Health Tips: ಗರ್ಭಿಣಿಯಾಗಿದ್ದಾಗ, ಆ ಹೆಣ್ಣು ಎಷ್ಟೇ ಕಾಳಜಿ ವಹಿಸಿದರೂ ಕಡಿಮೆಯೇ. ಆದಷ್ಟು ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ, ವಾಕಿಂಗ್, ಹೀಗೆ ಎಲ್ಲ ರೀತಿಯ ಕಾಳಜಿ ಮಾಡಬೇಕಾಗುತ್ತದೆ. ಇಂದು ನಾವು ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಮೊದಲು ನೀರು ಬಿಸಿ ಮಾಡಲು ಇಟ್ಟು, ಅದು ಕುದಿ ಬಂದ ಬಳಿಕ ಅದಕ್ಕೆ ಒಂದು ಸ್ಪೂನ್ ಜೀರಿಗೆ ಹಾಕಿ, ಚೆನ್ನಾಗಿ ಕುದಿಸಿದರೆ, ಜೀರಿಗೆ ನೀರು ರೆಡಿ. ನೀವು ಈ ನೀರನ್ನು ಪ್ರತಿದಿನ ಕುಡಿದರೆ, ವಾಕರಿಕೆ ಕಡಿಮೆಯಾಗುತ್ತದೆ. ಗರ್ಭಾವಸ್ಥೆಯಲ್ಲಿದ್ದಾಗ, ಅನ್ನದ ವಾಸನೆ, ಅಗರಬತ್ತಿ ವಾಸನೆ, ಬೆಳ್ಳುಳ್ಳಿ ವಾಸನೆ ಸೇರಿ ಹಲವು ಪರಿಮಳಗಳೂ ಕೂಡ ವಾಕರಿಕೆ ಬರಿಸುತ್ತದೆ. ಕೆಲವರಿಗೆ ಇದು ವಿಚಿತ್ರವೆನ್ನಿಸಿದರೂ, ಅದನ್ನು ಅನುಭವಿಸಿದವರಿಗೆ ಆ ಕಷ್ಟ ಗೊತ್ತಿರುತ್ತದೆ. ಇಂಥ ವಾಕರಿಕೆ ಹೆಚ್ಚಾಗಿದ್ದಲ್ಲಿ, ಜೀರಿಗೆ ನೀರು ಕುಡಿಯಿರಿ.
ದೇಹದಲ್ಲಿ ಉಷ್ಣತೆ ಸಮಸ್ಯೆ ಹೆಚ್ಚಾಗಿದ್ದಲ್ಲಿ, ಜೀರಿಗೆ ನೀರು ಕುಡಿಯಿರಿ. ಇದರಿಂದ ದೇಹದಲ್ಲಿ ಉಷ್ಣತೆ ಕಂಟ್ರೋಲಿಗೆ ಬರುತ್ತದೆ. ಮತ್ತು ಹೊಟ್ಟೆ ಉಬ್ಬರ, ಸೇರಿ ಹಲವು ಹೊಟ್ಟೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಮಲಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ. ಇನ್ನು ಈ ನೀರಿಗೆ ನೀವು ಸಕ್ಕರೆ, ಬೆಲ್ಲ ಏನನ್ನೂ ಬಳಸಬಾರದು. ಆಗ ನಿಮ್ಮ ಶುಗರ್ ಲೇವಲ್ ಕೂಡ ಕಂಟ್ರೋಲಿನಲ್ಲಿರುತ್ತದೆ.
ಗರ್ಭಾವಸ್ಥೆಯಲ್ಲಿದ್ದಾಗ, ಕೆಲವರಿಗೆ ತಿಂದಿದ್ದು ಸರಿಯಾಗಿ ಜೀರ್ಣವಾಗುವುದಿಲ್ಲ. ಆಗ ಅಂಥವರು ಜೀರಿಗೆ ನೀರು ಕುಡಿದಿದ್ದಲ್ಲಿ, ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಮಗುವಿನ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಅಲ್ಲದೇ, ದೇಹದಲ್ಲಿ ಕ್ಯಾಲ್ಶಿಯಂ ಅಂಶ ಹೆಚ್ಚು ಮಾಡಿ, ತಾಯಿ ಮಗು ಇಬ್ಬರೂ ಗಟ್ಟಿಮುಟ್ಟಾಗಿರುವಂತೆ ಮಾಡಲು ಜೀರಿಗೆ ನೀರು ಸಹಕಾರಿಯಾಗಿದೆ. ರಕ್ತದೊತ್ತಡ ನಿವಾರಿಸಲು ಇದು ಸಹಕಾರಿಯಾಗಿದೆ.
ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..
ಪಾನೀಪುರಿ ಸ್ಟಾಲ್ ಇಡಲು ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಬ್ಯುಸಿನೆಸ್ ಟಿಪ್ಸ್..
ಚಿಪ್ಸ್ ಬ್ಯುಸಿನೆಸ್ ಮಾಡಬೇಕೆಂದಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಟಿಪ್ಸ್..