Friday, November 22, 2024

Latest Posts

ಮೆಂತ್ಯಕಾಳುಗಳಿಂದ ಆರೋಗ್ಯಕ್ಕಾಗುವ ಲಾಭಗಳ ಬಗ್ಗೆ ನಿಮಗೆ ಗೊತ್ತಾ..!

- Advertisement -

ನಮಸ್ತೆ ಗೆಳೆಯರೇ ಇಂದು ಅಡುಗೆ ಮನೆಯಲ್ಲಿ ಸಿಗುವ ಮೆಂತ್ಯೆ ಕಾಳಿನಿಂದ ಸಿಗುವ ಆರೋಗ್ಯಕರ ಲಾಭಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೆಂತ್ಯೆ ಕಾಳುಗಳನ್ನು ಅಡುಗೆ ಮಾಡಲು ಹೆಚ್ಚಾಗಿ ಬಳಕೆ ಮಾಡುತ್ತೇವೆ. ಅಡುಗೆ ಮಾತ್ರವಲ್ಲದೆ ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಈ ಮೆಂತ್ಯೆ ಕಾಳಿನ ಬಗ್ಗೆ ಯಾರಿಗೆಲ್ಲ ಗೊತ್ತಿಲ್ಲ. ಮೆಂತ್ಯೆ ಕಾಳನ್ನು ಆಯುರ್ವೇದದಲ್ಲಿ ಒಂದು ಔಷಧೀಯ ರೂಪದಲ್ಲಿ ಬಳಕೆಯನ್ನು ಮಾಡುತ್ತಾರೆ. ಮೆಂತ್ಯೆ ಕಾಳು ತಿನ್ನಲು ತುಂಬಾನೇ ಕಹಿಯಾಗಿ ಇರುತ್ತದೆ. ಆದರೆ ತುಂಬಾ ರೀತಿಯಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ.  ಮೆಂತ್ಯೆಕಾಳು ಮತ್ತು ಮೆಂತ್ಯೆ ಕಾಳಿನ ನೀರಿನ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. ಮೆಂತ್ಯೆ ಕಾಳಿನ ನೀರನ್ನು ಮಾಡುವುದಕ್ಕೆ ಒಂದು ಬೌಲ್ ಗೆ ಎರಡು ಚಮಚಷಷ್ಟು ಮೆಂತ್ಯೆ ಕಾಳು ತೊಳೆದು ಹಾಕಿಕೊಳ್ಳಿ. ನಂತರ ಅದರಲ್ಲಿ ಒಂದು ಲೋಟ ನೀರನ್ನು ಹಾಕಿಕೊಳ್ಳಿ. ಇಡೀ ರಾತ್ರಿ ನೆನೆಯಲು ಬಿಡಿ. ಬೆಳಿಗ್ಗೆ ಇದನ್ನು ಶೋಧಿಸಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇಡೀ ರಾತ್ರಿ ಮೆಂತ್ಯೆ ಕಾಳು ನೆನೆಸುವುದರಿಂದ ಮೆಂತ್ಯೆ ಕಾಳಿನಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಆಂಟಿ ಇನ್ಫ್ಲಾಮೇಟರಿ ಗುಣಗಳನ್ನು ನೀರಿನಲ್ಲಿ ಬಿಡುತ್ತದೆ.

ಆ ನೀರನ್ನು ನಾವು ಕುಡಿಯುವುದರಿಂದ ಆರೋಗ್ಯಕರ ಪ್ರಯೋಜನಗಳು ಸಿಗುತ್ತದೆ. ಡಯಾಬಿಟೀಸ್ ಮಧುಮೇಹ ಉತ್ತಮವಾದ ಮಾತ್ರೆ ಅಂತ ಹೇಳಿದರೆ ತಪ್ಪಾಗಲಾರದು. ಮೆಂತ್ಯೆ ಕಾಳಿನ ನೀರನ್ನು ನಿತ್ಯವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಶುಗರ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಶುಗರ್ ಮುಂದೆ ಭವಿಷ್ಯದಲ್ಲಿ ಬರದಂತೆ ಕೂಡ ಇದು ಕಾಪಾಡುತ್ತದೆ. ಮೆಂತ್ಯೆ ಕಾಳು ನೀರನ್ನು ಕುಡಿಯುವುದರಿಂದ ಶುಗರ್ ಹತ್ತಿರ ಕೂಡ ಸುಳಿಯುವುದಿಲ್ಲ. ನಿತ್ಯವೂ ಮೆಂತ್ಯೆ ಕಾಳನ್ನು ನೆನೆಸಿ ಅಗೆದು ತಿನ್ನುವುದರಿಂದ ಹಸಿವು ಆಗದಂತೆ ನೋಡಿಕೊಳ್ಳುತ್ತದೆ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ಕಾಳಿನ ನೀರು ಕುಡಿಯುವುದರಿಂದ ನಿಮ್ ತೂಕವನ್ನು ಕಡಿಮೆ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ಹಾಗೆಯೇ ಕಿಡ್ನಿ ಸ್ಟೋನ್ ಅನ್ನು ತೆಗೆದು ಹಾಕಲು ಇದು ಸಹಾಯ ಮಾಡುತ್ತದೆ. ಕಿಡ್ನಿಗೆ ಸಂಭಂದ ಪಟ್ಟ ಎಲ್ಲ ಕಾರ್ಯಗಳನ್ನು ಸುಗಮವಾಗಿ ನಡೆಯುವಂತೆ ಮಾಡುತ್ತದೆ. ಕಿಡ್ನಿಗಳನ್ನು ಆರೋಗ್ಯವಾಗಿ ಇಡಲು ತುಂಬಾನೇ ಸಹಾಯ ಮಾಡುತ್ತದೆ. ಮೆಂತ್ಯೆ ಕಾಳಿನಲ್ಲಿ ಪೊಟ್ಯಾಷಿಯಂ ಇರುವುದರಿಂದ ಇದು ಬಿಪಿ ಅನ್ನು ಕಂಟ್ರೋಲ್ ಮಾಡುತ್ತದೆ. ಅಧಿಕ ರಕ್ತದೊತ್ತಡ ಇರುವವರು ನೆನೆಸಿದ ಮೆಂತ್ಯೆ ಕಾಳಿನ ನೀರನ್ನು ಕುಡಿಯುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ಹೃದಯವನ್ನು ಆರೋಗ್ಯವಾಗಿಡಲು ತುಂಬಾನೇ ಸಹಾಯ ಮಾಡುತ್ತದೆ. ಈಗಿನ ಕಾಲದಲ್ಲಿ ತುಂಬಾ ಜನರಲ್ಲಿ ಮಂಡಿ ನೋವು ಕೀಲು ನೋವು ಅಂತ ತುಂಬಾನೇ ಬಾಧೆ ಪಡುತ್ತಾರೆ. ಅಂಥವರು ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ಕಾಳಿನ ನೀರನ್ನು ಕುಡಿಯುವುದರಿಂದ ಇದು ಈ ಎಲ್ಲ ನೋವುಗಳಿಗೆ ವಿಶ್ರಾಂತಿ ದೊರಕಿಸಿ ಕೊಡುತ್ತದೆ. ಮೆಂತ್ಯೆಕಾಳಿನಲ್ಲಿ ಫೈಬರ್ ಅಂಶ ಇರುವುದರಿಂದ ಇದು ದೇಹದಲ್ಲಿ ಇರುವ ಟಾಕ್ಸಿನ್ ಗಳನ್ನು ಹೊರಹಾಕುತ್ತದೆ. ಮೆಂತ್ಯೆ ಕಾಳಿನ ಸೇವನೆಯಿಂದ ಹೊಟ್ಟೆ ಕ್ಯಾನ್ಸರ್ ಗೆ ಕೂಡ ವಿಶ್ರಾಂತಿ ಸಿಗುತ್ತದೆ. ಕ್ಯಾನ್ಸರ್ ಗೆ ಒಂದು ಉತ್ತಮವಾದ ಮನೆಮದ್ದು ಆಗಿ ಕೆಲಸವನ್ನು ಮಾಡುತ್ತದೆ ಈ ಮೆಂತ್ಯೆ ಕಾಳು. ಇನ್ನೂ ಮೆಂತ್ಯೆ ಕಾಳು ತಿನ್ನುವುದರಿಂದ ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ. ಇದರಿಂದ ಹಾರ್ಟ್ ಅಟ್ಟ್ಯಾಕ್ ಸ್ಟ್ರೋಕ್ ಆಗುವ ಸಾಧ್ಯತೆ ಕಡಿಮೆ ಮಾಡುತ್ತದೆ. ಜೊತೆಗೆ ಚರ್ಮಕ್ಕೆ ಕೂದಲಕ್ಕೆ ತುಂಬಾನೇ ಅದ್ಭುತವಾಗಿ ಇದು ಕೆಲಸವನ್ನು ಮಾಡುತ್ತದೆ. ಚಿಕ್ಕ ವಯಸ್ಸಿನಲ್ಲೇ ಡಾರ್ಕ್ ಸರ್ಕಲ್ ರಿಂಕಲ ಆಗಿ ತುಂಬಾನೇ ವಯಸ್ಸಾದಂತೆ ಕಾಣುತ್ತಾರೆ ಅಂಥವರು ನಿತ್ಯವೂ ಒಂದು ಲೋಟ ಮೆಂತ್ಯೆ ಕಾಳು ನೀರನ್ನು ಕುಡಿಯುವುದರಿಂದ ಜೊತೆಗೆ ಇದರ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇನ್ನು ಇದರ ಪೇಸ್ಟ್ ಅನ್ನು ತಲೆಗೆ ಹಚ್ಚುವುದರಿಂದ ಕೂಡ ತಲೆ ಹೊಟ್ಟು ನಿವಾರಣೆ ಆಗುತ್ತದೆ.

- Advertisement -

Latest Posts

Don't Miss