Thursday, December 26, 2024

Latest Posts

ಪಂಜಾಬಿ ಛೋಲೆ ಮಾಡೋದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ರೆಸಿಪಿ..

- Advertisement -

Recipe: ಇಂದು ನಾವು ಪೂರಿ, ಚಪಾತಿಯೊಂದಿಗೆ ಸವಿಯಬಹುದಾದ, ಪಂಜಾಬಿ ಛೋಲೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: 1 ಕಪ್ ಬಿಳಿ ಕಡಲೆ, 2 ಪಲಾವ್ ಎಲೆ, ಕಪ್ಪು ಏಲಕ್ಕಿ, ಕಾಲು ಕಪ್ ಟೀ ಡಿಕಾಕ್ಷನ್, 4 ಸ್ಪೂನ್ ಎಣ್ಣೆ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, 1 ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, 1 ಸ್ಪೂನ್ ಛೋಲೆ ಮಸಾಲಾ, ಖಾರದ ಪುಡಿ, ಚಾಟ್ ಮಸಾಲೆ, 2 ಟೊಮೆಟೋ ಪ್ಯೂರಿ, 2 ಚಿಕ್ಕ ತುಂಡು ಶುಂಠಿ, 2 ಹಸಿಮೆಣಸಿನಕಾಯಿ, ಕಸೂರಿ ಮೇಥಿ, ಉಪ್ಪು.

ಒಂದು ಕಪ್ ಬಿಳಿ ಕಡಲೆ ಕಾಳಿನ ಜೊತೆಗೆ, ಎರಡು ಪಲಾವ್ ಎಲೆ, 1 ಕಪ್ಪು ಏಲಕ್ಕಿ, ಉಪ್ಪು, ಕಾಲು ಕಪ್ ಟೀ ಡಿಕಾಕ್ಷನ್ ಹಾಕಿ ಬೇಯಿಸಿ. ಈಗ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಈರುಳ್ಳಿ, ಶುಂಠಿ- ಬೆಳ್ಳುಳ್ಳಿ ಪೇಸ್ಚ್ ಹಾಕಿ ಹುರಿಯಿರಿ. ಬಳಿಕ, ಛೋಲೆ ಮಸಾಲೆ, ಖಾರದ ಪುಡಿ, ಚಾಟ್ ಮಸಾಲೆ, ಉಪ್ಪು, ಟೊಮೆಟೋ ಪ್ಯೂರಿ, ಹಾಕಿ ಮಿಕ್ಸ್ ಮಾಡಿ. ಬಳಿಕ ಬೇಯಿಸಿದ ಕಡಲೆ ಹಾಕಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ, 2 ನಿಮಿಷ ಬೇಯಿಸಿ.

ಬಳಿಕ 2 ಹಸಿಮೆಣಸಿನಕಾಯಿ, ಕೊಂಚ ಶುಂಠಿ, ಕಸೂರಿ ಮೇಥಿ ಹಾಕಿ ಮಿಕ್ಸ್ ಮಾಡಿ, ಮತ್ತೆರಡು ನಿಮಿಷ ಬೇಯಿಸಿದರೆ, ಪಂಜಾಬಿ ಛೋಲೆ ರೆಡಿ.

ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆ..?

ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?

ಗ್ರೀನ್ ಟೀ, ಲೆಮನ್ ಟೀ ಸೇವನೆ ಆರೋಗ್ಯಕ್ಕೆ ಕೆಟ್ಟದ್ದೋ, ಒಳ್ಳೆಯದೋ..?

- Advertisement -

Latest Posts

Don't Miss