Friday, February 7, 2025

Latest Posts

ನಿದ್ದೆ ಬರದಿದ್ದರೆ ಅಥವಾ ಗೊರಕೆ ಸಮಸ್ಯೆ ಇದ್ದಲ್ಲಿ ಈ ಪರಿಹಾರ ಮಾಡಿಕೊಳ್ಳಿ..

- Advertisement -

ಒಂದು ಜೀವಿ ಅಂದ ಮೇಲೆ ಅದಕ್ಕೆ ಆರೋಗ್ಯ ಸಮಸ್ಯೆ ಬರಲೇಬೇಕು. ಅದರಲ್ಲೂ ಮನುಷ್ಯನಿಗೆ ಆರೋಗ್ಯ ಸಮಸ್ಯೆ ಕೊಂಚ ಹೆಚ್ಚೇ ಎನ್ನಬಹುದು. ಅದರಲ್ಲೂ ಕೆಲವರಿಗೆ ನಿದ್ದೆಯ ಸಮಸ್ಯೆ ಇರತ್ತೆ. ಮತ್ತೆ ಕೆಲವರಿಗೆ ನಿದ್ದೆ ಬಂದರೆ, ಬೇಡವೆಂದರೂ ಗೊರಕೆ ಬರುತ್ತದೆ. ವಿದೇಶದಲ್ಲಿ ಎಷ್ಟೋ ಹೆಣ್ಣು ಮಕ್ಕಳು, ನನ್ನ ಪತಿ ಗೊರಕೆ ಹೊಡೆಯುತ್ತಾನೆ. ಇದರಿಂದ ನಾನು ಎಷ್ಟೋ ರಾತ್ರಿ ನಿದ್ದೆ ಮಾಡಿಲ್ಲ. ಇದರಿಂದ ನನ್ನ ಆರೋಗ್ಯ ಹಾಳಾಗುತ್ತಿದೆ ಎಂದು ಕಾರಣ ಹೇಳಿ, ಡಿವೋರ್ಸ್ ಕೊಟ್ಟಿದ್ದಾರಂತೆ. ಹಾಗಾಗಿ ಈ ಗೊರಕೆ ಮತ್ತು ನಿದ್ರಾಹೀನತೆ ಸಮಸ್ಯೆಗೆ ಇಂದು ನಾವು ಪರಿಹಾರ ಹೇಳಲಿದ್ದೇವೆ..

ಬ್ರಾಹ್ಮಿ ಎಲೆಯನ್ನು ಪ್ರತಿದಿನ ಸೇವಿಸಿದ್ದಲ್ಲಿ ಆಗುವ ಆರೋಗ್ಯಕರ ಲಾಭವೇನು ಗೊತ್ತಾ..?

ಆಯುರ್ವೇದದಲ್ಲಿ ಹಸುವಿನ ಶುದ್ಧ ತುಪ್ಪವನ್ನ ಔಷಧಿ ಅಂತಲೇ ಪರಿಗಣಿಸಲಾಗಿದೆ. ಹಸುವಿನ ತುಪ್ಪವನ್ನ ಲಿಮಿಟಿನಲ್ಲಿ ಬಳಸಿದ್ರೆ, ಇದು ನಿಮ್ಮ ಆರೋಗ್ಯ ಮತ್ತು ಆಯುಷ್ಯವನ್ನ ಗಟ್ಟಿ ಮಾಡತ್ತೆ. ನೀವು ಪ್ರತಿದಿನ ಊಟದ ಜೊತೆ ಒಂದು ಸ್ಪೂನ್ ತುಪ್ಪ ಬಳಸಿದ್ರೆ ಸಾಕು. ಹಲವು ಖಾಯಿಲೆಗಳು ನಿಮ್ಮಿಂದ ದೂರ ಓಡುತ್ತದೆ. ಉತ್ತಮ ಆರೋಗ್ಯ ಮತ್ತು ಸೌಂದರ್ಯ ನಿಮ್ಮ ಪಾಲಾಗುತ್ತದೆ. ಅಂಥ ಅದ್ಭುತ ಶಕ್ತಿ ಇದೆ ಹಸುವಿನ ತುಪ್ಪದಲ್ಲಿ.

ನಿಮಗೆ ಗೊರಕೆ ಸಮಸ್ಯೆ ಇದ್ದಲ್ಲಿ, ಅಥವಾ ನಿದ್ರಾಹೀನತೆ ಸಮಸ್ಯೆ ಇದ್ದಲ್ಲಿ ಎರಡೇ ಎರಡು ಡ್ರಾಪ್ಸ್ ತುಪ್ಪವನ್ನು ಕೊಂಚ ಬಿಸಿ ಮಾಡಿ. ಅದು ಉಗುರು ಬೆಚ್ಚಗಿರುವಾಗಲೇ, ಅದನ್ನ ಮೂಗಿಗೆ ಹಾಕಿ, ಮಲಗಿಬಿಡಿ. ಹೀಗೆ ತುಪ್ಪವನ್ನು ಮೂಗಿಗೆ ಹಾಕುವಾಗ ಎಚ್ಚರಿಕೆಯಿಂದ ಹಾಕಿ. ನೀವು ಸರಿಯಾದ ರೀತಿಯಲ್ಲಿ ಎರಡು ಡ್ರಾಪ್ಸ್ ತುಪ್ಪವನ್ನ ಮೂಗಿಗೆ ಹಾಕಿದ್ರೆ, ನಿಮಗೆ ಗೊರಕೆ ಬರುವುದಿಲ್ಲ. ಉತ್ತಮ ನಿದ್ರೆಯೂ ಬರುತ್ತದೆ.

ನೀರು ಕುಡಿಯಲು ಯಾವ ರೀತಿಯ ಬಾಟಲಿಯನ್ನು ಬಳಸಬೇಕು..?

ಇನ್ನು ಬೆಚ್ಚಗಿನ ತುಪ್ಪವನ್ನು ಮೂಗಿಗೆ ಹಾಕಿದ್ರೆ, ಸೈನಸ್ ಬರುವುದಿಲ್ಲ. ಪದೇ ಪದೇ ತಲೆನೋವು ಬರುತ್ತಿದ್ದರೆ, ಈ ಪ್ರಯೋಗ ಮಾಡಿದ್ದಲ್ಲಿ ಅದರಿಂದಲೂ ಮುಕ್ತಿ ಸಿಗುತ್ತದೆ. ಪದೇ ಪದೇ ನೆಗಡಿ ಕೆಮ್ಮು ಬರುವವರೂ ಕೂಡ, ಈ ಪ್ರಯೋಗ ಮಾಡಿ ನೋಡಬಹುದು. ಕೆಲವರಿಗೆ ಬ್ರೇನ್‌ನಲ್ಲಿ ರಕ್ತ ಹೆಪ್ಪುಗಟ್ಟಿ ನೆನಪಿನ ಶಕ್ತಿಯೇ ಹೋಗುತ್ತದೆ. ಅಂಥವರಿಗೂ ಮೂಗಲ್ಲಿ ಬೆಚ್ಚಗಿನ ತುಪ್ಪವನ್ನು ಎರಡೇ ಡ್ರಾಪ್ಸ್ ಹಾಕಿ ಪ್ರಯೋಗ ಮಾಡಬಹುದು.

- Advertisement -

Latest Posts

Don't Miss