ರುಚಿಯಲ್ಲಿ ಕಹಿಯಾದರೂ, ಆರೋಗ್ಯಕ್ಕೆ ವರದಾನವಾದ ಆಹಾರ ಅಂದ್ರೆ ಮೆಂತ್ಯೆ. ಇದು ಹಲವು ರೋಗಗಳಿಗೆ ರಾಮಬಾಣವಾಗಿದೆ. ಮೆಂತ್ಯೆ ಬೀಜದ ಪುಡಿ, ಮೆಂತ್ಯೆ ತಂಬುಳಿ, ಮೆಂತ್ಯೆ ಸಾರು ಇವೆಲ್ಲದರ ಸೇವನೆ ಮಿತವಾಗಿದ್ರೆ, ನಿಮ್ಮ ಆರೋಗ್ಯ ಹಿತವಾಗಿರತ್ತೆ. ಹಾಗಾದ್ರೆ ಮೆಂತ್ಯೆ ಬೀಜದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ನಿಮಗೆ ಸಕ್ಕರೆ ಖಾಯಿಲೆ ಇದ್ದರೆ, ನೀವು ಪ್ರತಿದಿನ ನಾಲ್ಕೇ ನಾಲ್ಕು ಕಾಳು ಮೆಂತ್ಯೆಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಆ ನೀರು ಮತ್ತು ಬೀಜವನ್ನು ಸೇವಿಸಿ. ನೀರು ಕುಡಿದು, ಬೀಜವನ್ನು ಅಗಿಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಕ್ಕರೆ ಖಾಯಿಲೆ ಕಂಟ್ರೋಲಿನಲ್ಲಿರುತ್ತದೆ.
ನೀವು ಸಾಂಬಾರ್ ಪುಡಿಯಲ್ಲೋ ಅಥವಾ ಒಗ್ಗರಣೆ ಹಾಕುವಾಗಲೋ, ಅಥವಾ ನಿಮ್ಮ ಪ್ರತಿದಿನದ ಆಹಾರದಲ್ಲಿ ಮೆಂತ್ಯೆ ಬಳಸುವುದರಿಂದ ನಿಮಗೆ ಸಕ್ಕರೆ ಖಾಯಿಲೆ ಬರುವುದು ತಪ್ಪುತ್ತದೆ. ಪ್ರತಿದಿನ ಚಿಟಿಕೆ ಮೆಂತ್ಯೆ ಪುಡಿ, ಉಪ್ಪು ಮತ್ತು ತುಪ್ಪ ಸೇರಿಸಿ ಅನ್ನದೊಂದಿಗೆ ತಿಂದರೂ, ನಿಮಗೆ ಸಕ್ಕರೆ ಖಾಯಿಲೆ ಬರುವುದಿಲ್ಲ.
ನಿಮಗೆ ಗ್ಯಾಸ್ಟಿಕ್ ಪ್ರಾಬ್ಲಮ್, ಹೊಟ್ಟೆ ನೋವು ಇದ್ದರೆ, ಮಜ್ಜಿಗೆಗೆ ಕೊಂಚ ಮೆಂತ್ಯೆ ಪುಡಿ, ಕೊಂಚ ಇಂಗು ಹಾಕಿ ಮಿಕ್ಸ್ ಮಾಡಿ, ಕುಡಿಯಿರಿ. ಇದರಿಂದ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ಹಿರಿಯರ ಸಲಹೆಯೊಂದಿಗೆ ಬಾಣಂತಿಯರು ನೆನೆಸಿದ ಮೆಂತ್ಯೆ ಸೇವನೆ ಮಾಡಿದರೆ, ಎದೆ ಹಾಲು ಹೆಚ್ಚುತ್ತದೆ. ಆದರೆ ನೀವು ಗರ್ಭಿಣಿಯಾಗಿದ್ದಲ್ಲಿ, ನಿಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದಲ್ಲಿ, ನಿಮಗೆ ಮೂಲವ್ಯಾಧಿ ಸಮಸ್ಯೆ ಇದ್ದಲ್ಲಿ, ನೀವು ಮೆಂತ್ಯೆ ಸೇವಿಸಬಾರದು.
ಪ್ರತಿದಿನ ಕೊಂಚ ಕುಂಬಳಕಾಯಿ ಬೀಜ ಸೇವಿಸಿ, ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಿ