Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಉಂದು ಕೂಡ ವೈದ್ಯರಾದ ಡಾ. ಶಿವಕುಮಾರ್ ಉಪ್ಪಳ, ಸ್ಕಿನ್ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಲಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಚರ್ಮದ ಕ್ಯಾನ್ಸರ್ ಬೇರೆ ಮತ್ತು ಸೋರಿಯಾಸಿಸ್ ಬೇರೆ. ಸೋರಿಯಾಸಿಸ್ ಅಂದ್ರೆ ಚರ್ಮದ ಖಾಯಿಲೆ. ಆದರೆ ಚರ್ಮದ ಕ್ಯಾನ್ಸರ್ ಅದಕ್ಕಿಂತಲೂ, ಡೆಂಜರ್ ಎನ್ನಬಹುದು. ಚರ್ಮದ ಮೇಲಾಗುವ ಮಚ್ಚೆಗಳಿಂದಲೇ, ಈ ಕ್ಯಾನ್ಸರ್ ಉದ್ಭವವಾಗೋದು. ಹಾಗಾಗಿ ಚರ್ಮದ ಮೇಲೆ ದೊಡ್ಡ ಗುಳ್ಳೆಯ ರೀತಿ ಮಮಚ್ಚೆ ಇದ್ದಲ್ಲಿ, ಅದರ ಬಣ್ಣ ಬದಲಾಗುತ್ತಿದೆಯಾ..? ಅಲ್ಲಿ ನೋವಾಗುತ್ತಿದೆಯಾ..? ಎಂದು ಚೆಕ್ ಮಾಡಿ. ಹೀಗಾಗಿದ್ದಲ್ಲಿ, ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿ, ಇದು ಸ್ಕಿನ್ ಕ್ಯಾನ್ಸರ್ ಹೌದೋ ಅಲ್ಲವೋ ಎಂದು ತಿಳಿದುಕೊಳ್ಳಬೇಕು.
ಆದರೆ ಭಾರತದಲ್ಲಿ ಸ್ಕಿನ್ ಕ್ಯಾನ್ಸರ್ ಬರುವುದು ಕಡಿಮೆ. ಏಕೆಂದರೆ, ಇಲ್ಲಿ ಸೂರ್ಯನ ಬೆಳಕಿನಿಂದ, ನಮಗೆ ವಿಟಾಮಿನ್ ಡಿ ಸಿಗುತ್ತದೆ. ಆದರೆ ವಿದೇಶದಲ್ಲಿ ಜನರ ಚರ್ಮ ಅಷ್ಟು ಆರೋಗ್ಯಕರವಾಗಿರುವುದಿಲ್ಲ. ಅಲ್ಲದೇ, ವಿದೇಶದಲ್ಲಿ ಸೂರ್ಯನ ಬೆಳಕು ಅಗಾಧವಾಗಿರುತ್ತದೆ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಹಾಗಾಗಿ ಅಲ್ಲಿ, ಚರ್ಮದ ಕ್ಯಾನ್ಸರ್ ಇರುವವರ ಸಂಖ್ಯೆ ಹೆಚ್ಚಾಗಿದೆ. ಅದಕ್ಕಾಗಿಯೇ, ವಿದೇಶದಲ್ಲಿ ಕ್ರಿಕೇಟ್ ಆಡುವಾಗ, ಆಟಗಾರರು ಥಿಕ್ ಆಗಿ ಸನ್‌ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳುತ್ತಾರೆ. ಸ್ಕಿನ್ ಕ್ಯಾನ್ಸರ್ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ..