Health Tips: ಚೀನಾ, ಜಪಾನ್‌ನಂಥ ದೇಶದಲ್ಲಿ, ಭಾರತದ ಕೆಲವು ಬುಡಕಟ್ಟು ಜನಾಂಗದವರಲ್ಲಿ ಅಕ್ಕಿ ತೊಳೆದ ನೀರನ್ನು ಮುಖ ಮತ್ತು ಕೂದಲಿನ ಸೌಂದರ್ಯ ಅಭಿವೃದ್ಧಿ ಮಾಡಲು ಉಪಯೋಗಿಸುತ್ತಾರೆ. ಹಾಗಾದ್ರೆ ಅಕ್ಕಿ ತೊಳೆದ ನೀರನ್ನು ಹೇಗೆ ಉಪಯೋಗಿಸಬೇಕು..? ಇದರಿಂದ ಏನು ಪ್ರಯೋಜನ ಅಂತ ತಿಳಿಯೋಣ ಬನ್ನಿ..
ಏಷ್ಯನ್ ಮಹಿಳೆಯರು ಅಕ್ಕಿ ತೊಳೆದ ನೀರನ್ನು ತಲೆಸ್ನಾನಕ್ಕೆ ಬಳಸುತ್ತಾರೆ. ಹಾಗಾಗಿ ಅವರ ಕೂದಲೂ ಅಷ್ಟು ಉದ್ದವಿರುತ್ತದೆ. ಅಲ್ಲದೇ ಸಿಲ್ಕಿಯಾಗಿರುತ್ತದೆ. ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, ಅದರ ನೀರನ್ನು ಬಿಸಾಕಬೇಕು. ಏಕೆಂದರೆ, ಆ ನೀರಿನಲ್ಲಿ ಕಸವಿರುತ್ತದೆ. ಎರಡನೇಯ ಬಾರಿ ಅಕ್ಕಿಯನ್ನು ಚೆನ್ನಾಗಿ ತೊಳೆಯಬೇಕು. ಮತ್ತು ಈ ನೀರನ್ನು ನೀವು ನಿಮ್ಮ ತಲೆಗೂದಲಿಗೆ ಬಳಸಬೇಕು. ಈ ನೀರನ್ನು ನೀವು 24 ಗಂಟೆ ಇರಿಸಬೇಕು. ಆಗ ಅದು ಫರ್ಮೆಂಟ್ ಆಗುತ್ತದೆ. ಆ ನೀರನ್ನು ನೀವು ತಲೆಗೂದಲಿಗೆ ಸ್ಪ್ರೇ ಮಾಡಬೇಕು. 5 ನಿಮಿಷ ಚೆನ್ನಾಗಿ ಮಸಾಜ್ ಮಾಡಿ, ಅರ್ಧ ಗಂಟೆ ಬಳಿಕ, ತಲೆಸ್ನಾನ ಮಾಡಬೇಕು.
ಇಲ್ಲವಾದಲ್ಲಿ ಎರಡು ಸ್ಪೂನ್ ಅಕ್ಕಿಯನ್ನು ನೀರಿನೊಂದಿಗೆ ತೊಳೆಯಬೇಕು.ಮತ್ತು ಆ ನೀರನ್ನು ಚೆಲ್ಲಬೇಕು. ಎರಡನೇಯ ಬಾರಿ ಒಂದು ಕಪ್ ನೀರನ್ನು ಆ ಅಕ್ಕಿಗೆ ಹಾಕಿ, ಒಂದು ದಿನ ನೆನೆಸಬೇಕು. ಮರುದಿನ ಆ ಅಕ್ಕಿಯನ್ನು ಚೆನ್ನಾಗಿ ತೊಳೆದು, ಆ ನೀರನ್ನು ನಿಮ್ಮ ತಲೆಗೂದಲಿಗೆ ಸ್ಪ್ರೇ ಮಾಡಬೇಕು. ಈ ನೀರಿಗೆ ವಾಸನೆ ಬರುತ್ತಿದ್ದರೆ, ಆ ನೀರನ್ನು 10 ನಿಮಿಷ ಫ್ರಿಜ್‌ನಲ್ಲಿರಿಸಿ, ಬಳಿಕ ಬಳಸಿ.
ನೀವು ಬೇಕಾದರೆ, ಈ ನೀರಿಗೆ ಎರಡರಿಂದ ಮೂರು ಸ್ಪೂನ್ ಈರುಳ್ಳಿ ರಸ ಸೇರಿಸಿ, ಸ್ಪ್ರೇ ತಯಾರಿಸಿ. ಇದು ಬಹಳ ಉಪಯೋಗಕಾರಿಯಾಗಿರುತ್ತದೆ. ವಾರದಲ್ಲಿ ಈ ರೀತಿ ಎರಡು ಬಾರಿ ಅಕ್ಕಿ ನೀರು ಮತ್ತು ಈರುಳ್ಳಿ ರಸವನ್ನು ತಲೆಯ ಬುಡಕ್ಕೆ ಸ್ಪ್ರೇ ಮಾಡಿ, ಮಸಾಜ್ ಮಾಡಿ, ಅರ್ಧ ಗಂಟೆ ಬಿಟ್ಟು ತಲೆಸ್ನಾನ ಮಾಡಿದರೆ, ಕೂದಲು ಉದುರುವ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಅತ್ಯುತ್ತಮ ಲಾಭಗಳಾಗುತ್ತದೆ ಗೊತ್ತಾ..?