Friday, November 22, 2024

Latest Posts

BP ಎಷ್ಟು ತಿಂಗಳಿಗೊಮ್ಮೆ Check ಮಾಡ್ಬೇಕು ಗೊತ್ತಾ?

- Advertisement -

Health Tips: ಬಿಪಿ ಶುಗರ್ ಇದ್ದವರು ಕಾಲ ಕಾಲಕ್ಕೆ ಅದನ್ನು ಪರೀಕ್ಷಿಸಿ, ಆಹಾರ ಸೇವನೆ, ಮಾತ್ರೆ ಸೇವನೆಯ ಬಗ್ಗೆ ಗಮನ ಕೊಡಬೇಕು. ಯಾಕಂದ್ರೆ ದೇಹದಲ್ಲಿ ಬಿಪಿ ಮತ್ತು ಶುಗರ್ ಸಮತೋಲನದಲ್ಲಿರುವುದು ತುಂಬಾ ಮುಖ್ಯವಾಗಿದೆ. ಎಷ್ಟು ತಿಂಗಳಿಗೊಮ್ಮೆ ಬಿಪಿ ಚೆಕ್ ಮಾಡಿಸಿಕೊಳ್ಳಬೇಕು ಅನ್ನುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನಾರ್ಮಲ್ ಬಿಪಿ ಇದ್ದರೆ 135 ಬೈ 90ವರೆಗೂ ಇರುತ್ತದೆ. ಆದರೆ 140ರಿಂದ 100ರವರೆಗೆ ನಿಮ್ಮ ಬಿಪಿ ಹೋದರೆ, ಅದು ಬಿಪಿ ಲಕ್ಷಣ. 150 ಬೈ 110 ಇದ್ರೆ ಅದು ಸ್ಟೇಜ್ 2 ಬಿಪಿ. ಇದಕ್ಕೂ ಹೆಚ್ಚಿದ್ರೆ ಹೈ ಬಿಪಿ ಎನ್ನುತ್ತಾರೆ. ಬಿಪಿ ಎಂದರೆ ರಕ್ತದೊತ್ತಡ ಹೆಚ್ಚಾಗುವುದು. ಬಿಪಿ ಬಂದಾಗ, ವೈದ್ಯರ ಸಲಹೆ ಪಡೆದು ಮಾತ್ರೆ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಜೊತೆಗೆ ಉಪ್ಪಿನ ಸೇವನೆ ಮಿತಗೊಳಿಸಬೇಕು.

ಸಾಧ್ಯವಾದಲ್ಲಿ ವ್ಯಾಯಾಮ, ಯೋಗ, ವಾಕಿಂಗ್ ಮಾಡುವುದರ ಮೂಲಕ ನೀವು ಒಂದೆರಡು ಕೆಜಿ ತೂಕ ಕಳೆದುಕೊಂಡರೆ, ನಿಮ್ಮ ಬಿಪಿ ಕಡಿಮೆಯಾಗುತ್ತದೆ. ಇನ್ನು ಹೈ ಬಿಪಿ ಇದ್ದವರು ಪದೇ ಪದೇ ನಿಮ್ಮ ಬಿಪಿ ಚೆಕಪ್ ಮಾಡಿಸಿಕೊಳ್ಳಬೇಕು. ಹಾಗಾಗಿ ಮನೆಯಲ್ಲೇ ಬಿಪಿ ಚೆಕ್ ಮಾಡಿುವ ಮಷಿನ್ ತಂದಿಟ್ಟುಕೊಂಡರೆ ಉತ್ತಮ. ಏಕೆಂದರೆ ಹೈ ಬಿಪಿ ಸೈಲೆಂಟ್ ಕಿಲ್ಲರ್ ಇದ್ದ ಹಾಗೆ. ನೀವು ನಾರ್ಮಲ್ ಆಗಿದ್ದು, ಸಡೆನ್ನಾಗಿ ಮೆದುಳಿಗೆ ಏರುತ್ತದೆ. ಹಾಗಾಗಿ ಸದಾ ಖುಷಿ ಖುಷಿಯಾಗಿರಿ. ತೂಕದ ಬಗ್ಗೆ ಗಮನ ಕೊಡಿ. ವಾಕಿಂಗ್, ಯೋಗ, ಮಿತವಾದ ಉಪ್ಪಿನ ಸೇವನೆ ಮಾಡಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಅವಲಕ್ಕಿ ಶೀರಾ ರೆಸಿಪಿ

ಹುಟ್ಟುವ ಮಗುವಿನ ತೂಕ ಎಷ್ಟಿರಬೇಕು?

- Advertisement -

Latest Posts

Don't Miss