ದೇಹದ ಮೇಲೆ ಬೊಬ್ಬೆಗಳು ಬಂದಿದೆಯಾ..? ಹಾಗಾದ್ರೆ ಎಚ್ಚರ..

Health Tips: ಕರ್ನಾಟಕ ಟಿವಿ ಹೆಲ್ತ್, ಜನರಿಗೆ ಆರೋಗ್ಯದ ಬಗ್ಗೆ ಇರಬೇಕಾದ ಅವಶ್ಯಕ ಮಾಹಿತಿಯನ್ನು ನೀಡುತ್ತ ಬರುತ್ತಿದೆ. ನಾಯಿ ಕಚ್ಚಿದರೆ ಹೇಗೆ ಚಿಕಿತ್ಸೆ ಪಡೆಯಬೇಕು..? ಮುಟ್ಟಿನ ಸಮಸ್ಯೆ, ಕ್ಯಾನ್ಸರ್ ಸಮಸ್ಯೆ, ಪ್ರೆಗ್ನೆನ್ಸಿ ಸಮಸ್ಯೆ ಸೇರಿ, ಹಲವು ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಬಗ್ಗೆ ತಿಳಿಸಿಕೊಟ್ಟಿದೆ. ಇದೀಗ ವೈದ್ಯರಾದ ಡಾ.ಆಂಜೀನಪ್ಪ, ದೇಹದ ಮೇಲೆ ಬೊಬ್ಬೆಯಾಗುವ ಬಗ್ಗೆ ಅಂದ್ರೆ ಚಿಕನ್ ಫಾಕ್ಸ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೇಸಿಗೆ ಗಾಲದಲ್ಲಿ ಹೆಚ್ಚಾಗಿ ಚಿಕನ್ ಫಾಕ್ಸ್ ಆಗುತ್ತಿದ್ದು, ಇದು ವೈರಲ್ ಇನ್‌ಫೆಕ್ಷನ್ ಎಂದು ವೈದ್ಯರು ಹೇಳುತ್ತಾರೆ. ಚಿಕನ್ ಫಾಕ್ಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಾಗಾಗಿ ಮಕ್ಕಳಿಗೆ ಚಿಕನ್ ಫಾಕ್ಸ್ ಬಂದಾಗ, ಅವರನ್ನು ಶಾಲೆಗೆ ಕಳುಹಿಸಲಾಗುವುದಿಲ್ಲ. ಏಕೆಂದರೆ ಇವರಿಂದ ಬೇರೆ ಮಕ್ಕಳಿಗೂ ಈ ಖಾಯಿಲೆ ಹರಡುತ್ತದೆ. ಇನ್ನು ಹಳ್ಳಿ ಕಡೆ ಜನ, ಈ ಖಾಯಿಲೆಯನ್ನು ಅಮ್ಮ ಎನ್ನುತ್ತಾರೆ. ಅವರು ಮಕ್ಕಳ ಸುತ್ತಲೂ ಬೇವಿನ ಎಲೆ ಹರಡಿಡುತ್ತಾರೆ.

ಇನ್ನು ಚಿಕನ್ ಫಾಕ್ಸ್ ರೋಗದ ಲಕ್ಷಣವೇನು ಅಂತಾ ಹೇಳುವುದಾದರೆ, ಇದು ದೇಹದ ಕೆಲವು ನರಗಳಿಗೆ ಬರುವ ಖಾಯಿಲೆಯಾಗಿದೆ. ಮೊದಲು ಸಣ್ಣಗೆ ಜ್ವರ ಕಾಣಿಸಿಕೊಂಡು, ಬಳಿಕ ಸುಸ್ತು ಹೆಚ್ಚಾಗಿ, ದೇಹದ ಮೇಲೆ ಬೊಬ್ಬೆಗಳಾಗುತ್ತದೆ. ಜೊತೆಗೆ ಸಿಡಿದುಹೋಗುವಂಥ ತಲೆನೋವು ಕಾಣಿಸಿಕೊಳ್ಳುತ್ತದೆ. ಮೊದಲೆಲ್ಲ ಈ ಖಾಯಿಲೆಯಿಂದ ಸಾವಾಗುತ್ತಿತ್ತು, ಮಕ್ಕಳು ಕಣ್ಣು ಕಳೆದುಕೊಳ್ಳುತ್ತಿದ್ದರು. ಆದರೀಗ ಉತ್ತಮ ಚಿಕಿತ್ಸೆ ಪಡೆದರೆ, ಅವೆಲ್ಲದರಿಂದಲೂ ಮುಕ್ತಿ ಸಿಗುತ್ತದೆ. ಚಿಕನ್ ಫಾಕ್ಸ್ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂದು ಕೇಳಲು ಈ ವೀಡಿಯೋ ನೋಡಿ..

Joint Pain ಕಾಡ್ತಿದ್ಯಾ? ಇಲ್ಲಿದೆ ಮನೆಮದ್ದು..

ಮಕ್ಕಳ ಈ ಹುಚ್ಚಿಗೆ ಕಾರಣ ಯಾರು?

Liver Cancer ಅಂದ್ರೆ ಏನು? ವೈದ್ಯರ ವಿವರಣೆ ಇಲ್ಲಿದೆ ನೋಡಿ..

About The Author