Thursday, December 12, 2024

Latest Posts

ಸೌಂದರ್ಯ ಮತ್ತು ಆರೋಗ್ಯ ವೃದ್ಧಿಗಾಗಿ ಹೀಗೆ ಮಾಡಿ..

- Advertisement -

ಯಾರಿಗೆ ತಾನೇ ತಾವು ಆರೋಗ್ಯವಾಗಿಯೂ, ಸುಂದರವಾಗಿಯೂ ಇರಬೇಕು ಅಂತಾ ಆಸೆ ಇರುವುದಿಲ್ಲ ಹೇಳಿ..? ಅದಕ್ಕಾಗಿ ನಾವು ಏನೆಲ್ಲ ಮಾಡುತ್ತೇವೆ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್, ಔಷಧ ಬಳಸುತ್ತೇವೆ. ಆರೋಗ್ಯಕರ ಆಹಾರವನ್ನ ಸೇವಿಸುತ್ತೇವೆ. ಜ್ಯೂಸ್, ಹಣ್ಣು, ತರಕಾರಿ ಎಲ್ಲವನ್ನೂ ಸೇವಿಸುತ್ತೇವೆ. ಆದರೆ ನೀವು ಇದೆಲ್ಲ ಮಾಡುವುದರ ಜೊತೆಗೆ, ಇನ್ನೂ ಕೆಲ ಕೆಲಸಗಳನ್ನ ಮಾಡಬೇಕು. ಹಾಗಾದ್ರೆ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಸೌಂದರ್ಯ ಮತ್ತು ಆರೋಗ್ಯ ವೃದ್ಧಿಗಾಗಿ ತಿಂಗಳಲ್ಲಿ ಒಮ್ಮೆಯಾದರೂ ಉಪವಾಸ ಮಾಡಬೇಕು. ಅದು ಯಾವ ರೀತಿ ಎಂದರೆ, ಬರೀ ದ್ರವ ಪದಾರ್ಥ ಸೇವಿಸಬೇಕು. ಎಳನೀರು, ನೀರು, ಜ್ಯೂಸ್, ಮಜ್ಜಿಗೆ, ಹೀಗೆ ಬರೀ ದ್ರವ ಪದಾರ್ಥ ಸೇವಿಸಿ, ಉಪವಾಸ ಮಾಡಬೇಕು. ನಿಮಗೆ ಏನನ್ನೂ ಸೇವಿಸದೇ, ನಿರಾಹಾರ ಉಪವಾಸ ಮಾಡುವ ಶಕ್ತಿ ಇದ್ದಲ್ಲಿ, ಅದನ್ನೂ ಮಾಡಬಹುದು. ಇದು ಆರೋಗ್ಯ ಮತ್ತು ಸೌಂದರ್ಯ ಅಭಿವೃದ್ಧಿಗೆ ಸಹಾಯಕವಾಗಿದೆ.

ಏಕೆಂದರೆ, ನಾವು ಆಹಾರ ಸೇವಿಸುವುದನ್ನ ಕಡಿಮೆ ಮಾಡಿದಾಗ, ನಮ್ಮ ದೇಹ ಡೆಟಾಕ್ಸ್ ಆಗುತ್ತದೆ. ದೇಹ ಕ್ಲೀನ್ ಆಗುತ್ತದೆ. ಮತ್ತೆ ಪುನಃ ನಾವು ಆರೋಗ್ಯಕರ ಆಹಾರ ಸೇವನೆ ಮಾಡಿದಾಗ, ನಾವು ಆರೋಗ್ಯವಾಗಿಯೂ, ಸುಂದರವಾಗಿಯೂ ಇರುತ್ತೇವೆ. ಹಾಗಾಗಿ ತಿಂಗಳಿಗೆ ಒಮ್ಮೆಯಾದರೂ ಉಪವಾಸ ಮಾಡಿದರೆ ಉತ್ತಮ.

ಇನ್ನು ನಾನು ಒಂದು ದಿನ ಪೂರ್ತಿ, ಬರೀ ಹಣ್ಣು, ಹಾಲು, ತರಕಾರಿ, ಸಪ್ಪೆ ಆಹಾರ ಸೇವಿಸಬಲ್ಲೆ ಎಂದಿದ್ದರೆ, ವಾರದಲ್ಲಿ ಒಂದು ದಿನ ಈ ರೀತಿಯ ಆಹಾರ ಸೇವಿಸಿ. ಇದು ಇನ್ನೂ ಉತ್ತಮವಾದ ಡಯಟ್‌ ಆಗಿದೆ.

ನಿಮ್ಮ ಕೂದಲನ್ನು ಈ ರೀತಿ ಕಪ್ಪಾಗಿಸಬಹುದು ನೋಡಿ..

ಉಲ್ಟಾ ವಡಾ ಪಾವ್ ರೆಸಿಪಿ..

ಹಲಸಿನಕಾಯಿ ಗ್ರೇವಿ ರೆಸಿಪಿ

- Advertisement -

Latest Posts

Don't Miss