ನಾವು ಆರೋಗ್ಯವಾಗಿರಲು ನಾನಾ ಕಸರತ್ತು ಮಾಡುತ್ತೇವೆ. ಉತ್ತಮ ಆಹಾರ, ವ್ಯಾಯಾಮ ಇತ್ಯಾದಿ ಮಾಡುತ್ತೇವೆ. ಆದ್ರೆ ನೀವು ಎಷ್ಟೇ ಉತ್ತಮ ಆಹಾರ ಸೇವಿಸಿದ್ರೂ, ಅದನ್ನು ಸೇವಿಸುವ ಸಮಯ ಸರಿ ಇಲ್ಲದಿದ್ದಲ್ಲಿ, ಅಂಥ ಆಹಾರ ಸೇವಿಸಿ, ಉಪಯೋಗವಿರುವುದಿಲ್ಲ. ಹಾಗಾಗಿ ನಾವಿಂದು ಎಂಥ ಸಮಯದಲ್ಲಿ ಆಹಾರ ಸೇವಿಸಬೇಕು. ಮತ್ತು ಎಂಥ ಸಮಯದಲ್ಲಿ ಆಹಾರ ಸೇವಿಸಬಾರದು ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.
ಅಕ್ಟೋಬರ್ 2021ರ ಮಾಸ ಭವಿಷ್ಯ, ಈ ರಾಶಿಗೆ ಶುಕ್ರ ದೆಸೆ ಶುರೂ..?!
ಹಿಂದೂ ಧರ್ಮದ ಪ್ರಕಾರ ಅಡಿಗೆ ಮಾಡುವವರು ಮೊದಲು ಸ್ನಾನ ಮಾಡಬೇಕು. ನಂತರ ಅಡಿಗೆ ಮಾಡಬೇಕು. ಹಾಗೆ ಅಡುಗೆ ಮಾಡುವಾಗ ಮೊದಲು ಹಸು, ನಾಯಿ ಮತ್ತು ಕಾಗೆಗೆ ಕೊಂಚ ಆಹಾರ ತೆಗೆದಿಡಬೇಕು. ನಂತರ ಮನೆಮಂದಿಗೆ ಅಡುಗೆ ಮಾಡಬೇಕು. ಹೀಗೆ ಅಡುಗೆ ಮಾಡಿ ತಿನ್ನುವುದರಿಂದ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಮನೆಗೂ ಕೂಡ ಒಳ್ಳೆಯದು.
ಅನ್ನಾಹಾರವಿಲ್ಲದೆ ಸೀತೆ ಅಶೋಕ ವನದಲ್ಲಿ ಹೇಗೆ ಬದುಕಿದ್ದಳು..?
ಇನ್ನು ನೀವು ಊಟ ಮಾಡುವ ವೇಳೆ. ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿ. ಇದರಿಂದ ಪರಿವಾರದಲ್ಲಿ ಸುಖ, ಶಾಂತಿ, ನೆಮ್ಮದಿ ಖುಷಿ ಇರುತ್ತದೆ. ಡೈನಿಂಗ್ ಟೇಬಲ್ ಬಳಸುವ ಬದಲು, ನೆಲದ ಮೇಲೆ ಕುಳಿತು ಊಟ ಮಾಡಿ. ನೆಲದ ಮೇಲೆ ಊಟ ಮಾಡುವುದರಿಂದ ಆರೋಗ್ಯದಲ್ಲಿ ಅಭಿವೃದ್ಧಿಯಾಗುತ್ತದೆ. ಊಟಕ್ಕೂ ಮುನ್ನ ಕೈ ಕಾಳು ತೊಳೆಯಿರಿ. ಊಟಕ್ಕೂ ಮುನ್ನ ಹೇಳುವ ಶ್ಲೋಕ ಗೊತ್ತಿದ್ದರೆ, ಶ್ಲೋಕ ಹೇಳಿ.
ಇನ್ನು ಯಾವ ಸಮಯದಲ್ಲಿ ಊಟ ಮಾಡಬೇಕು ಅನ್ನೋ ಬಗ್ಗೆ ಮಾತನಾಡುವುದಾದರೆ, ಬೆಳಿಗ್ಗೆ 8 ಗಂಟೆಯೊಳಗೆ ತಿಂಡಿ ತಿನ್ನಬೇಕು. ಆ ತಿಂಡಿಯಿಂದ ನಿಮ್ಮ ಹೊಟ್ಟೆ ಚೆನ್ನಾಗಿ ತುಂಬಿರಬೇಕು. ಇನ್ನು ಮಧ್ಯಾಹ್ನ 1 ಗಂಟೆಯೊಳಗೆ ಊಟ ಮುಗಿಸಿ. ರಾತ್ರಿ ಊಟ 8 ಗಂಟೆಯೊಳಗೆ ಮುಗಿಸಿ, 9 ಗಂಟೆಗೆ ನಿದ್ದೆ ಮಾಡಿದರೆ ಉತ್ತಮ. ಒಂದು ಹೊತ್ತು ಊಟ ಮಾಡುವವನನ್ನು ಯೋಗಿ ಎನ್ನುತ್ತಾರೆ. 2 ಹೊತ್ತು ಊಟ ಮಾಡುವವರನ್ನು ಭೋಗಿ ಎನ್ನುತ್ತಾರೆ. ದಿನಪೂರ್ತಿ ತಿನ್ನುವವನನ್ನು ರೋಗಿ ಎನ್ನುತ್ತಾರೆ.