Health Tips: ಹಳ್ಳಿಯಲ್ಲಿರುವ ಮಕ್ಕಳಿಗೆ ಹಸುವಿನ ಹಾಲು ಹೇಗೋ ಲಭ್ಯವಾಗುತ್ತದೆ. ಆದರೆ ಸಿಟಿಯಲ್ಲಿನ ಮಕ್ಕಳಿಗೆ ಹಸುವಿನ ಹಾಲು ದಕ್ಕುವುದು ಅಷ್ಟು ಸುಲಭವಲ್ಲ. ಹಾಗಾಗಿ ಸಿಟಿ ಜನ ಮಕ್ಕಳಿಗೆ ಪ್ಯಾಕೇಟ್ ಹಾಲನ್ನೇ ಕೊಡುತ್ತಾರೆ. ಹಾಗಾದರೆ ಮಕ್ಕಳಿಗೆ ಪ್ಯಾಕೇಟ್ ಹಾಲು ಕುಡಿಸಬಹುದೇ..? ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.
ಕೆಲವು ತಾಯಂದಿರಿಗೆ, ಸ್ತನಪಾನ ಮಾಡಿಸಲು ಸಾಧ್ಯವಾಗುವುದಿಲ್ಲ. ಈ ವೇಳೆ ಪ್ಯಾಕೇಟ್ ಹಾಲು, ಅಥವಾ ಮಕ್ಕಳಿಗೆ ಸಿಗುವ ಹಾಲಿನ ಪುಡಿಯಿಂದ ಹಾಲು ತಯಾರಿಸಿ ಕೊಡಲಾಗುತ್ತದೆ. ಆದರೆ ಇದರ ಬದಲು ನೀವು ಶುದ್ಧ ದೇಸಿ ಹಸುವಿನ ಹಾಲನ್ನು ಕುಡಿಸಿದರೆ ಉತ್ತಮ. ಆದರೆ ಇದು ಕೂಡ ಲಿಮಿಟಿನಲ್ಲಿರಬೇಕು. ಏಕೆಂದರೆ, ಕೆಲ ಮಕ್ಕಳಿಗೆ ಹಸುವಿನ ಹಾಲು ಕುಡಿಯುವುದರಿಂದ ಅಲರ್ಜಿಯಾಗಬಹುದು.
ಇನ್ನು ಪ್ರತೀ ಮಗುವಿಗೂ ತಾಯಿಯ ಸ್ತನಪಾನ ಮಾಡಿಸುವುದು ತುಂಬಾ ಮುಖ್ಯ. ಏಕೆಂದರೆ, ತಾಯಿಯ ಹಾಲಿನಲ್ಲಿರುವ ಗುಣಗಳಿಂದ ಮಗು ಜೀವನಪೂರ್ತಿ ಆರೋಗ್ಯವಾಗಿರುತ್ತದೆ. ಸ್ತನಪಾನವೇ ಮಾಡಿಸದಿದ್ದಲ್ಲಿ, ನಿಮ್ಮ ಮಗು ಇಡೀ ಜೀವನ, ರೋಗ ನಿರೋಧಕ ಶಕ್ತಿ ಇಲ್ಲದೇ, ನರಳುತ್ತಲೇ ಬದುಕಬೇಕಾಗುತ್ತದೆ. ಹಾಗಾಗಿ ಮಗುವಿಗೆ ಸ್ವಲ್ಪವಾದರೂ ಸ್ತನಪಾನ ಮಾಡಿಸಲೇಬೇಕು. ಇದರೊಂದಿಗೆ ಹಸುವಿನ ಹಾಲಿನ ಬಳಕೆಯೂ ಮಿತವಾಗಿ ಮಾಡಬೇಕು.
ಪ್ಯಾಕೇಟ್ ಹಾಲಿನಲ್ಲಿ ಅಷ್ಟೊಂದು ಪೋಷಕಾಂಶವಿಲ್ಲದ ಕಾರಣ, ಅದು ಮಗುವಿನ ಹೊಟ್ಟೆ ತುಂಬಿಸುತ್ತದೆ ಹೊರತು. ಶಕ್ತಿ ಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳಿಗೆ ಹಸುವಿನ ಹಾಲು ಕುಡಿಸುವುದು ತುಂಬಾ ಮುಖ್ಯವಾಗಿದೆ.
ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?