Sunday, October 27, 2024

Latest Posts

ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಅತ್ಯುತ್ತಮ ಲಾಭಗಳಾಗುತ್ತದೆ ಗೊತ್ತಾ..?

- Advertisement -

Health Tips: ನಾವು ಅಡುಗೆಗೆ ಹಲವಾರು ಎಣ್ಣೆಗಳನ್ನು ಬಳಸುತ್ತೇವೆ. ತೆಂಗಿನಎಣ್ಣೆ, ಶೇಂಗಾ ಎಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ ಹೀಗೆ ಹಲವು ಎಣ್ಣೆಗಳನ್ನು ಬಳಸುತ್ತೇವೆ. ಇದರೊಂದಿಗೆ ಆಲಿವ್ ಎಣ್ಣೆಯನ್ನ ಕೂಡ ನಮ್ಮ ಊಟಕ್ಕೆ ಸೇರಿಸಿಕೊಂಡರೆ ಇನ್ನೂ ಉತ್ತಮ. ಹಾಗಾದರೆ ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..

ಮೊದಲನೇಯದಾಗಿ ಆಲಿವ್ ಎಣ್ಣೆಯನ್ನು ಹೆಚ್ಚು ಬಿಸಿ ಮಾಡಬಾರದು. ಹಾಗಾಗಿ ನೀವು ಸಲಾಡ್‌ಗೆ ಅಥವಾ ಯಾವುದಾದರೂ ಪದಾರ್ಥ ಮಾಡಿದಾಗ, ಅದರ ಮೇಲೆ ಆಲಿವ್ ಎಣ್ಣೆ ಹಾಕಬೇಕು. ಈ ರೀತಿ ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯದಲ್ಲಿ ಅಭಿವೃದ್ಧಿಯಾಗುತ್ತದೆ.

ಇದರ ಸೇವನೆಯ ಮೊದಲ ಲಾಭವೆಂದರೆ, ಆಲಿವ್ ಎಣ್ಣೆ ಸೇವನೆಯಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಪ್ರತಿದಿನ ಸರಿಯಾಗಿ ಮಲವಿಸರ್ಜನೆಯಾಗಲು ಆಲಿವ್ ಎಣ್ಣೆ ಸಹಕರಿಸುತ್ತದೆ. ನಿಮ್ಮ ಸ್ಕಿನ್ ಮತ್ತು ಕೂದಲ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ನೀವು ಆಲಿವ್ ಎಣ್ಣೆ ಉಪಯೋಗ ಮಾಡಬೇಕು. ಯಾಕಂದ್ರೆ ಇದರ ಸೇವನೆಯಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಆಹಾರ ಸರಿಯಾಗಿ ಜೀರ್ಣವಾದಾಗ, ಮಲವಿಸರ್ಜನೆ ಸರಿಯಾಗಿ ಆಗುತ್ತದೆ.

ಹೀಗಾದಾಗ, ಕೂದಲಿನ ಆರೋಗ್ಯ ಮತ್ತು ತ್ವಚೆಯ ಆರೋಗ್ಯ ಉತ್ತಮವಾಗಿರುತ್ತದೆ. ನೀವು ಕೂದಲಿಗೆ ಮತ್ತು ತ್ವಚೆಗೆ ಮಸಾಜ್ ಮಾಡಲು ಕೂಡ ಆಲಿವ್ ಎಣ್ಣೆ ಬಳಸಬಹುದು. ಇದರಿಂದ ನಿಮ್ಮ ತ್ವಚೆ ಮತ್ತು ಕೂದಲು ನೈಸ್ ಆಗಿ ಇರುತ್ತದೆ. ರಾತ್ರಿ ಮಲಗುವಾಗ, ತಲೆಗೆ ಆಲಿವ್ ಎಣ್ಣೆ ಹಾಕಿ ಚೆನ್ನಾಗಿ ಮಸಾಜ್ ಮಾಡಿ.ಮರುದಿನ ಬಿಸಿ ನೀರಿನಲ್ಲಿ ಟವೆಲ್ ಅದ್ದಿ, ಹಿಂಡಿ, ಬಳಿಕ ತಲೆಗೆ ಕಟ್ಟಿಕೊಳ್ಳಿ. ಅರ್ಧ ಗಂಟೆ ಬಿಟ್ಟು ತಲೆಗೆ ಮುಲ್ತಾನಿ ಮಿಟ್ಟಿ ಹೇರ್ ಪ್ಯಾಕ್ ಹಾಕಿ, ಅರ್ಧ ಗಂಟೆ ಬಳಿಕ ತಲೆಸ್ನಾನ ಮಾಡಿ. ನಿಮ್ಮ ಕೂದಲು ಶೈನಿಯಾಗಿರುತ್ತದೆ.

ಅತಿಯಾದ Exercise ಒಳ್ಳೇದಲ್ಲ ಯಾಕೆ!?

ಪನೀರ್ ಸಮೋಸಾ ರೆಸಿಪಿ

ಹಲವು ದೇಶಗಳ ಡ್ರೈ ಫ್ರೂಟ್ಸ್ ಮತ್ತು ಖರ್ಜೂರಗಳು ಬೇಕೆಂದಲ್ಲಿ ಇಲ್ಲಿಗೆ ಬನ್ನಿ..

- Advertisement -

Latest Posts

Don't Miss