Friday, November 22, 2024

Latest Posts

ದುರ್ಗಾದೇವಿಗಿರುವ 8 ಕೈಗಳ ಅರ್ಥವೇನು ಗೊತ್ತೇ..?

- Advertisement -

Spiritual : ನಾವು ನೀವು ಫೋಟೋಗಳಲ್ಲಿ ನೋಡಿರುವ ಹಾಗೆ ದುರ್ಗಾದೇವಿಗೆ 8 ಅಥವಾ 10 ಕೈಗಳಿರುತ್ತದೆ. ಆದರೆ ಅಷ್ಟಭುಜವುಳ್ಳ ದೇವಿಯೇ ದುರ್ಗಾದೇವಿ ಅನ್ನುವ ಮಾತಿದೆ. ಹಾಗಾಗಿ ಅವಳನ್ನು ಅಷ್ಟಭುಜೆ ಎನ್ನಲಾಗುತ್ತದೆ. ಹಾಗಾದರೆ ದುರ್ಗಾದೇವಿಗಿರುವ 8 ಕೈಗಳ ಅರ್ಥವೇನು..? ಅಂತಾ ತಿಳಿಯೋಣ ಬನ್ನಿ..

ದುರ್ಗಾದೇವಿಯ 8 ಕೈಗಳ ಅರ್ಥ 8 ದಿಕ್ಕುಗಳೆಂದು. ಕದಂಬ ವನದಲ್ಲಿ ವಾಸಿಸುತ್ತಿದ್ದ ಕದಂಬವನವಾಸಿನಿ ದುರ್ಗೆ, ದುಷ್ಟರ ರಕ್ಷಣೆಗೆಂದೇ ಅಷ್ಟಭುಜೆಯಾದಳು. ಹಾಗಾಗಿ ಆಕೆಯ 8 ಕೈಗಳಲ್ಲಿ ಒಂದೊಂದು ಆಯುಧವನ್ನಿಟ್ಟುಕೊಂಡಿರುತ್ತಾಳೆ. ಶಂಖ, ಚಕ್ರ, ತ್ರಿಶೂಲ, ಗಧೆ, ಕತ್ತಿ, ಬಿಲ್ಲುಬಾಣ, ಕಮಲವನ್ನು ಹಿಡಿದ ದೇವಿ, ತನ್ನ ಬಲಗೈಯಿಂದ ಎಲ್ಲರನ್ನೂ ಆಶಿರ್ವದಿಸುತ್ತಾಳೆ.

ಇಲ್ಲಿ ಮೊದಲೇ ಹೇಳಿದ ಹಾಗೆ, 8 ಕೈಗಳೆಂದರೆ, 8 ದಿಕ್ಕು. ಇದರ ಅರ್ಥ, ನಂಬಿದವರನ್ನ ದೇವಿ 8 ದಿಕ್ಕುಗಳಿಂದಲೂ ರಕ್ಷಿಸುತ್ತಾಳೆಂದು. ದುರ್ಗಾ ಎಂಬುದರ ಅರ್ಥವೇ ದುರ್ಗತಿನಾಶಿನಿ. ಇನ್ನೊಂದು ಅರ್ಥ ಯಾರೂ ಅತಿಕ್ರಮಿಸಲು ಆಗದ ಕೋಟೆ. ಹಾಗಾಗಿ ಯಾರು ದುರ್ಗಾದೇವಿಯನ್ನು ಆರಾಧಿಸುತ್ತಾರೋ, ಅವರ ಎಲ್ಲಾ ಕಷ್ಟಗಳನ್ನು ಆಕೆ ಪರಿಹರಿಸುತ್ತಾಳೆ ಎಂದರ್ಥ.

ಈಕೆ ಕೈಯಲ್ಲಿ ಹಿಡಿರುವ ಶಂಖವನ್ನು ಪ್ರಣವ ಎನ್ನುತ್ತಾರೆ. ಅಂದರೆ, ಶಬ್ಧ ರೂಪದಲ್ಲಿ ದೇವರಲ್ಲಿ ಭಕ್ತಿ ಮಾಡುವುದು ಎಂದರ್ಥ. ಬಿಲ್ಲುಮತ್ತು ಬಾಣವನ್ನು ಶಕ್ತಿ ಎನ್ನುತ್ತಾರೆ. ಪೂರ್ತಿ ಅರಳದ ಕಮಲ ಯಶಸ್ಸಿನ ನಿಶ್ಚಿತತೆನ್ನು ಸೂಚಿಸುತ್ತದೆ. ದೇವಿಯ ಕೈಯಲ್ಲಿರುವ ಚಕ್ರವೇ ಆಜ್ಞಾ ಚಕ್ರ. ಕತ್ತಿ ಜ್ಞಾನವನ್ನು ಸೂಚಿಸುತ್ತದೆ. ಆಕೆಯ ಕೈಲ್ಲಿರುವ ತ್ರಿಶೂಲ, ಸಾತ್ವಿಕ, ರಾಜಸ್ವಿಕ, ತಾಮಸಿಕ ಗುಣಗಳ ಸಂಕೇತವಾಗಿದೆ.

ನಿಮ್ಮಲ್ಲಿ ಈ ಗುಣಗಳಿದೆಯೇ..? ಹಾಗಾದ್ರೆ ಈ ಗುಣಗಳೇ ನಿಮ್ಮ ನಾಶಕ್ಕೆ ಕಾರಣವಾಗುತ್ತದೆ.

ಮನೆಯಲ್ಲಿ ಈ ದೇವರ ಮೂರ್ತಿಗಳನ್ನು ಎಂದಿಗೂ ಇರಿಸಬೇಡಿ..

Sunil Kumarಗೆ ಆ ಶಕ್ತಿ ಇದೆಯಾ.? Rahul Gandhi ಭವಿಷ್ಯ ಹೇಗಿರುತ್ತೆ.?

- Advertisement -

Latest Posts

Don't Miss