Spiritual News: ಮನುಷ್ಯನ ಕೆಲ ಗುಣಗಳು ಅವನ ಜೀವನವನ್ನ ಅತ್ಯುತ್ತಮಗೊಳಿಸಿದರೆ, ಇನ್ನು ಕೆಲ ಗುಣಗಳು ಅವನ ಅವನತಿಗೆ ಕಾರಣವಾಗುತ್ತದೆ. ಹಾಗಾಗಿ ಅಂಥ ಗುಣಗಳು ನಮ್ಮಲ್ಲಿ ಇರದಂತೆ ನಾವು ನೋಡಿಕೊಳ್ಳಬೇಕು. ಅಂಥ ಗುಣವಿದ್ದರೂ ಅದನ್ನು ದೂರಮಾಡಬೇಕು. ಹಾಗಾದ್ರೆ ಚಾಣಕ್ಯರ ಪ್ರಕಾರ ಯಾವ ಗುಣವಿದ್ದಲ್ಲಿ ನಮ್ಮ ಜೀವನ ನಾಶವಾಗುತ್ತದೆ ಅಂತಾ ತಿಳಿಯೋಣ ಬನ್ನಿ.
ಮೊದಲನೇಯ ಗುಣ ಕೆಟ್ಟ ಸ್ವಭಾವ. ಬೇರೆಯವರಿಗೆ ತೊಂದರೆ ನೀಡುವುದು, ಬೇರೆಯವರ ಮನಸ್ಸಿಗೆ ನೋವಾಗುವ ರೀತತಿ ನಡೆದುಕೊಳ್ಳುವುದು. ಇಂಥ ಗುಣಗಳೆಲ್ಲ ಕೆಟ್ಟಗುಣಗಳು. ಇಂಥ ಗುಣವಿರುವವನು ಜೀವನದ್ದಲ್ಲೆಂದೂ ಉದ್ಧಾರವಾಗಲು ಸಾಧ್ಯವಿಲ್ಲ. ಇವನೊಂದಿಗೆ ಇವನನ್ನು ಹೆತ್ತವರು, ಇವನನ್ನು ಕಟ್ಟಿಕೊಂಡವರು ಯಾರೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಕೆಟ್ಟ ಗುಣದವರು ಕೊಳೆತ ಹಣ್ಣು ಇದ್ದ ಹಾಗೆ. ಇವರೊಂದಿಗೆ ಯಾರಿರುತ್ತಾರೋ, ಅವರಿಗೂ ಇವರ ಗುಣ ತಾಕುತ್ತದೆ. ಹಾಗಾಗಿ ಕೆಟ್ಟ ಗುಣ ನಿಮಗೆ ಬಾರದಂತೆ ಎಚ್ಚರವಹಿಸಿ.
ಎರಡನೇಯ ಗುಣ, ಮನುಷ್ಯನ ಸ್ವಭಾವವನ್ನು ಅರಿಯದ ಗುಣ. ಇದನ್ನು ನಾವು ಬುದ್ಧಿವಂತಿಕೆ ಅಂತಲೂ ಹೇಳಬಹುದು. ನಿಮ್ಮ ಬಾಳ ಸಂಗಾತಿಯಾಗುವವರು, ಸ್ನೇಹಿತರ ಗುಣ ಎಂಥದ್ದು ಅನ್ನುವುದನ್ನ ನೀವು ಅರಿತುಕೊಳ್ಳುವುದನ್ನು ಕಲಿಯಬೇಕು. ಒಂದೆರಡು ದಿನಗಳಲ್ಲೇ ಅ;ರು ಮಾತನಾಡುವ ರೀತಿ, ನಡೆದುಕೊಳ್ಳುವ ರೀತಿ ನೋಡಿಯೇ ನೀವು ಅವರು ಎಂಥವರು ಅಂತಾ ಗುರುತಿಸಬೇಕು. ಆದರೆ ನೀವು ಬಾಳಸಂಗಾತಿಯನ್ನೋ ಅಥವಾ ಸ್ನೇಹಿತನ ಸ್ವಭಾವವನ್ನ ಗುರುತಿಸುವಲ್ಲಿ ಎಡವಿದರೆ, ನೀವು ದಡ್ಡರೇ ಎಂದರ್ಥ. ಇದರಿಂದ ನಿಮ್ಮ ಜೀವನ ಹಾಳಾಗಬಹುದು.
ಮೂರನೇಯ ಗುಣ ಸಮಯದ ಬಗ್ಗೆ ಕಾಳಜಿ ಮಾಡುವುದು. ಪ್ರತೀ ಮನುಷ್ಯ, ಸಮಯವನ್ನ ವ್ಯರ್ಥ ಮಾಡದೇ ಬದುಕಬೇಕು. ಆಗಲೇ ಅವನು ಉದ್ಧಾರವಾಗಲು ಸಾಧ್ಯವಾಗೋದು. ಇಷ್ಟೇ ಅಲ್ಲದೇ, ಯಾವ ಕೆಲಸವನ್ನು ಯಾವ ಸಮಯದಲ್ಲಿ ಮಾಡಬೇಕು..? ಯಾವ ಸಮಯದಲ್ಲಿ ಕೆಲಸ ಮಾಡಿದರೆ, ಆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಅನ್ನು ಜ್ಞಾನ ಅವನಲ್ಲಿರಬೇಕು. ಉದಾಹರಣೆಗೆ ಉದ್ಯಮ ಆರಂಭಿಸಬೇಕು ಅಂದುಕೊಂಡವನ ಕೈಯಲ್ಲಿ ಅದಕ್ಕೆ ಬೇಕಾದಷ್ಟು ಹಣವಿರಬೇಕು. ಯಾವ ಸಮಯದಲ್ಲಿ ಆ ಉದ್ಯಮ ಆರಂಭಿಸಬೇಕು ಅನ್ನೋದು ಗೊತ್ತಿರಬೇಕು. ಉದ್ಯಮದ ಬಗ್ಗೆ, ಹೂಡಿಕೆ ಬಗ್ಗೆ ತಿಳುವಳಿಕೆ ಇಲ್ಲದೇ, ಉದ್ಯಮ ಆರಂಭಿಸಿದರೆ, ಅದರಲ್ಲಿ ಅವನಿಗೆ ನಷ್ಟವಾಗುವುದು ಖಚಿತ.
2024ಕ್ಕೆ Narendra Modi ಪ್ರಧಾನಿ ಆಗ್ತಾರಾ.? ಆಗಲ್ವಾ.? ನಮೋಗೆ ಸ್ತ್ರೀ ಕಂಟಕ ಇದೆಯಾ.?
2028ಕ್ಕೆ ಮತ್ತೆ Congress ಸರ್ಕಾರ ಬರುತ್ತಾ.? Siddaramaiah ಸರ್ಕಾರ 5 ವರ್ಷ ಇರಲ್ವಾ.?