Health Tips: ಕನ್ನಡಕವನ್ನು ಬಳಸುವವರಿಗಷ್ಟೇ, ಅದನ್ನು ಧರಿಸುವ ಮತ್ತು ಅದನ್ನು ಮೆಂಟೇನ್ ಮಾಡುವ ಕಷ್ಟ ಗೊತ್ತಿರುತ್ತದೆ. ಅಲ್ಲದೇ ಕನ್ನಡಕವನ್ನು ಹೈಜಿನ್ ಆಗಿ ಇರಿಸಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ವೈದ್ಯರು ಇನ್ನಷ್ಟು ಮಾಹಿತಿಯನ್ನು ನೀಡಿದ್ದಾರೆ.
ಡಾ.ಸುಜಾತಾ ರಾಥೋಡ್ ಅವರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು, ಬರೀ ಕನ್ನಡಕ ತೆಗೆದುಕೊಂಡರೆ ಸಾಕಾಗುವುದಿಲ್ಲ. ಅದನ್ನು ಸ್ವಚ್ಛ ಮಾಡಲು ಬೇಕಾಗಿರುವ ಬಟ್ಟೆ ಮತ್ತು ಕ್ರೀಮ್‌ಗಳನ್ನ ಸಹ ಬಳಸಬೇಕಾಗುತ್ತದೆ ಎಂದಿದ್ದಾರೆ. ಏಕೆಂದರೆ, ಕನ್ನಡಕ ಸ್ವಚ್ಛವಾಗಿದ್ದಾಗ ಮಾತ್ರ, ಕಣ್ಣಿನ ಆರೋಗ್ಯ ಸರಿಯಾಗಿ ಇರುತ್ತದೆ.
ಕನ್ನಡಕ ಹಾಕಿದಾಗ, ಸರಿಯಾಗಿ ಕಾಣುತ್ತಿಲ್ಲವಂತಲೋ, ಅಥವಾ ಕನ್ನಡ ಧೂಳಾಗಿದೆ ಅಂತಲೋ, ಕೆಲವರು ಸಿಕ್ಕ ಸಿಕ್ಕ ಬಟ್ಟೆಗಳನ್ನು ತೆಗೆದುಕೊಂಡು, ಕ್ಲೀನ್ ಮಾಡುತ್ತಾರೆ. ಆಗಲೇ ಕನ್ನಡಕಕ್ಕೆ ಸ್ಕ್ರ್ಯಾಚಸ್ ಆಗುತ್ತದೆ. ಇನ್ನು ಮುಖ್ಯವಾದ ವಿಷಯ ಎಂದರೆ, ಕನ್ನಡಕದ ಮುಂಭಾಗವನ್ನು ನೆಲಕ್ಕೆ ತಾಕುವಂತೆ ಇಡಬಾರದು.
ಮಸ್ಲಿನ್ ಕ್ಲಾತ್‌ನಿಂದಲೇ, ಕನ್ನಡಕವನ್ನು ಸ್ವಚ್ಛಗೊಳಿಸಬೇಕು. ಸಿಕ್ಕ ಸಿಕ್ಕ ಕ್ರೀಮ್, ಅಥವಾ ನೀರನ್ನು ಬಳಸಿ ಕನ್ನಡಕ ಕ್ಲೀನ್ ಮಾಡುವ ಬದಲು, ಲೆನ್ಸ್ ಶುಚಿಗೊಳಿಸುವ ಜೆಲ್ ಬಳಸಬೇಕು. ಇಲ್ಲವಾದಲ್ಲಿ, ಕನ್ನಡಕದ ಗ್ಲಾಸ್ ಸ್ಕ್ರ್ಯಾಚ್ ಆಗಿ, ಕಣ್ಣು ಕಾಣಿಸುವಲ್ಲಿ ಮತ್ತೆ ಸಮಸ್ಯೆ ಉಂಟಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..
ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..

