Spiritual Story: ಹಿಂದೂಗಳಿಗೆ ರಾಮನೆಷ್ಟು ಮುಖ್ಯವೋ, ಅಷ್ಟೇ ಸೀತಾದೇವಿ ಕೂಡ ಮುಖ್ಯ. ಈಕೆ ಸಾಕ್ಷಾತ್ ಲಕ್ಷ್ಮೀ ದೇವಿಯ ಸ್ವರೂಪವಾಗಿದ್ದಳು ಎಂಬ ನಂಬಿಕೆ ಇದೆ. ಭರತ ಖಂಡದ ರಾಣಿಗೆ ಹಲವು ಹೆಸರುಗಳಿತ್ತು. ಅದರಲ್ಲಿ ಇಂದು ನಾವು ಸೀತಾದೇವಿಯ ನಾಲ್ಕು ಹೆಸರು ಮತ್ತು ಅದರ ಅರ್ಥವನ್ನು ವಿವರಿಸಲಿದ್ದೇವೆ.
ಜಾನಕಿ. ಸೀತೆ ನೇಪಾಳದವಳು. ಮೊದಲು ಭಾರತ, ನೇಪಾಳ, ಶ್ರೀಲಂಕಾ ಎಂದು ದೇಶಗಳು ವಿಭಜೆಯಾಗಿರಲಿಲ್ಲ. ಆ ಕಾಲದಲ್ಲಿ ಅಖಂಡಭಾರತವಿತ್ತು. ಆ ಸಮಯದಲ್ಲಿ ನೇಪಾಳದ ಜನಕಪುರಿಯ ರಾಜ ಜನಕರಾಜನ ಮಗಳು ಸೀತೆಯಾಗಿದ್ದಳು. ಆಕೆ ಜನಕರಾಜನ ಮಗಳಾದ ಕಾರಣ, ಆಕೆಯನ್ನು ಜಾನಕಿ ಎಂದು ಕರೆಯಲಾಗುತ್ತಿತ್ತು.
ಮೈಥಿಲಿ. ಜನಕಪುರಿಯ ಇನ್ನೊಂದು ಹೆಸರು ಮಿಥಿಲೆ, ಮಿಥಿಲಾಪುರ. ಹಾಗಾಗಿ ಅಲ್ಲಿನ ಯುವರಾಣಿಯಾಗಿದ್ದ ಸೀತೆಯನ್ನು ಮೈಥಿಲಿ, ಮಿಥಿಲಾಕುಮಾರಿ ಎಂದು ಕರೆಯಲಾಗುತ್ತಿತ್ತು.
ವೈದೇಹಿ. ಜನಕರಾದನಿಗೆ ವಿದೇಹ ಎಂಬ ಹೆಸರಿತ್ತು. ಏಕೆಂದರೆ ಇವನದ್ದು ವಿದೇಹ ಕುಲ ಎಂದು ಹೇಳಲಾಗುತ್ತದೆ. ಸೀತೆ ಇವನ ಪುತ್ರಿಯಾಗಿದ್ದ ಕಾರಣ, ಆಕೆಯನ್ನು ವೈದೇಹಿ ಎಂದು ಕರೆಯಲಾಗುತ್ತಿತ್ತು.
ಭೂಮಿಜಾ. ಸೀತೆ ಜನಕರಾಜನ ಸ್ವಂತ ಪುತ್ರಿಯಲ್ಲ. ಜನಕರಾಜನಿಗೆ ಮಕ್ಕಳಿರಲಿಲ್ಲ.ಒಮ್ಮೆ ಜನಕರಾಜ ಹೊಲದಲ್ಲಿ ಉಳುಮೆ ಮಾಡುವಾಗ, ಭೂಮಿಯಲ್ಲಿ ಹುದುಗಿದ್ದ ಸಂಪತ್ತಿನ ಬುತ್ತಿಯಲ್ಲಿ ಸಿಕ್ಕ ಕೂಸು ಸೀತೆ. ಋಷಿಮುನಿಗಳ ಸಲಹೆಯಂತೆ ಜನಕ ರಾಜ ಆಕೆಯನ್ನು ಸಾಕಿ ಸಲುಹಿ, ತನ್ನ ಮಗಳಂತೆ ಬೆಳೆಸಿದ್ದ. ಭೂಮಿಯಲ್ಲಿ ಸಿಕ್ಕ ಸೀತೆ, ಭೂತಾಯಿಯ ಮಗಳು. ಹಾಗಾಗಿ ಆಕೆಗೆ ಭೂಮಿಜಾ ಎಂಬ ಹೆಸರು ಬಂತು.