Friday, December 6, 2024

Latest Posts

Tandoor Chai ಮಾಡೋದು ಹೇಗೆ ಗೊತ್ತಾ? ಇಲ್ಲೊಮ್ಮೆ Taste ಮಾಡಿ

- Advertisement -

Food Adda: ಚಹಾ ಅನ್ನೋದು ಕೋಟ್ಯಂತರ ಭಾರತೀಯರ, ಬೆಳಗ್ಗಿನ ಎನರ್ಜಿಟಿಕ್ ಪೇಯ. ಕೆಲವರು ಬೆಡ್ ಟೀ ಕುಡಿದು ದಿನ ಆರಂಭಿಸುತ್ತಾರೆ. ಇನ್ನು ಕೆಲವರು, ಬೆಳಿಗ್ಗೆ ಟೀ ಕುಡಿದು ಮುಂದಿನ ಕೆಲಸ ಪ್ರಾರಂಭಿಸುತ್ತಾರೆ. ಮತ್ತೆ ಕೆಲವರಿಗೆ ತಿಂಡಿ ತಿನ್ನುವಾಗ, ತಿಂಡಿ ತಿಂದ ಮೇಲೆ ಚಾ ಬೇಕೆ ಬೇಕು. ಹೀಗೆ ನಾರ್ಮಲ್ ಆಗಿ ದಿನಕ್ಕೆ 3 ಬಾರಿ ಚಹಾ ಕುಡಿಯುತ್ತಾರೆ. ಕೆಲವರು ದಿನಕ್ಕೆ 10ಕ್ಕೂ ಹೆಚ್ಚು ಬಾರಿ ಚಹಾ ಕುಡಿಯುತ್ತಾರೆ. ಅಂಥ ಚಹಾ ಪ್ರಿಯರಿಗಾಗಿ ನಾವಿಂದು, ತಂದೂರಿ ಚಹಾ ಸಿಗುವ ಜಾಗದ ಬಗ್ಗೆ ಹೇಳಲಿದ್ದೇವೆ.

ಬೆಂಗಳೂರಿನ ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ, ಜಸ್ಟ್ ಬೇಕ್ ಎದುರುಗಡೆ ಈ ಚಹಾ ಅಂಗಡಿ ಇದೆ. ಈ ಅಂಗಡಿ ಹೆಸರು, ತಂದೂರ್ ಚಾಯ್ ಪಾಯಿಂಟ್. ಮಣ್ಣಿನ ಕಪ್ ಬಿಸಿ ಮಾಡಿ, ಸ್ಪೆಶಲ್ ಆಗಿ ತಯಾರಿಸಿದ ಚಹಾವನ್ನು ಅದಕ್ಕೆ ಹಾಕಿ ಕೊಡ್ತಾರೆ. ಇದೇ ತಂದೂರ್ ಚಾಯ್. ಈ ಚಹಾವನ್ನನು ಬಿಸಿಯಾಗಿ, ಬಿಸಿ ಮಾಡಿದ ಮಣ್ಣಿನ ಕಪ್‌ಗೆ ಹಾಕುವುದರಿಂದ, ನಾವು ಮಣ್ಣಿನ ಸ್ವಾದವನ್ನೂ ಚಹಾದೊಂದಿಗೆ ಸವಿಯಬಹುದು.

ಇದರೊಂದಿಗೆ ಬೇರೆ ಬೇರೆ ವೆರೈಟಿ ಚಹಾ ಕೂಡ ಇಲ್ಲಿ ಲಭ್ಯವಿದೆ. ತಂದೂರ್ ಚಾಯ್ ವಿಶೇಷತೆ ಅಂದ್ರೆ, ಇವರು 11 ರೀತಿಯ ಮಸಾಲೆ ರೆಡಿ ಮಾಡಿ, ಅದರಿಂದ ಚಹಾ ತಯಾರಿಸಿ, ಮಣ್ಣಿನ ಮಡಿಕೆಗೆ ಹಾಕಿ ಕೊಡುತ್ತಾರೆ. ಇದರೊಂದಿಗೆ ಸಮೋಸಾ, ಬನ್, ಪಪ್ಸ್ ಸೇರಿ ಹಲವು ವಿಧದ ಸ್ನ್ಯಾಕ್ಸ್ ಕೂಡ ಇಲ್ಲಿ ಲಭ್ಯವಿದೆ. ಒಂದು ಚಹಾದ ಬೆಲೆ 20ರಿಂದ 25 ರೂಪಾಯಿ ಇದೆ.

ಲೆಮನ್ ಟೀ, ಗ್ರೀನ್ ಟೀ, ಗ್ರೀನ್ ಟೀ ವಿತ್ ಹನಿ, ಆರ್ಗ್ಯಾನಿಕ್ ಟೀ ಸೇರಿ ಹಲವು ವಿಧದ ಚಹಾ ಮತ್ತು ಪ್ಲೇನ್ ಹಾಲು, ಬಾದಾಮ್ ಮಿಲ್ಕ್, ರೋಸ್ ಮಿಲ್ಕ್, ಪಿಸ್ತಾ ಮಿಲ್ಕ್, ರಾಗಿ ಮಾಲ್ಟ್, ಫಲ್ಟರ್ ಕಾಫಿ, ಶುಂಠಿ ಕಾಫಿ ಕೂಡ ಸಿಗುತ್ತದೆ. ಇನ್ನೂ ಏನೇನು ಸಿಗತ್ತೆ..? ಏನಿದರ ವಿಶೇಷತೆ ಅನ್ನೋ ಬಗ್ಗೆ ತಿಳಿಯೋದಕ್ಕೆ ಈ ವೀಡಿಯೋ ನೋಡಿ..

Digestion-Indigestion ಅಂದ್ರೆ ಏನು? ಆರೋಗ್ಯಕ್ಕೆ ಯಾವ ಆಹಾರಗಳು ಉತ್ತಮ?

ತಾಯಿಗೆ ಮಗುವಿನ ಬಗ್ಗೆ ಏನೇನು ತಿಳಿದಿರಬೇಕು..?

Nipah Virus ಲಕ್ಷಣಗಳೇನು..? ಡಾಕ್ಟರ್ ಏನಂತಾರೆ ಗೊತ್ತಾ?

- Advertisement -

Latest Posts

Don't Miss