Health tips: ಹಲವರಿಗೆ ಪ್ರತಿದಿನ ಸಂಜೆ ವೇಳೆಗೆ ಕಾಫಿ ಕುಡಿಯುವ ಚಟವಿರುತ್ತದೆ. ಯಾಕಂದ್ರೆ ಕಾಫಿ ಸೇವನೆಯಿಂದ, ತಾವು ಫ್ರೆಶ್ ಆಗಿರುತ್ತೇವೆ ಅನ್ನೋದು ಅವರ ಭಾವನೆ. ದಿನಕ್ಕೊಮ್ಮೆ ಕಾಫಿ ಸೇವನೆ ಕೆಟ್ಟದ್ದಲ್ಲ. ಆದರೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕಾಫಿ ಕುಡಿದರೆ ಮಾತ್ರ, ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಇಂದು ನಾವು ಹೆಚ್ಚು ಕಾಫಿ ಕುಡಿದರೆ ಎಂಥೆಂಥ ಆರೋಗ್ಯ ಸಮಸ್ಯೆ ಬರುತ್ತದೆ ಅಂತಾ ಹೇಳಲಿದ್ದೇವೆ.
ನೀವು ಕಾಫಿ ಕುಡಿದ ತಕ್ಷಣ, ನಿಮ್ಮಲ್ಲಿ ಚೈತನ್ಯ ಬರಬಹುದು. ಆದರೆ ಅದರ ದುಪ್ಪಟ್ಟು ಶಕ್ತಿಯನ್ನು ಕಾಫಿ ತೊಡೆದುಹಾಕುತ್ತದೆ. ಮಾನಸಿಕ ಒತ್ತಡ, ನರ್ವಸ್ ಆಗುವಂಥ ಸಂದರ್ಭಗಳು ಹೆಚ್ಚಾಗಿ ಬರುತ್ತದೆ. ಅಲ್ಲದೇ, ನಿದ್ರಾಹೀನತೆ ತಂದಿಡುತ್ತದೆ. ಹಾಗಾಗಿಯೇ ರಾತ್ರಿ ವೇಳೆ ಟೀ, ಕಾಫಿ ಸೇವನೆ ಮಾಡಬಾರದು ಅಂತಾ ಹೇಳುತ್ತಾರೆ. ನೈಟ್ ಶಿಫ್ಟ್ ಮಾಡುವವರು ಕಾಫಿ ಕುಡಿದೇ ಅವರ ಕೆಲಸ ಶುರು ಮಾಡುತ್ತಾರೆ. ಯಾಕಂದ್ರೆ ರಾತ್ರಿ ಬರುವ ನಿದ್ರೆಯಿಂದ ಅವರ ಕೆಲಸಕ್ಕೆ ತೊಂದರೆ ಆಗಬಾರದು ಎಂದು.
ನಿದ್ರಾಹೀನತೆಯಿಂದ ಬೆಳಗ್ಗಿನ ಜಾವದಲ್ಲಿ ನಿಮ್ಮ ಚೈತನ್ಯ ಕುಂದಿಹೋಗುತ್ತದೆ. ಮತ್ತದೇ, ಕಾಫಿ ಸೇವನೆ ಚಟ ಶುರುವಾಗುತ್ತದೆ. ಅಲ್ಲಿಗೆ ಭವಿಷ್ಯದಲ್ಲಿ ನಿಮ್ಮ ಆರೋಗ್ಯ ಹಾಳಾಗುತ್ತದೆ ಎಂಬುದು ಇದರ ಮುನ್ಸೂಚನೆ. ಅಲ್ಲದೇ, ರೋಗನಿರೋಧಕ ಶಕ್ತಿಯೂ ಕುಂಠಿತಗೊಳ್ಳುತ್ತದೆ. ಅಲ್ಲದೇ, ದೇಹದಲಲಿ ಉಷ್ಣತೆ ಹೆಚ್ಚಾಗಿ, ಮೊಡವೆ, ಕೂದಲು ಉದುರುವ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಅತಿಯಾದ ಕಾಫಿ ಸೇವನೆ ಕಾರಣವಾಗುತ್ತದೆ.
ಹಾಗಾಗಿ ನೀವು ಕಾಫಿ, ಟೀ ಬದಲು ಗ್ರೀನ್ ಟೀ, ಹರ್ಬಲ್ ಟೀ, ಚಿಕೋರಿ ಕಾಫಿ ಸೇವನೆ ಮಾಡಬಹುದು. ಇವೆಲ್ಲವೂ ರುಚಿಯಾಗಿಯೂ, ಆರೋಗ್ಯಕರವಾಗಿಯೂ ಇರುತ್ತದೆ. ಇದು ನಿಮ್ಮ ದೇಹದ ಶಕ್ತಿಯನ್ನು ಕುಂದಿಸುವುದಿಲ್ಲ. ಬದಲಾಗಿ ನಿಮಗೆ ಹೆಚ್ಚಿನ ಚೈತನ್ಯ ನೀಡುತ್ತದೆ.