ತಿರಲಿಲ್ಲ. ತನಗಿಂತ ಚಿಕ್ಕವರು ತನಗೆ ಹಾಯ್ ಹೇಳದೇ ಹೋದಲ್ಲಿ, ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ. ಗೆಳೆಯರನ್ನ ಅವಾಚ್ಯ ಶಬ್ದಗಳಿಂದ ಕರೆಯುತ್ತಿದ್ದ. ಯಾರಾದರೂ ರಘುವಿನ ಬಳಿ ಸಹಾಯ ಕೇಳಿದ್ರೆ, ರಘು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಗಿರಿ ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದ.
ರಘು ತನಗೇನಾದ್ರೂ ಲಾಭವಾಗಬೇಕಾದ್ದಲ್ಲಿ, ಸುಳ್ಳು ಹೇಳಲು, ಮೋಸ ಮಾಡಲು ಹಿಂಜರಿಯುತ್ತಿರಲಿಲ್ಲ. ಆದ್ರೆ ಗಿರಿ ಯಾರಿಗೂ ಮೋಸ ಮಾಡುತ್ತಿರಲಿಲ್ಲ. ಸುಳ್ಳು ಹೇಳುತ್ತಿರಲಿಲ್ಲ. ಹಾಗಾಗಿಯೇ ಅವನನ್ನು ಕಂಡರೆ ಎಲ್ಲರಿಗೂ ಇಷ್ಟವಾಗುತ್ತಿತ್ತು. ಅದೇ ರಘುವನ್ನು ಕಂಡರೆ, ಕೋಪ ಬರುತಿತ್ತು. ತನ್ನನ್ನು ಕಂಡರೆ ಎಲ್ಲರೂ ದೂರ ಸರಿಯುತ್ತಾರೆ. ಅದೇ ಗಿರಿಯನ್ನು ಕಂಡರೆ ಎಲ್ಲರೂ ಇಷ್ಟಪಡುತ್ತಾರೆಂದು, ರಘುವಿಗೆ ಗಿರಿಯನ್ನ ಕಂಡರೆ ಇಷ್ಟವಾಗುತ್ತಿರಲಿಲ್ಲ.
ಹಾಗಾಗಿ ಎಲ್ಲರೂ, ಎಲ್ಲ ಸಮಯದಲ್ಲೂ ನಿಮ್ಮನ್ನು ಇಷ್ಟಪಡಬೇಕಂತಿಲ್ಲ. ನೀವು ಒಳ್ಳೆಯವರಾಗಿದ್ದರೂ ಕೆಲವರಿಗೆ ನಿಮ್ಮ ಮೇಲೆ ಅಸೂಯೆ ಇರುತ್ತದೆ. ಹಾಗಾಗಿ ಯಾರು ಇಷ್ಟಪಟ್ಟರೂ, ಪಡದಿದ್ದರೂ ನೀವು ಒಳ್ಳೆಯ ಗುಣಗಳನ್ನೇ ಮೈಗೂಡಿಸಿಕೊಂಡಿರಿ.