Saturday, June 21, 2025

Latest Posts

ಅರಳಿ ಮರದ ಔಷಧಿಯಗುಣಗಳ ಬಗ್ಗೆ ನಿಮಗೆ ಗೊತ್ತಾ..!

- Advertisement -

ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಪೂಜಿಸುವ ಮರಗಳಲ್ಲಿ ಅರಳಿ ಮರ ಪ್ರಮುಖವಾದುದ್ದು. ಈ ಮರವನ್ನು ಅರಳಿ ಮರ, ಅಶ್ವತ್ಥ ಮರ ಸೇರಿದಂತೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ಅಶ್ವತ್ಥಮರವೆಂದು ಕರೆಯಲಾಗುವ ಈ ಮರವು ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂರ್ತಿ ದೇವರುಗಳನ್ನು ಪ್ರತಿನಿಧಿಸುತ್ತದೆ. ಇನ್ನು ಹಿಂದೂ ಧರ್ಮದಲ್ಲಿ ಮಾತ್ರವಲ್ಲದೇ ಬೌದ್ಧ ಧರ್ಮಿಯರಿಗೂ ಸಹ ಅರಳಿಮರ ಪವಿತ್ರವಾದ ಮರ. ಭಗವಾನ್ ಬುದ್ಧನಿಗೆ ಅರಳಿಮರದ ಕೆಳಗೆ ಜ್ಞಾನೋದಯ ಆಗಿರುವುದರಿಂದ ಅರಳಿ ಮರವನ್ನು ಬೌದ್ಧ ಧರ್ಮೀಯರೂ ಕೂಡ ದೇವರಂತೆ ಪೂಜೆ ಮಾಡುತ್ತಾರೆ.ಇಂತಹ ಅರಳಿ ಮರ ಪೂಜೆಗೆ ಮಾತ್ರವಲ್ಲ ಇದರಲ್ಲಿ ಔಷಧಿಯಗುಣಗಳಿವೆ. ಮರದ ಬಗ್ಗೆ ಪೂಜ್ಯ ಭಾವನೆ ಇದೆ. ಔಷಧಿ ಯುಕ್ತವಾದ ಗುಣಗಳಿವೆ ಪರಿಗಣಿಸಲಾಗುತ್ತದೆ. ಆಮ್ಲಜನಕ ಹೆಚ್ಚಾಗಿರುತ್ತದೆ ಅರಳಿ ಮರದಲ್ಲಿ ಒಂದಲ್ಲ ಒಂದು ಔಷಧಿ ಗುಣಗಳು ಇವೆ. ತೊಗಟೆ, ಬೇರು, ಬೀಜ, ಹಣ್ಣು ಹೀಗೆ ಹಲವಾರು ಇವೆಲ್ಲವೂ ಔಷಧೀಯ ರೀತಿಯ ಉಪಯೋಗಗಳು ಇವೆ.
ಅರಳಿ ಮರ ಉಳಿದ ಜಾತಿಯ ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೇರೆ ಮರಗಳು ಕೇವಲ ಸೂರ್ಯನ ಬೆಳಕಿನಲ್ಲಿ ಮಾತ್ರ ದ್ಯುತಿ ಸಂಶ್ಲೇಷಣಾ ಕ್ರಿಯೆ ನಡೆಸಿದರೆ, ಅರಳಿ ಮರ ಚಂದ್ರನ ಬೆಳಕಿನಲ್ಲೂ ಈ ಕ್ರಿಯೆಯನ್ನು ನಡೆಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಇದು ಸಸ್ಯಗಳಲ್ಲೇ ಪ್ರಾಮುಖ್ಯವಾದ ಪ್ರಭೇದ. ನೀವು ಅಸ್ತಮಾ ಮತ್ತು ಇತರೆ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅರಳಿ ಮರಗಳ ಸಹಾಯದಿಂದ ಮನೆಮದ್ದುಗಳನ್ನು ಸಿದ್ಧಪಡಿಸಿಕೊಳ್ಳಬಹುದು. ಇದಕ್ಕಾಗಿ ಮರದ ತೊಗಟೆಯ ಒಳ ಭಾಗವನ್ನು ತೆಗೆದು ಒಣಗಿಸಿ. ನಂತರ ಒಣಗಿದ ಭಾಗದ ಪುಡಿಯನ್ನು ತಯಾರಿಸಿ ಅದನ್ನು ನೀರಿನೊಂದಿಗೆ ಔಷಧಿಯಾಗಿ ತೆಗೆದುಕೊಳ್ಳಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ಅನೇಕ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಬಹುದು. ಇಷ್ಟೇ ಅಲ್ಲದೆ, ಅದರ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಬಹುದು. ಹೀಗೆ ಮಾಡುವುದರಿಂದ, ಅಸ್ತಮಾ ಸಮಸ್ಯೆ ನಿವಾರಣೆಯಾಗುತ್ತದೆ.
ಅರಳಿಮರದ ಕಡ್ಡಿಗಳಿಂದ ನಾವು ಪ್ರತಿದಿನ ಹಲ್ಲುಜ್ಜುವುದರಿಂದ ನಮ್ಮ ಹಲ್ಲುಗಳನ್ನು ಆರೋಗ್ಯವಾಗಿಟ್ಟು ಕೊಳ್ಳಬಹುದು. ಅಲ್ಲದೆ ಹಲ್ಲುಗಳಲ್ಲಿ ಇರುವ ಕಲೆಗಳು ನಿವಾರಣೆ ಆಗುತ್ತದೆ ಹಲ್ಲು ಮತ್ತು ವಸಡುಗಳ ಬ್ಯಾಕ್ಟೀರಿಯಗಳು ನಿವಾರಣೆಯಾಗುತ್ತದೆ. ಅರಳಿ ಮರದ ಎಲೆಗಳು ಕಾಮಾಲೆ ರೋಗಕ್ಕೆ ಪರಿಹಾರ ನೀಡುತ್ತದೆ. ಎಲೆಗಳನ್ನು ಅರೆದು ಸಕ್ಕರೆಯನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿದರೆ ರೋಗ ನಿಯಂತ್ರಣವಾಗುತ್ತದೆ. ಅರಳಿಮರದ ಎಲೆಯ ಪುಡಿಯನ್ನು ಹಾಲಿನೊಂದಿಗೆ ಹಾಕಿ ಕುಡಿಯುವುದರಿಂದ ಶೀತ ಅಥವಾ ಕೆಮ್ಮಿನ ಸಮಸ್ಯೆ ಪರಿಹಾರಗೊಳ್ಳುತ್ತದೆ. ಅರಳಿ ಮರದ ಎಲೆಗಳನ್ನು ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದನ್ನು ಪಿತ್ತರಸ ವಿನಾಶಕ ಎಂದು ಪರಿಗಣಿಸಲಾಗುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ತೊಡೆದುಹಾಕಲು ಅರಳಿ ಮರದ ಎಲೆಗಳನ್ನು ಔಷಧಿಯಾಗಿ ಬಳಸಬಹುದು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅರಳಿ ಎಲೆಗಳ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು.

- Advertisement -

Latest Posts

Don't Miss