ಕಳೆದ ಭಾಗದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಮಾನಸಿಕವಾಗಿ ನೆಮ್ಮದಿಯಾಗಿರಲು ಯಾವ ಉಪಾಯ ಮಾಡಬೇಕು ಎಂದು ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಇನ್ನೂ 3 ಟಿಪ್ಸ್ ಕೊಡಲಿದ್ದೇವೆ.
ಮೂರನೇಯ ಕೆಲಸ, ನಿಮಗಾಗಿ ನೀವೇ ಪ್ರೋತ್ಸಾಹದಾಯಕ ಪತ್ರ ಬರೆದುಕೊಳ್ಳಿ. ಭವಿಷ್ಯದಲ್ಲಿ ನಿಮ್ಮನ್ನು ನೀವು, ಹೇಗೆ ನೋಡಲು ಬಯಸುತ್ತೀರಿ..? ಭವಿಷ್ಯದಲ್ಲಿ ನೀವೇನಾಗ ಬಯಸುತ್ತೀರಿ..? ಭವಿಷ್ಯದ ಬಗ್ಗೆ ನಿಮಗಿರುವ ಕನಸುಗಳೇನು..? ಅದಕ್ಕಾಗಿ ತಾನೇನು ಮಾಡಬೇಕು..? ಏನೇನು ಮಾಡಿದ್ದೇನೆ..? ಹೀಗೆ ನಿಮ್ಮ ಭವಿಷ್ಯದ ಪತ್ರವನ್ನ ನೀವೇ ಬರೆಯಿರಿ. ಮತ್ತು ಅದರಲ್ಲಿರುವಂತೆ ಜೀವನ ಮಾಡಿ. ಖಂಡಿತ ನಿಮ್ಮ ಗುರಿಯನ್ನ ನೀವು ಸಾಧಿಸುತ್ತೀರಿ.
ನಾಲ್ಕನೇಯ ಕೆಲಸ, ನಿಮ್ಮನ್ನು ನೀವು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ. ಸೂರ್ಯ ಸೂರ್ಯನೇ, ಚಂದ್ರ ಚಂದ್ರನೇ.. ಸೂರ್ಯ ಕಂಗೊಳಿಸುವ ಸಮಯ ಬಂದಾಗ, ಅವನು ಕಂಗೊಳಿಸುತ್ತಾನೆ. ಚಂದ್ರನ ಸಮಯ ಬಂದಾಗ, ಅವನು ಹೊಳೆಯುತ್ತಾನೆ. ಅದೇ ರೀತಿ ನಮ್ಮ ನಮ್ಮ ಸಮಯ ಬಂದಾಗ ನಾವು ಕಂಗೊಳಿಸುತ್ತೇವೆ. ಅಲ್ಲಿಯವರೆಗೆ ತಾಳ್ಮೆಯಿಂದ ಇದ್ದು, ನಮ್ಮ ಗುರಿ ಮುಟ್ಟುವ ಪ್ರಯತ್ನ ಮಾಡಬೇಕು.
ಐದನೇಯ ಕೆಲಸ, ಇನ್ನೊಬ್ಬರ ಮಾತಿಗೆ ಕಿವಿಗೊಡಬೇಡಿ. ನಿಮ್ಮ ಯಶಸ್ಸಿನತ್ತ, ನಿಮ್ಮ ಗುರಿ ಇರಲಿ. ನೀವು ವಿದ್ಯಾರ್ಥಿಯಾಗಿದ್ದು, ಚೆನ್ನಾಗಿ ಅಂಕ ಗಳಿಸಿ, ಒಳ್ಳೆಯ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಅಂತಿದ್ರೆ, ಅದರ ಬಗ್ಗೆಯಷ್ಟೇ ಯೋಚಿಸಿ. ಅದನ್ನು ಬಿಟ್ಟು ಇನ್ನೊಬರು ಆಡುವ ಕೊಂಕು ಮಾತಿಗೆ ಕಿವಿಗೊಡಬೇಡಿ. ಅಂಥವರಿಗೆ ಬೆಲೆ ಕೊಡಬೇಡಿ. ಹಲವರಿಗೆ ಮಾನಸಿಕ ಹಿಂಸೆ ಆಗುವುದೇ, ಇಂಥ ಕೊಂಕು ಮಾತುಗಳಿಂದ. ಹಲವರನ್ನ ಕುಗ್ಗಿಸುವುದೇ, ಇಂಥ ಚುಚ್ಚು ಮಾತುಗಳು. ಹಾಗಾಗಿ ಕೊಂಕು ಮಾತನಾಡುವವರನ್ನ ಕಡೆಗಣಿಸಿ, ನಿಮ್ಮ ಗುರಿಯತ್ತ ಮುನ್ನುಗ್ಗಿ.