Health Tips: ಇಂದಿನ ಕಾಲದಲ್ಲಿ ಮಾರುಕಟ್ಟೆ ಯಾವ ರೀತಿ ವೆರೈಟಿ ವೆರೈಟಿ ಫುಡ್ ಬರುತ್ತಿದೆಯೋ, ಅದೇ ರೀತಿ ವೆರೈಟಿ ವೆರೈಟಿ ಖಾಯಿಲೆಯೂ ಬರುತ್ತಿದೆ. ಇನ್ನು ವಿವಿಧ ರೀತಿಯ ಖಾಯಿಲೆ ಬರುವುದಕ್ಕೂ, ನಾವು ತಿನ್ನುವ ಆಹಾರಗಳೇ ಕಾರಣವಾಗಿದೆ. ಫಾಸ್ಟ್‌ಪುಡ್ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ಎಷ್ಟು ಡೇಂಜರ್ ಅಂತಾ ವೈದ್ಯರೇ ಹೇಳಿದ್ದಾರೆ ನೋಡಿ..
ಅನ್ನನಾಳದ ಕ್ಯಾನ್ಸರ್ ಮತ್ತು ಗಂಟಲ ಕ್ಯಾನ್ಸರ್ ಹೆಚ್ಚಾಗಿ, ಉತ್ತರ ಭಾರತೀಯರಲ್ಲಿ ಕಂಡುಬರುತ್ತೆ ಅಂತಾರೆ ವೈದ್ಯರು. ಇದಕ್ಕೆ ಕಾರಣ ಏನಂದ್ರೆ, ಅವರು ಹೆಚ್ಚಾಗಿ ರೋಟಿಯನ್ನು ತಿಂತಾರೆ. ಅದನ್ನು ಸೇವಿಸುವಾಗ, ಅದು ದೇಹದೊಳಗೆ ಚಿಕ್ಕ ಚಿಕ್ಕ ಗಾಯಗಳನ್ನು ಮಾಡುತ್ತೆ. ಇದರಿಂದಲೇ ಕ್ಯಾನ್ಸರ್ ಬರುತ್ತದೆ ಅಂತಾರೆ ವೈದ್ಯರು.
ಇನ್ನು ಕೆಲವು ಹೊರದೇಶಗಳಲ್ಲಿ ಖಾರವಾದ ಮತ್ತು ಬಿಸಿಬಿಸಿಯಾದ ಆಹಾರವನ್ನು ಸೇವಿಸುತ್ತಾರೆ. ಈ ವೇಳೆ ಹೊಟ್ಟೆಯ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಕೆಂಪು ಮಾಂಸ ಸೇವಿಸುವವರಿಗೆ ಮಲಬದ್ಧತೆ ಸಮಸ್ಯೆ ಆಗಿ, ಅದರಿಂದಲೂ ಕ್ಯಾನ್ಸರ್ ಬರುತ್ತದೆ. ಅಲ್ಲದೇ, ತುಂಬ ದಿನ ಸ್ಟೋರ್ ಮಾಡಿರುವ ತಿಂಡಿ, ಪ್ರಿಸರ್ವೇಟಿವ್ಸ್ ಬಳಸಿ, ಮಾಡಿದ ತಿಂಡಿ ಹೆಚ್ಚಾಗಿ ತಿಂದರೆ, ಕ್ಯಾನ್ಸರ್ ಬರುತ್ತದೆ.
ಫಾಸ್ಟ್‌ಫುಡ್‌ನಲ್ಲಿ ಕಲರ್, ಎಸ್ಸೆನ್ಸ್, ಟೇಸ್ಟಿಂಗ್ ಪೌಡರ್ ಬಳಸುತ್ತಾರೆ. ಇದೇ ಕ್ಯಾನ್ಸರ್ ಬರಲು ಕಾರಣವಾಗುತ್ತದೆ. ಹಾಗಾಗಿ ಕ್ಯಾನ್‌ಸರ್‌ನಂಥ ಗಂಭೀರ ಖಾಯಿಲೆ ಬರಬಾರದು ಅಂದ್ರೆ, ಮನೆಯಲ್ಲೇ ತಿಂಡಿ ಮಾಡಿ ಸೇವಿಸಬೇಕು. ಹೊಟೇಲ್, ಬೀದಿಬದಿ ಸಿಗುವ ತಿಂಡಿ ಹೆಚ್ಚು ತಿಂದರೆ, ಅದರಿಂದ ಬರೀ ಕ್ಯಾನ್ಸರ್ ಅಲ್ಲದೇ, ಹಲವು ಖಾಯಿಲೆಗಳು ಬರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..