ನಾವು ಕಳೆದ ಲೇಖನದಲ್ಲಿ ಗುರುವಾರದ ದಿನ ಯಾವ ಕೆಲಸಗಳನ್ನ ಮಾಡಬಾರದು. ಹಾಗೆ ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ಮಾಹಿತಿಯನ್ನ ನೀಡಿದ್ದೆವು. ಇಂದು ನಾವು ಗುರುವಾರದ ದಿನ ಯಾವ ಕೆಲಸವನ್ನು ಮಾಡಬೇಕು. ಹೀಗೆ ಮಾಡಿದ್ರೆ ಏನು ಉಪಯೋಗ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ..
ಗುರುವಾರದ ದಿನ ತಲೆ ಸ್ನಾನ ಮಾಡಬಾರದು, ಕೂದಲು ಕತ್ತರಿಸಬಾರದು, ಬಟ್ಟೆ ತೊಳೆಯಬಾರದು, ನೆಲ ಒರೆಸಬಾರದು. ಹೀಗೆಲ್ಲಾ ಮಾಡುವುದರಿಂದದ ಗುರುಗ್ರಹದ ಉತ್ತಮ ಪ್ರಭಾವ ಕಡಿಮೆಯಾಗುತ್ತದೆ. ಮತ್ತು ಅಪ್ಪ- ಮಕ್ಕಳ ನಡುವೆ ಮನಸ್ತಾಪ ಬರುತ್ತದೆ. ಪತಿ- ಪತ್ನಿ ಸಬಂಧದಲ್ಲಿ ಬಿರುಕು ಬರುತ್ತದೆ ಅಂತಾ ನಾವು ನಿಮಗೆ ಹೇಳಿದ್ದೆವು. ಇಂದು ನೀವು ಗುರುವಾರ ಮಾಡಬೇಕಾದ ಕೆಲಸಗಳೇನು ಅನ್ನೋದನ್ನ ನೋಡೋಣ.
ಗುರುವಾರ ಬ್ರಹಸ್ಪತಿಯ ವಾರವಾಗಿದೆ. ಬ್ರಹಸ್ಪತಿಗೆ ಇಷ್ಟವಾದ ಬಣ್ಣ ಅಂದ್ರೆ ಹಳದಿ ಬಣ್ಣ. ಹಾಗಾಗಿ ಈ ದಿನ ನೀವು ಹಳದಿ ಬಣ್ಣದ ಬಟ್ಟೆ ಧರಿಸಿದರೆ, ಉತ್ತಮ. ಮತ್ತು ಹಳದಿ ಬಣ್ಣದ ಬಟ್ಟೆಯನ್ನ ದಾನ ಮಾಡಿದರೂ ಉತ್ತಮ. ನೀವು ಉಳ್ಳವನಿಗೆ ಬಟ್ಟೆ ದಾನ ಮಾಡುವ ಬದಲು, ಬಟ್ಟೆಯ ಅವಶ್ಯಕತೆ ಇರುವವನಿಗೆ ದಾನ ಮಾಡಿ.
ಇನ್ನು ಗುರುವಾರದ ದಿನ ಕುಂಕುಮ ಮತ್ತು ಅರಿಷಿನ ದಾನ ಮಾಡಿದರೆ, ಆರ್ಥಿಕ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆಯಂತೆ. ಹಳದಿ ಬಣ್ಣವಾಗಿರುವ ಬೇಳೆಯನ್ನ ಕೂಡ ನೀವು ಬಡವರಿಗೆ ದಾನ ಮಾಡಬಹುದು. ಅಲ್ಲದೇ, ಈ ದಿನ ನೀವು ಗುರುಗಳ ಆರಾಧನೆ ಮಾಡಿ. ಗುರುವಾರ ಗುರುವಿನ ದಿನವಾಗಿರುವುದರಿಂದ, ನೀವು ರಾಯರು, ಸಾಯಿಬಾಬಾ, ದತ್ತಾತ್ರೇಯ, ದಕ್ಷಿಣಾ ಮೂರ್ತಿ ಯಾರ ಆರಾಧನೆಯನ್ನಾದರೂ ಮಾಡಬಹುದು.
ಗುರುವಾರದ ದಿನ ಯಾವ ಕೆಲಸಗಳನ್ನು ಮಾಡಬಾರದು ಅಂದಿದ್ದೆವೋ, ಅದರಲ್ಲಿ ಮನೆ ಕ್ಲೀನ್ ಮಾಡುವ ಕೆಲಸವನ್ನು ನೀವು ಬುಧವಾರವೇ ಮಾಡಿ ಮುಗಿಸಿ. ಇದರಿಂದ ಮನೆಯೂ ಚಂದಗಾಣಿಸುತ್ತದೆ. ನಿಮಗೆ ನಷ್ಟವೂ ಆಗುವುದಿಲ್ಲ.