Health Tips: ಹಲವರು ಊಟ ಮಾಡುವಾಗ, ಅದರಲ್ಲಿ ಕರಿಬೇವು ಸಿಕ್ಕರೆ, ಅದನ್ನು ತೆಗೆದು ಬದಿಗಿಡುತ್ತಾರೆ. ಆದರೆ ಕರಿಬೇವು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಜೊತೆಗೆ ಪುದೀನಾ ಎಲೆ ಕೂಡ ಆರೋಗ್ಯಕ್ಕೆ ಒಳ್ಳೆಯದು. ಹಾಗಾದ್ರೆ ಕರಿಬೇವು ಮತ್ತು ಪುದೀನಾ ಸೇವನೆಯಿಂದ ಆರೋಗ್ಯಕ್ಕೆ ಏನು ಲಾಭ ಅಂತಾ ತಿಳಿಯೋಣ ಬನ್ನಿ..
ಆಹಾರ ತಜ್ಞೆ ಮತ್ತು ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಕರಿಬೇವು ಮತ್ತು ಪುದೀನಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ಹೇಳಿದ್ದಾರೆ. ಕರಿಬೇವು, ಪುದೀನಾ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಎಳ್ಳೆಣ್ಣೆ ಸೇವನೆ ಕೂಡ ದೇಹಕ್ಕೆ ಉತ್ತಮ. ಇದೆಲ್ಲದರಲ್ಲೂ ವಿಟಾಮಿನ್ ಸಿ ಇರುವ ಕಾರಣಕ್ಕೆ. ಈ ಆಹಾರಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇನ್ನು ಕರಿಬೇವಿನ ಸೊಪ್ಪನ್ನು ಯಾರು ತಿನ್ನಲು ಇಷ್ಟಪಡುವುದಿಲ್ಲವೋ, ಅಂಥವರು ಕರಿಬೇವಿನ ಚಟ್ನಿಪುಡಿ ಮಾಡಿ, ಪಲ್ಯ, ಸಾರು, ಸಾಂಬಾರ್, ಚಪಾತಿ, ರೊಟ್ಟಿ ಇತ್ಯಾದಿಗಳಿಗೆ ಬಳಸಬಹುದು. ಬಿಸಿ ಬಿಸಿ ಅನ್ನದೊಂದಿಗೆ ತುಪ್ಪ, ಉಪ್ಪು ಮತ್ತು ಕರಿಬೇವಿನ ಚಟ್ನಿ ಸೇರಿಸಿ, ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ, ರುಚಿಯಾಗಿಯೂ ಇರುತ್ತದೆ. ಈ ರೀತೀಯಾಗಿ ಕರಿಬೇವು ತಿಂದರೆ, ಆರೋಗ್ಯಕ್ಕೂ ಉತ್ತಮ, ನಿಮ್ಮ ಸೌಂದರ್ಯ ಅಭಿವೃದ್ಧಿಯೂ ಆಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




