Wednesday, May 7, 2025

Latest Posts

ತುಳಸಿ ಗಿಡವನ್ನು ಯಾವ ರೀತಿ ಬೆಳೆಸಿದರೆ ಮನೆಯಲ್ಲಿ ಸಾಕಾರಾತ್ಮಕತೆ ಹೆಚ್ಚುತ್ತದೆ ಗೊತ್ತಾ..?

- Advertisement -

Spiritual: ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ನೀಡಲಾಗಿದೆ. ಹಾಗಾಗಿಯೇ ಪ್ರತಿದಿನ ಪದ್ಧತಿ ಪ್ರಕಾರ ನೀರೆರೆಯುವ ಮೂಲಕ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ಇನ್ನು ತುಳಸಿ ಗಿಡ ಬಾಡಿದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೇ, ತುಳಸಿ ಗಿಡ ಸಮೃದ್ಧವಾಗಿ ಬೆಳೆದರೆ, ಅಂಥ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಎಲ್ಲವೂ ಇರುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ನೆಲಕ್ಕೆ ಬಿದ್ದ ತುಳಸಿಯನ್ನು ಕೆಲ ಕೆಲಸಗಳಿಗೆ ಬಳಸಬಾರದು. ಹಾಗಾದ್ರೆ ಯಾವ ಕೆಲಸಕ್ಕೆ ನೆಲಕ್ಕೆ ಬಿದ್ದ ತುಳಸಿಯನ್ನು ಬಳಸಬಾರದು..? ತುಳಸಿ ಗಿಡವನ್ನು ಯಾವ ರೀತಿ ನೋಡಿಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..

ತುಳಸಿ ಗಿಡವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಪ್ರತಿದಿನ ಸ್ವಲ್ಪ ಸ್ವಲ್ಪವೇ ನೀರೆರೆಯಬೇಕು. ಮುಟ್ಟಾದ ದಿನಗಳಲ್ಲಿ, ರವಿವಾರದಂದು, ಮುಸ್ಸಂಜೆ ಹೊತ್ತಿಗೆ ತುಳಸಿ ಗಿಡವನ್ನು ಮುಟ್ಟಬಾರದು ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಹೀಗೆ ಮಾಡಿದರೆ, ಗಿಡ ಬಹುಬೇಗನೆ ಒಣಗಿ ಹೋಗುತ್ತದೆ. ಆಗಲೇ ಮನೆಗೆ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಆದರೆ ತುಳಸಿ ಗಿಡ ಹಸಿರು ಹಸಿರಾಗಿ, ಸಮೃದ್ಧವಾಗಿದ್ದರೆ, ಮನೆಯಲ್ಲಿ ಧನಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿರುತ್ತದೆ.

ಇನ್ನು ಮನೆಯಲ್ಲಿರುವ ತುಳಸಿ ಗಿಡ ಒಣಗಿದರೆ, ಅದನ್ನು ತೆಗೆದು ನದಿ ಹಾಕಿ ಅಥವಾ ಹೂತುಬಿಡಿ. ತಕ್ಷಣ ಮತ್ತೊಂದು ಗಿಡ ನೆಡಿ. ಆದರೆ ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಎಂದಿಗೂ ಸುಡಬೇಡಿ. ಅಥವಾ ಕಾಲ ಕೆಳಗೆ ಬಿಸಾಕಬೇಡಿ. ತುಳಸಿ ಗಿಡ ಸುಟ್ಟರೆ, ಅಂಥವರೆಂದೂ ಉದ್ಧಾರವಾಗುವುದಿಲ್ಲವೆಂಬ ನಂಬಿಕೆ ಇದೆ. ಅಲ್ಲದೇ, ತುಳಸಿಗೆ ನಾವು ಮಹತ್ವದ ಸ್ಥಾನ ಕೊಟ್ಟಿದ್ದು, ಅದನ್ನು ತುಳಿದರೆ ಪಾಪ ತಗುಲುತ್ತದೆ.

ಇನ್ನು ಕಾಲ ಕೆಳಗೆ ತುಳಸಿ ಬೀಳದಂತೆ ನೋಡಿಕೊಳ್ಳಿ. ತುಳಸಿ ಬಿದ್ದರೆ, ಆ ತುಳಸಿಯನ್ನು ಮಣ್ಣಿಗೆ ಹಾಕಿ. ಅದನ್ನು ತಿನ್ನಲು ಅಥವಾ ಬಳಸಬೇಡಿ. ದೇವರಿಗೂ ಹಾಕಬಾರದು. ನೆಲಕ್ಕೆ ಬಿದ್ದ ನೈವೇದ್ಯ, ತುಳಸಿ, ಹೂವು ಎಂದಿಗೂ ದೇವರಿಗೆ ಸಮರ್ಪಿಸಲು ಯೋಗ್ಯವಿರುವುದಿಲ್ಲ. ಹಾಗಾಗಿ ನೆಲಕ್ಕೆ ಬಿದ್ದ ತುಳಸಿಯನ್ನು ಮಣ್ಣಿಗೆ ಹಾಕಬೇಕು.

ತುಳಸಿ ಗಿಡವನ್ನು ಉತ್ತಮ ಮುಹೂರ್ತ ಕಂಡು ನೆಡಬೇಕು. ಪ್ರತಿದಿನ ಮನೆಯ ಗೃಹಿಣಿ, ಆ ತುಳಸಿಗೆ ಬೆಳಿಗ್ಗೆ ಚಿಕ್ಕ ಲೋಟೆಯಲ್ಲಿ ಶ್ಲೋಕ ಹೇಳುವ ಮೂಲಕ ನೀರೆರೆಯಬೇಕು. ಆಗ ಗಿಡ ಚೆನ್ನಾಗಿ ಬೆಳೆಯುತ್ತದೆ. ತುಳಸಿ ಗಿಡಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರು ಹಾಕುವುದರಿಂದ ಆ ಗಿಡ ಹಾಳಾಗಿ ಹೋಗುತ್ತದೆ. ಅದಕ್ಕಾಗಿ ಕೊಂಚ ಕೊಂಚವೇ ನೀರೆರೆಯಬೇಕು. ಇನ್ನು ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳ ದೇಹದಲ್ಲಿ ಉಷ್ಣತೆ ಹೆಚ್ಚಾಗಿರುತ್ತದೆ. ಅಂಥ ವೇಳೆ ತುಳಸಿ ಮುಟ್ಟಿದರೆ, ತುಳಸಿ ಗಿಡಕ್ಕೆ ಹೆಚ್ಚು ಉಷ್ಣ ತಾಕಿ, ಅದು ಬಾಡಿ ಹೋಗುತ್ತದೆ. ಹಾಗಾಗಿ ಮುಟ್ಟಾದವರು ತುಳಸಿ ಗಿಡ ಮುಟ್ಟಬಾರದು. ಇಲ್ಲಿ ಹೇಳಿದ ಎಲ್ಲ ನಿಯಮಗಳನ್ನು ಪಾಲಿಸಿದರೆ, ತುಳಸಿ ಗಿಡ ಸಮೃದ್ಧವಾಗಿ ಬೆಳೆಯುತ್ತದೆ. ಮನೆಯಲ್ಲಿ ಸದಾ ನೆಮ್ಮದಿ ನೆಲೆಸಿರುತ್ತದೆ.

- Advertisement -

Latest Posts

Don't Miss