Health Tips: ವೈದ್ಯೆ ಮತ್ತು ಆಹಾರ ತಜ್ಞೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಆಹಾರ ಸೇವನೆ ಬಗ್ಗೆ ಹಲವು ಮಾಹಿತಿ ನೀಡಿದ್ದಾರೆ. ಎಂಥ ಆಹಾರಗಳನ್ನು ಸೇವಿಸಬೇಕು..? ಯಾವ ಆಹಾರ ಸೇವಿಸಿದರೆ ಏನು ಲಾಭ..? ಒಂದೇ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಏನಾಗತ್ತೆ..? ಹೀಗೆ ಹಲವು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ, ಪ್ರೋಟೀನ್ ಪೌಡರ್ ಸೇವನೆಯಿಂದ ಆರೋಗ್ಯದ ಮೇಲೆ ಯಾವ ರೀತಿ ಕೆಟ್ಟ ಪರಿಣಾಮ ಬೀರುತ್ತದೆ ಅನ್ನೋ ಬಗ್ಗೆ ವೈದ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಯಾವುದೇ ಕಾರಣಕ್ಕೂ ಯಾರೂ ಪ್ರೋಟೀನ್ ಪೌಡರ್ ಬಳಸಬಾರದು ಅಂತಾರೆ ವೈದ್ಯರು. ಏಕೆಂದರೆ ಪ್ರೋಟೀನ್ ಪೌಡರ್ ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಇದರಿಂದ ಮೂತ್ರಕೋಶದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಆರೋಗ್ಯ ಹದಗೆಟ್ಟು ಹೋಗುತ್ತದೆ. ಹಾಗಾಗಿ ಪ್ರೋಟೀನ್ ಪೌಡರ್ ಸೇವಿಸಬಾರದು ಅಂತಾರೆ ವೈದ್ಯರು.
ಇನ್ನು ಪ್ರೋಟೀನ್ ನಮ್ಮ ದೇಹದಲ್ಲಿನ ಜೀವಕೋಶ ಬೆಳೆಸಿ, ನಮ್ಮ ದೇಹದ ಬೆಳವಣಿಗೆಯಾಗಲು ಸಹಕಾರಿಯಾಗುತ್ತದೆ. ಹಾಗಾಗಿ ಪುಟ್ಟ ಮಕ್ಕಳಿಗೆ ಹೆಚ್ಚು ಪ್ರೋಟೀನ್ ಯುಕ್ತ ಆಹಾರವನ್ನು ನೀಡಲಾಗುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಪ್ರೋಟೀನ್ ಸೇವನೆ ಎಂದಿಗೂ ಮಾಡಬಾರದು ಅಂತಾರೆ ವೈದ್ಯರು. ಏಕೆಂದರೆ, ನಾವು ಅತೀಯಾಗಿ ಸೇವಿಸುವ ಪ್ರೋಟೀನ್ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರದಲ್ಲಿ ನಮ್ಮ ದೇಹಕ್ಕೆ ಸಿಗುವ ಪ್ರೋಟೀನ್ ಅಷ್ಟೇ ನಮಗೆ ಸಾಕಾಗುತ್ತದೆ. ಅದಕ್ಕಾಗಿ ನಾವು ಎಕ್ಸ್‌ಟ್ರಾ ಪ್ರೋಟೀನ್ ಸೇವನೆ ಮಾಡುವ ಅಗತ್ಯವಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..




