Friday, November 22, 2024

Latest Posts

ಬಿಸಿ ಆಹಾರಗಳನ್ನು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಶೇಖರಿಸಿ ಇಡುವುದು ಎಷ್ಟು ಡೇಂಜರ್ ಗೊತ್ತಾ..?

- Advertisement -

Health Tips: ಪ್ಲಾಸ್ಟಿಕ್ ಬಳಕೆ ಮಾಡಬಾರದು, ಇದು ಆರೋಗ್ಯಕ್ಕೆ ಉತ್ತಮವಲ್ಲ. ಅಲ್ಲದೇ, ಪ್ಲಾಸ್ಟಿಕ್ ಸುಡಬಾರದು ಅಂತಾ ರೂಲ್ಸ್ ಇದ್ದರೂ ಕೂಡ, ಜನ ಇನ್ನೂ ಪ್ಲಾಸ್ಟಿಕ್ ಬಳಸೋದನ್ನು ಬಿಟ್ಟಿಲ್ಲ. ಮತ್ತು ಸುಡುವುದನ್ನೂ ಬಿಟ್ಟಿಲ್ಲ. ಅಷ್ಟೇ ಅಲ್ಲದೇ, ಹೊಟೇಲ್‌ಗಳಲ್ಲೂ ಕೂಡ ಪ್ಲಾಸ್ಟಿಕ್ ಬಳಸಿದ್ರೆ, ದಂಡ ಹಾಕ್ತಾರೆ ಅಂತಾ ಗೊತ್ತಿದ್ದರೂ, ನಮಗೆ ಪ್ಲಾಸ್ಟಿಕ್ ಬಳಸುವುದು ಅನಿವಾರ್ಯ ಅಂತಾರೆ. ಆದ್ರೆ ಪ್ಲಾಸ್ಟಿಕ್‌ನಲ್ಲಿ ಬಿಸಿ ಬಿಸಿ ಆಹಾರ ಹಾಕುವುದರಿಂದ ಆರೋಗ್ಯದ ಮೇಲೆ ಅತೀ ಕೆಟ್ಟ ದುಷ್ಪರಿಣಾಮ ಬೀರುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ವೈದ್ಯರೇ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ಲಾಸ್ಟಿಕ್ನಲ್ಲಿ ಅಥವಾ ಪ್ಲಾಸ್ಟಿಕ್ ಡಬ್ಬದಲ್ಲಿ ಬಿಸಿ ಬಿಸಿ ಆಹಾರ ಹಾಕಿ, ಬಳಸುವುದರಿಂದ, ಕ್ಯಾನ್ಸರ್ ಆಗುವ ಸಾಧ್ಯತೆ ಇರುತ್ತದೆ. ಹಲವರಿಗೆ ಕ್ಯಾನ್ಸರ್ ಬಂದಾಗ, ಅವರು ಹೇಳುವ ಮಾತಂದ್ರೆ, ನಾವು ಸ್ಮೋಕ್ ಮಾಡುತ್ತಿರಲಿಲ್ಲ. ಮದ್ಯಪಾನ ಸೇವಿಸುತ್ತಿರಲಿಲ್ಲ. ಗುಟ್ಕಾ ತಿನ್ನುವ ಚಟವೂ ನಮಗಿರಲಿಲ್ಲ. ಆದರೂ ನನಗೆ ಹೇಗೆ ಕ್ಯಾನ್ಸರ್ ಬಂತೋ ಗೊತ್ತಿಲ್ಲ ಎನ್ನುತ್ತಾರೆ.

ಆದರೆ, ಅವರಿಗೆ ಹೇಗೆ ಕ್ಯಾನ್ಸರ್ ಬಂದಿರುತ್ತದೆ ಎಂದರೆ, ಅವರು ಇದೇ ರೀತಿ ಪ್ಲಾಸ್ಟಿಕ್‌ ಕಪ್‌ನಲ್ಲಿ ಪ್ರತೀ ದಿನ ಚಹಾ ಕುಡಿದಿರಬಹುದು. ಪ್ಲಾಸ್ಟಿಕ್ ಪೊಟ್ಟಣದಲ್ಲಿ ಕಟ್ಟಿದ ತಿಂಡಿಯನ್ನು, ಅಥವಾ ದ್ರವ ರೂಪದ ವಸ್ತುವನ್ನು ಪ್ರತಿದಿನ ಸೇವಿಸಿರಬಹುದು. ಹಾಗಾಗಿ ಅವರಿಗೆ ಕ್ಯಾನ್ಸರ್ ಬಂದಿರಬಹುದು. ಇದೇ ಕಾರಣಕ್ಕೆ ಪ್ಲಾಸ್ಟಿಕ್ ಬ್ಯಾನ್ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss