Health Tips: ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಕೆಲವರು ಬೇರೆ ವಿಧಿ ಇಲ್ಲದೇ, ಪ್ಲಾಸ್ಟಿಕ್ ಬಾಟಲಿ, ಡಬ್ಬಗಳನ್ನೇ ಬಳಸುತ್ತಿದ್ದಾರೆ. ಅದರಲ್ಲೂ ಪ್ಲಾಸ್ಟಿಕ್ ಬಾಟಲಿ ಬಳಸಿ, ನೀರು ಕುಡಿದರೆ, ಅದಕ್ಕಿಂತ ಹಾನಿಕಾರಕ ಮತ್ತೊಂದಿಲ್ಲ. ಹಾಗಾದ್ರೆ ಪ್ಲಾಸ್ಟಿಕ್ ಬಾಟಲಿ ಬಳಕೆ ಬಗ್ಗೆ ವೈದ್ಯರು ಹೇಳಿದ್ದೇನು ಅಂತಾ ತಿಳಿಯೋಣ ಬನ್ನಿ..
ಕೆಲವರಿಗೆ ಕಿಡ್ನಿಯಲ್ಲಿ ಕಲ್ಲು ಆದಾಗ, ಯೂರಿನ್ ಇನ್‌ಫೆಕ್ಷನ್ ಆದಾಗ ಮಾತ್ರ ನೀರು ಕುಡಿಯುವುದು ನೆನಪಿಗೆ ಬರುತ್ತದೆ. ಆದರೆ, ನೀವು ಮೂತ್ರವಿಸರ್ಜನೆ ಮಾಡಿ ಬಂದ ಬಳಿಕ, ಒಂದೊಂದು ಗ್ಲಾಸ್ ನೀರು ಕುಡಿಯಬೇಕು. ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುತ್ತಾರೆ ವೈದ್ಯರು.
ಯಾರಾದರೂ ಉಪವಾಸ ಮುರಿಯುವುದಿದ್ದರೆ, ಮೊದಲು ತಿಂಡಿ ತಿನ್ನಬಾರದು. ನೀರು ಅಥವಾ ಜ್ಯೂಸ್, ಎಳನೀರು, ಇಂಥ ದ್ರವ ಪದಾರ್ಥವನ್ನು ಕುಡಿಯಬೇಕು. ನೀರು ಕುಡಿಯುವುದು ಎಲ್ಲಕ್ಕಿಂತ ಉತ್ತಮ ಆಯ್ಕೆ. ಏಕೆಂದರೆ, ನೀರಿನ ಸೇವನೆಯಿಂದ, ನಮ್ಮ ದೇಹದ ಒಳಭಾಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಶುರು ಮಾಡುತ್ತದೆ. ಹೀಗೆ ದೇಹದ ಭಾಗಗಳು ಕಾರ್ಯ ನಿರ್ವಹಿಸಲು ಶುರು ಮಾಡಿದ ಬಳಿಕ, ನೀವು ತಿಂಡಿ ಸೇವನೆ ಮಾಡಿದಾಗ, ಆ ತಿಂಡಿಯ ಸೇವನೆಯಿಂದ ನಿಮಗೆ ಶಕ್ತಿ, ಮತ್ತು ಉಪಯೋಗವಾಗುತ್ತದೆ. ಮತ್ತು ಇದು ಆಹಾರ ಸೇವಿಸುವ ಸರಿಯಾದ ವಿಧಾನ ಎನ್ನುತ್ತಾರೆ ವೈದ್ಯರು.
ನಿಮಗೆ ಎಷ್ಟು ನೀರು ಕುಡಿದು ಜೀರ್ಣಿಸಿಕೊಳ್ಳುವ ಶಕ್ತಿ ಇದೆಯೋ, ಅಷ್ಟು ನೀರನ್ನು ನೀವು ಕುಡಿಯಬಹುದು. ಆದರೆ ಹಾಗೆ ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿಟ್ಟು ಕುಡಿದರೆ ಏನೂ ಪ್ರಯೋಜನವಿಲ್ಲ. ಹಾಗಾಗಿ ಮಣ್ಣಿನ ಮಡಿಕೆ, ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿಸಿಟ್ಟು ಕುಡಿಯಿರಿ. ಇದು ಆರೋಗ್ಯಕ್ಕೆ ತುಂಬಾ ಉತ್ತಮವಾಗಿರುತ್ತದೆ. ನಿಮಗೆ ಸಾಧ್ಯವಾಗಿದ್ದಲ್ಲಿ, ಬೆಳ್ಳಿ ಪಾತ್ರೆಯಲ್ಲಿ ನೀರು ತುಂಬಿಸಿಟ್ಟು ಕುಡಿದರೆ, ಆರೋಗ್ಯ ಇನ್ನೂ ಚೆನ್ನಾಗಿರುತ್ತದೆ.
ಹಾಗಾದ್ರೆ ಪ್ಲಾಸ್ಟಿಕ್ ಬಾಟಲಿಯಲ್ಲಿ ಯಾಕೆ ನೀರು ಕುಡಿಯಬಾರದು ಅಂದ್ರೆ, ಹಾರ್ಮೋನಲ್ ಇಂಬ್ಯಾಲೆನ್ಸ್ ನಿಂದ ಹಿಡಿದು, ಹಲವು ಆರೋಗ್ಯ ಸಮಸ್ಯೆಯನ್ನು ನೀವು ಎದುರಿಸಬೇಕು ಎನ್ನುತ್ತಾರೆ ವೈದ್ಯರು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅದೇ ನೀವು ಪ್ಲಾಸ್ಟಿಕ್ ಬಾಟಲಿ ಬಳಸದೇ ನೀರು ಕುಡಿದಿದ್ದಲ್ಲಿ, ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನದಿ, ಬಾವಿಯಲ್ಲಿ ಸಿಗುವ ನೀರುಗಳ ಸೇವನೆಯಿಂದ ಮನುಷ್ಯನ ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕು ಎಂದಲ್ಲಿ, ಈ ವೀಡಿಯೋ ವೀಕ್ಷಿಸಿ.

