Health Tips: ಹಿಂದಿನ ಕಾಲದಲ್ಲಿ ಡಯಟ್ ಅನ್ನೋ ಮಾತೇ ಇರಲಿಲ್ಲ. ಜಿಮ್ ಅನ್ನೋ ಹೆಸರೇ ಕೇಳಿರಲಿಲ್ಲ ನಮ್ಮ ಹಿರಿಯರು. ಮನೆಯಲ್ಲೇ ಬೆಳೆದ ತರಕಾರಿ, ಹಣ್ಣು ತಿಂದು, ಶುದ್ಧ ಹಸುವಿನ ಹಾಲು, ಹಾಲಿನಿಂದ ತಯಾರಿಸಿ, ತುಪ್ಪ, ಬೆಣ್ಣೆ, ಮೊಸರು, ಮಜ್ಜಿಗೆ ಕುಡಿದು, ಮೈ ಬಗ್ಗಿಸಿ ದುಡಿದು ಜೀವಿಸುತ್ತಿದ್ದರು. ಅಂಥವರೆಲ್ಲ ಇಂದಿನ ಕಾಲದಲ್ಲೂ ಜೀವಂತವಾಗಿದ್ದಾರೆ. ಗಟ್ಟಿಮುಟ್ಟಾಗಿದ್ದಾರೆ. ಆದರೆ ಇಂದಿನ ಕಾಲದಲ್ಲಿ ಕಟ್ಟು ಮಸ್ತಾದ ದೇಹ ಹೊಂದಲು, ಆರೋಗ್ಯವಾಗಿರಲು ನಾವು ಡಯಟ್ ಮಾಡುತ್ತೇವೆ. ಜಿಮ್ ಸೇರುತ್ತೇವೆ. ಅದರಲ್ಲೂ ಡಯಟ್ ಅನ್ನೋ ಹೆಸರಲ್ಲಿ, ವಿವಿಧ ರೀತಿಯ ತಿಂಡಿ ಮಾಡಿ ಸೇವಿಸುತ್ತೇವೆ. ಅಂಥದ್ದೇ ಡಯಟ್ ಫುಡ್ ಆಗಿರುವ ಸ್ಮೂದಿ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ.
ಸ್ಮೂದಿ ಎಂದರೆ, ಹಣ್ಣು, ಓಟ್ ಮೀಲ್, ಯೋಗರ್ಟ್ ಎಲ್ಲವೂ ಸೇರಿಸಿ, ಎಲ್ಲವನ್ನೂ ಮಿಕ್ಸಿಯಲ್ಲಿ ರುಬ್ಬಿ ಸೇವಿಸಲಾಗುತ್ತದೆ. ಇದು ತಿನ್ನಲು ಕೂಡ ಅಷ್ಟು ರುಚಿಯಾಗಿರುವುದಿಲ್ಲ. ಆರೋಗ್ಯಕ್ಕೆ ಆಗುವ ಲಾಭ ಕೂಡ ಅಷ್ಟಕ್ಕಷ್ಟೇ. ಏಕೆಂದರೆ, ನೀವು ಆರೋಗ್ಯಕರವಾದ ಹಣ್ಣು, ಯೋಗರ್ಟ್, ಜೇನು, ಓಟ್ ಮೀಲ್ ಎಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿದಾಗ, ಮಿಕ್ಸಿಯಲ್ಲಿ ಉಂಟಾಗುವ ಶಾಖಕ್ಕೆ, ಆ ಆರೋಗ್ಯಕರ ಆಹಾರದಲ್ಲಿರುವ ಪೋಷಕಾಂಶವೆಲ್ಲ ಕಳೆದು ಹೋಗುತ್ತದೆ.
ಅಂಥ ಆಹಾರ ಸೇವಿಸಿದರೆ, ನಿಮ್ಮ ದೇಹಕ್ಕೆ ಪೂರ್ತಿ ಪೋಷಕಾಂಶ ಸಿಗುವುದಿಲ್ಲ. ಅರ್ಧಕ್ಕರ್ಧ ಪೋಷಕಾಂಶ ಮಿಕ್ಸಿಯಲ್ಲೇ ಉಳಿಯುತ್ತದೆ. ಹಾಗಾಗಿ ನೀವು ತೂಕ ಕಡಿಮೆ ಮಾಡಬೇಕು ಅಂದ್ರೆ, ಹಣ್ಣನ್ನು ತಿನ್ನಿ. ಅದನ್ನು ಬಿಟ್ಟು ಹಣ್ಣಿನ ಜ್ಯೂಸ್, ಸ್ಮೂದಿ ತಯಾರಿಸಿ ಸೇವಿಸುವುದರಿಂದ ಅದರಲ್ಲಿರುವ ಪೋಷಕಾಂಶ ಹಾಳಾಗುತ್ತದೆ. ಏಕೆಂದರೆ, ಹಣ್ಣಿನಲ್ಲಿರುವ ನಾರಿನಂಶ ನಮ್ಮ ದೇಹ ಸೇರಬೇಕು ಅಂದ್ರೆ, ನಾವು ಹಣ್ಣನ್ನು ಹಾಗೇ ಸೇವಿಸಬೇಕು.
ಇಲ್ಲವಾದಲ್ಲಿ ಹಣ್ಣಿನಲ್ಲಿರುವ ಆರೋಗ್ಯಕರ ಗುಣಗಳು ಕಡಿಮೆಯಾಗುತ್ತದೆ. ಕೆಲವೊಮ್ಮೆ ಸೇಬು ಹಣ್ಣು, ಸೀಬೆಹಣ್ಣು, ಚಿಕ್ಕು ಹಣ್ಣು ಇವೆಲ್ಲದಕ್ಕೂ ನಾವು ಚಾಕು ಸಹ ಮುಟ್ಟಿಸಬಾರದು. ಹಾಗೇ ತಿಂದರೆ, ನಮ್ಮ ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶ ಸಿಕ್ಕು, ನಮಗೆ ಆರೋಗ್ಯಕರ ಲಾಭ ದೊರೆಯುತ್ತದೆ. ಆದರೆ ಹಣ್ಣು ಹಾಳಾಗಿದೆಯಾ ಇಲ್ಲವಾ ನೋಡಲಷ್ಟೇ ನಾವು ಆ ಹಣ್ಣನ್ನು ಎರಡು ತುಂಡು ಮಾಡಬಹುದು. ಅದನ್ನು ಬಿಟ್ಟು ನೀವು ಹಣ್ಣಿನ ಸಲಾಡ್ ಮಾಡಬೇಕು ಎಂದು ಹಣ್ಣು, ತರಕಾರಿಯನ್ನು ಸಣ್ಣಗೆ ಹೆಚ್ಚಿದರೆ, ಅದರಲ್ಲಿರುವ ಎಲ್ಲ ಆರೋಗ್ಯಕರ ಸತ್ವಗಳು ಚಾಕುವಿಗೆ ಅಂಟುತ್ತದೆ ಹೊರತು, ನಿಮ್ಮ ದೇಹ ಸೇರುವುದಿಲ್ಲ.